ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು ಮೃತಪಟ್ಟ 5 ವರ್ಷದ ಮಗು

ಬೆಂಗಳೂರು: ಕಾಡುಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಐದು ವರ್ಷದ ಮಗು ಬಿದ್ದು ಮೃತಪಟ್ಟಿದೆ.

ಸುಹಾಸ್ ಗೌಡ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಪೊಲೀಸರು ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲೀಕ ಹಾಗೂ ಉಸ್ತುವಾರಿ ವಹಿಸಿಕೊಂಡಿದ್ದ ಸುನಿಲ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಾಮ್ರಾಜ್ಯಶಾಹಿ ಪ್ರಾಬಲ್ಯದ ಮರುಹೇರಿಕೆಗೆ ಎರಡು ಅಸ್ತ್ರಗಳು: ನವ-ಉದಾರವಾದಿ ಆಳ್ವಿಕೆಯ ಹೇರಿಕೆ ಮತ್ತು ಯುದ್ಧಗಳಿಗೆ ಉತ್ತೇಜನೆ-ಸಮರ್ಥನೆ

ಕನ್ನಮಂಗಲ ಗ್ರಾಮ ಪಂಚಾಯಿತಿ ಎದುರು ಮಿಲ್ಕ್ ಡೇರಿ ಕಟ್ಟಡ ಕಾಮಗಾರಿ‌ ನಡೆಯುತ್ತಿದ್ದು, ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು 5 ಅಡಿ ಆಳ ಹಾಗೂ ಅಗಲದ ಗುಂಡಿ ತೋಡಲಾಗಿತ್ತು.

ಮಳೆಯಿಂದ ಗುಂಡಿಯಲ್ಲಿ ನೀರು ತುಂಬಿತ್ತು. ಗುಂಡಿ ಸುತ್ತಮುತ್ತಲು ಸುರಕ್ಷಿತ ಕ್ರಮ ಅನುಸರಿಸುವಲ್ಲಿ ಮಾಲೀಕರು ನಿರ್ಲಕ್ಷ್ಯ ತೋರಿದ್ದಾರೆ. ಆಟವಾಡುತ್ತಿದ್ದ ವೇಳೆ ಮಗು ಗುಂಡಿಗೆ ಬಿದ್ದು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ನೋಡಿ: ಜನ ಕೇಂದ್ರಿತ ಅಭಿವೃದ್ಧಿ ಇಂದಿನ ತುರ್ತು – ಡಾ. ಚಂದ್ರ ಪೂಜಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *