ಹೈದರಾಬಾದ್: ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ ಎಂದು ಎಷ್ಟೇ ಹೇಳಿದರೂ ತಡೆಯಲು ಮಾತ್ರ ಆಗುತ್ತಿಲ್ಲ.ಆದರೆ, ಆಲೋಚನೆ ಛಲವೊಂದಿದ್ದರೆ ಪ್ಲಾಸ್ಟಿಕ್ ನಿಂದ ಏನಾದರೂ ಮಾಡಬಹುದು ಎಂಬುವುದನ್ನು ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷೆ ಹಾಗೂ ಮಹಿಳಾ ಪಿಡಿಒ ಪಲ್ಲವಿ ಸಾಬೀತುಪಡಿಸಿದ್ದಾರೆ.
ಹೌದು , ಈ ಗ್ರಾಮದಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಅದೇ ಪ್ಲಾಸ್ಟಿಕ ಬಾಟಲಿಗಳಲ್ಲಿ ಅಲಂಕಾರಗಳನ್ನು ಸಹ ಮಾಡಲಾಯಿತು. ಅವರ ಐಡಿಯಾ ಸಕತ್ ವರ್ಕೌಟ್ ಆಗಿದೆ ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರು. ಈ ಪ್ಲಾಸ್ಟಿಕ್ ಬಾಟಲ್ ಬಸ್ ನಿಲ್ದಾಣದಲ್ಲಿ ಜನರು ಸೆಲ್ಪಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದಾರೆ.
ಬಸ್ ನಿಲ್ದಾಣ ಇರುವುದು ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಮಲಾಪುರ ಮಂಡಲದ ಉಪ್ಪಲಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಪ್ಲಾಸ್ಟಿಕ ಹಬ್ ಎಂಬ ಹೆಸರಿನ ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಲಾದ ಹೊಸ ಬಸ್ ನಿಲ್ದಾಣವನ್ನು ತೆರೆಯಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪಂಚಾಯಿತಿ ಸಿಬ್ಬಂದಿಯೇ ಪ್ರತ್ಯೇಕ ಶೆಡ್‌ಗೆ ಸ್ಥಳಾಂತರಿಸುತ್ತಿದ್ದಾರೆ. ಈ ಬಾಟಲಿಗಳನ್ನು ಗಮನಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪಲ್ಲವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮಾ ಅವರಿಗೆ ಐಡಿಯಾ ನೀಡಿದ್ದರು. ಪ್ಲಾಸ್ಟಿಕ್ ಬಾಟಲಿಗಳಿಂದ ಶೆಡ್ ನಿರ್ಮಿಸುವುದು ಹೇಗೆ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಪೊಲೀಸರ ಮೇಲೆ ಹಲ್ಲೆ ಆರೋಪ : ವೈಎಸ್ಆರ್ಟಿಪಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಬಂಧನ
ಇದರೊಂದಿಗೆ ಅಧ್ಯಕ್ಷೆ ಗ್ರಾಮ ಪಂಚಾಯಿತಿಯ ಸಿಬ್ಬಂದಿಯ ಸಹಕಾರದಿಂದ ಗ್ರಾಮದಲ್ಲಿ ಸಂಗ್ರಹವಾದ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ನಾಲ್ಕೈದು ದಿನಗಳಲ್ಲಿ ಸಂಗ್ರಹಿಸಲು ಪ್ಲಾಸ್ಟಿಕ್ ಹಬ್ ಹೆಸರಿನಲ್ಲಿ ವಿನೂತನವಾಗಿ ನಿರ್ಮಿಸಲಾಗಿದೆ. ಬಸ್ ನಿಲ್ದಾಣದ ಸುತ್ತಮುತ್ತ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹುಲ್ಲಿನ ಹೂವಿನ ಗಿಡಗಳನ್ನೂ ಬಾಟಲಿಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಅದೇ ಬಸ್ ನಿಲ್ದಾಣದಲ್ಲಿ ಬಳಕೆಯಾಗದ ಟೈರ್‌ಗಳನ್ನು ತಂದು ಬಣ್ಣ ಬಳಿದು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ಪ್ಲಾಸ್ಟಿಕ ಬಾಟಲಿಗಳಿಂದ ಸುಂದರವಾಗಿ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಪ್ರಯಾಣಿಕರು ಮತ್ತು ಸ್ಥಳೀಯರು ಸೆಲ್ಫಿ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ಅನ್ನು ಎಸೆಯುವ ಬದಲು ಅಲಂಕಾರಿಕ ವಸ್ತುವಾಗಿ ಬಳಸಿದರೆ ಪರಿಸರಕ್ಕೆ ಹಾನಿಯಾಗುವ ಅಪಾಯ ತಪ್ಪುತ್ತದೆ.