ಬೆಳಗಾವಿ| ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಶಾಸಕ!

ಬೆಳಗಾವಿ: ನಗರದ ಕುಂದಾನಗರಿಗೆ 1924ರಲ್ಲಿ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದೂ, ಅದರ ಶತಮಾನೋತ್ಸವ ಪ್ರಯುಕ್ತ ಅಲ್ಲಿ ಗಾಂಧಿ ಭಾರತ ಸಮಾವೇಶ ನಡೆಸಲಾಗುತ್ತಿದೆ. ಇಂದು ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಹೆಸರಿನಡಿ ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ಈ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಶಾಸಕರೊಬ್ಬರು ಪ್ರತ್ಯಕ್ಷರಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಹೆಸರಿನಲ್ಲಿ ಕುಂದಾನಗರಿಯಲ್ಲಿ ಗಾಂಧಿ ಭಾರತ ಸಮಾವೇಶ ನಡೆಸಲಾಗುತ್ತಿದೆ. ಇದೀಗ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಕೈ ನಾಯಕರ ದಂಡು ಬಂದಿಳಿದಿದೆ. ಕಾಂಗ್ರೆಸ್ ನಾಯಕರ ಹಾಗೂ ಸಚಿವರ ಜೊತೆಗೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಆಗಮಿಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಸಚಿವರಾದ ದಿನೇಶ ಗುಂಡೂರಾವ್, ಕೆ ಎನ್ ರಾಜಣ್ಣ ಜೊತೆಗೆ ಆಗಮಿಸಿರು ಎಸ್ ಟಿ ಸೋಮಶೇಖರ್ ಅವರು, ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರಾ? ಎನ್ನುವುದು ಇದೀಗ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಬೆಂಗಳೂರು | ಬಸ್ ಗೆ ಕಾಯುತ್ತಿದ್ದ ಮಹಿಳೆ ಮೇಲೆ `ಸಾಮೂಹಿಕ ಅತ್ಯಾಚಾರ’

ಈ ಬಗ್ಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಮಾತನಾಡಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಕಾರಣ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಕಾರ್ಯಕ್ರಮ ಆಯೋಜಿಸಲಾಗಿದೆ. ಗಾಂಧೀಜಿ ಅವರ ಚಿಂತನೆ ಆದರ್ಶ ಪಾಲಿಸಬೇಕಿದೆ ಎಂದು ಹೇಳಿದರು.

ಈ ವೇಳೆ ಸಚಿವರ ಜೊತೆಗೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಆಗಮಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಕಾರ್ಯಕ್ರಮ‌ ಪಕ್ಷಾತೀತವಾದಂತದ್ದು, ಎಲ್ಲ‌ ಪಕ್ಷದವರಿಗೂ ಆಹ್ವಾನಿಸಲಾಗಿದೆ. ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರಿಗೂ ಆಹ್ವಾನಿಸಲಾಗಿದೆ. ಎಲ್ಲರೂ‌ ಭಾಗವಹಿಸಬಹುದು ಎಂದು ಹೇಳಿದರು.

ಬೆಳಗಾವಿಯ ಸಾಂಬ್ರಾ ಬಳಿಯ ಏರ್ಪೋರ್ಟ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ. ಭದ್ರತೆ ದೃಷ್ಟಿಯಿಂದ ಅತಿಥಿ ಆಗಮನದ ಗೇಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ನಿಂತಿದ್ದರು. ಈ ವೇಳೆ ಸಚಿವರು ಬರುವುದನ್ನ ಮನಗಂಡ ಪೊಲೀಸರು ಕೈ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನ ಆಗಮನದ ಗೇಟ್ ಬಳಿಯಿಂದ ಹಿಂದೆ ಹೋಗಲು‌ ಹೇಳಿದ್ದಾರೆ. ಈ‌ ವೇಳೆ ಪೊಲೀಸರ‌ ಹಾಗೂ ಕಾರ್ಯಕರ್ತರ‌ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ನೋಡಿ: ಮಹಾತ್ಮ ಗಾಂಧೀಜಿಯವರ ಪುತ್ಥಳಿ ಅನಾವರಣ ಸಮಾರಂಭ ಸ್ಥಳ: ಸುವರ್ಣ ವಿಧಾನ ಸೌಧ ಆವರಣ, ಬೆಳಗಾವಿ

Donate Janashakthi Media

Leave a Reply

Your email address will not be published. Required fields are marked *