ನವದೆಹಲಿ: ದೇಶದ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅವರು ಗುರುವಾರ ನಡೆದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ)ದ ಚುನಾವಣೆ ಗೆದ್ದು, ಫೆಡರೇಶನ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಿಗೆ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದು, ಮಹಿಳಾ ಕುಸ್ತಿಪಟುಗಳಿಗೆ ಮತ್ತೆ ಕಿರುಕುಳ ಅನುಭವಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕುಸ್ತಿಪಟು ಸಂಗೀತಾ ಫೋಗಟ್ ಹೇಳಿದ್ದಾರೆ.
ಉತ್ತರ ಪ್ರದೆಶದ ವಾರಣಾಸಿಯವರಾದ ಸಂಜಯ್ ಅವರು ಯುಪಿ ರೆಸ್ಲಿಂಗ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿದ್ದಾರೆ. ಡಬ್ಲ್ಯುಎಫ್ಐ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಅವರ ವಿರುದ್ಧ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಅನಿತಾ ಶೆರಾನ್ ವಿರುದ್ಧ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಅನಿತಾ ಶೆರಾನ್ ಅವರು ಏಳು ಮತಗಳನ್ನು ಪಡೆದಿದ್ದು, ಅವರ ವಿರುದ್ಧ ಸಂಜಯ್ 40 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ದೇವೇಗೌಡ ಕುಟುಂಬ – ಮೋದಿ ಭೇಟಿ: ಬಿಜೆಪಿ-ಜೆಡಿ(ಎಸ್) ಸೀಟು ಹಂಚಿಕೆ ಅಂತಿಮ?
“ಡಬ್ಲ್ಯುಎಫ್ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಈ ಹೋರಾಟಕ್ಕೆ ನಾವು ಸಾಕಷ್ಟು ಧೈರ್ಯ ಮಾಡಿದ್ದೇವೆ. ಆದರೆ ಇಂದು ಅವರ ಬಲಗೈ (ಸಂಜಯ್ ಸಿಂಗ್) ಹೊಸ ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ನಾವು ಒತ್ತಾಯಿಸಿದ್ದೆವು, ಆದರೆ ಅದು ಈಡೇರಿಲ್ಲ ಎಂದು ಮಲಿಕ್ ಹೇಳಿದ್ದಾರೆ.
मैंने देश के लिए जितने भी पुरस्कार जीते हैं आप सब के आशीर्वाद से जीते हैं , मैं आप सभी देशवाशियों की हमेशा आभारी रहुंगी। 🇮🇳
कुश्ती को अलविदा ।🙏 pic.twitter.com/yyO4lG59rL— Sakshee Malikkh (@SakshiMalik) December 21, 2023
ಕುಸ್ತಿಪಟುಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಸಂಗೀತಾ ಫೋಗಟ್ ಹೇಳಿದ್ದು, “ದೇಶದಲ್ಲಿ ಇಂತಹವರು ಇಂತಹ ಹುದ್ದೆಗಳಿಗೆ ಆಯ್ಕೆಯಾಗುತ್ತಿರುವುದು ದುರದೃಷ್ಟಕರ. ಈಗ ಮತ್ತೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತದೆ. ದೌರ್ಜನ್ಯದ ವಿರುದ್ಧ ಹೋರಾಟ ಮಾಡಿದರೂ ಬದಲಾವಣೆ ತರಲು ಸಾಧ್ಯವಾಗದಿರುವುದು ಬೇಸರದ ಸಂಗತಿ. ನಮ್ಮ ದೇಶದಲ್ಲಿ ನ್ಯಾಯ ಸಿಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಮಹಿಳಾ ಕುಸ್ತಿಪಟುಗಳು ಈಗ ಶೋಷಣೆಯನ್ನು ಎದುರಿಸಬೇಕಾಗುತ್ತದೆ ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.
ಇದನ್ನೂ ಓದಿ: ಡೈನೋಸಾರ್ನ ಮೊಟ್ಟೆಯ ಪಳೆಯುಳಿಕೆಯನ್ನು ಕುಲದೇವರುಗಳೆಂದು ಪೂಜೆಸುತ್ತಿದ್ದ ಗ್ರಾಮಸ್ಥರು
ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಆರೋಪಿಸಿ ನಡೆಸಲಾಗಿದ್ದ ಕುಸ್ತಿಪಟುಗಳ ಬೃಹತ್ ಪ್ರತಿಭಟನೆಯನ್ನು ಉಲ್ಲೇಖಿಸಿದ ಕುಸ್ತಿಪಟು ಬಜರಂಗ್ ಪುನಿಯಾ, ಸರ್ಕಾರವು ತನ್ನ ಭರವಸೆಯನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ. “ನಾವು ಸತ್ಯಕ್ಕಾಗಿ ಮತ್ತು ಮಹಿಳೆಯರಿಗಾಗಿ ಹೋರಾಡುತ್ತಿದ್ದೆವು. ನಾವು ಸಕ್ರಿಯ ಕ್ರೀಡಾಪಟುಗಳಾಗಿದ್ದೆವು ಮತ್ತು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆ. ಹೆಣ್ಣುಮಕ್ಕಳಿಗೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುವುದಿಲ್ಲ ಏಕೆಂದರೆ ಈ ವ್ಯವಸ್ಥೆಯು ಕೆಲಸ ಮಾಡಿದ ರೀತಿಯಲ್ಲಿ ಹೆಣ್ಣುಮಕ್ಕಳನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ನ್ಯಾಯಾಂಗದ ಮೇಲೆ ನಮಗೆ ನಂಬಿಕೆ ಇದೆ” ಎಂದು ಹೇಳಿದ್ದಾರೆ.
ತನ್ನ ವಿಜಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ಸಿಂಗ್, ಇದು ಕಳೆದ 7-8 ತಿಂಗಳುಗಳಲ್ಲಿ ಬಳಲುತ್ತಿರುವ ದೇಶದ ಸಾವಿರಾರು ಕುಸ್ತಿಪಟುಗಳಿಗೆ ಸಿಕ್ಕ ವಿಜಯವಾಗಿದೆ ಎಂದು ಹೇಳಿದ್ದಾರೆ. “ನಾವು ರಾಜಕೀಯಕ್ಕೆ ರಾಜಕೀಯ ಮತ್ತು ಕುಸ್ತಿಯೊಂದಿಗೆ ಕುಸ್ತಿಯ ಮೂಲಕ ಪ್ರತಿಕ್ರಿಯಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಕುಸ್ತಿಪಟುಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಸ್ತಿಪಟುಗಳು ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು. ಅದಾಗ್ಯೂ, ಮೇ 28 ರಂದು, ದೆಹಲಿ ಪೊಲೀಸರು ಅವರನ್ನು ಜಂತರ್ ಮಂತರ್ನಿಂದ ಬಂಧಿಸಿದ್ದರು.
ವಿಡಿಯೊ ನೋಡಿ: ಪೂಜಾ ಸ್ಥಳ ಕಾಯ್ದೆ ಜಾರಿಯಾಗಿದ್ದರೂ ಸಹ ಗ್ಯಾನವಾಪಿ,ಶಾಹಿ ಮಸೀದಿಯ ಸಮೀಕ್ಷೆಗೆ ಅನುಮತಿ ಕೊಟ್ಟಿದ್ದು ನ್ಯಾಯಬದ್ಧವೇ?