“ಕಾರ್ಪೊರೇಟ್-ಕೋಮುವಾದಿ ಕೂಟವನ್ನು ಅಧಿಕಾರದಿಂದ ಕಿತ್ತೊಗೆಯಬೇಕೆಂದ ಕಿಸಾನ್‍-ಮಜ್ದೂರ್‌ ಮಹಾಪಡಾವ್”

ರೈತರು, ಕಾರ್ಮಿಕರಿಗೆ ಎಸ್‍ಕೆಎಂ ಮತ್ತು ಕೆಂದ್ರೀಯ ಕಾರ್ಮಿಕ ಸಂಘಗಳ ಅಭಿನಂದನೆ

ಜನರನ್ನು ಉಳಿಸಲು ಮತ್ತು ರಾಷ್ಟ್ರವನ್ನು ಉಳಿಸಲು ಕಾರ್ಪೊರೇಟ್-ಕೋಮುವಾದಿ ಕೂಟವನ್ನು ಅಧಿಕಾರದಿಂದ ಹೊರಹಾಕಬೇಕೆಂಬ ಸ್ಪಷ್ಟವಾದ  ಕರೆಯೊಂದಿಗೆ ನವಂಬರ್‌ 26ರಿಂದ 28ರ ವರೆಗೆ ನಡೆದ ರೈತರು ಮತ್ತು ಕಾರ್ಮಿಕರ ಬೃಹತ್, ಶಾಂತಿಯುತ ಮಹಾಪಡಾವ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದಿರುವ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯ ಜಂಟಿ ಹೇಳಿಕೆ  ದೇಶದ ಕಾರ್ಮಿಕರು ಮತ್ತು ರೈತರನ್ನು ಇದಕ್ಕಾಗಿ ಅಭಿನಂದಿಸಿದೆ. ಕೋಮುವಾದಿ 
ದೇಶದಾದ್ಯಂತ ರೈತರು ಮತ್ತು ಕಾರ್ಮಿಕರ ಬೇಡಿಕೆಗಳ ಮೇಲೆ ಹೆಚ್ಚಿನ  ದೃಢನಿರ್ಧಾರದ, ಬೃಹತ್, ಜಂಟಿ ಹೋರಾಟಗಳನ್ನು ನಡೆಸಲಾಗುವುದು ಎಂದು ಜಂಟಿ ಹೇಳಿಕೆ ಕೇಂದ್ರ ಸರಕಾರವನ್ನು ಮತ್ತು ಆಳುವವರನ್ನು ಎಚ್ಚರಿಸಿದೆ. 

ದೇಶದಾದ್ಯಂತ ಬೃಹತ್ ಪ್ರಮಾಣದಲ್ಲಿ ನಡೆದ ಮಹಾಪಡಾವನ್ನು ಅಂಡಮಾನ್ ನಿಕೋಬಾರ್‌ನ ಪೋರ್ಟ್ ಬ್ಲೇರ್‌, ಜಮ್ಮು ಮತ್ತು ತ್ರಿಪುರಾದ ಅಗರ್ತಲಾಕ್ಕೆ 28 ನವೆಂಬರ್ 2023 ರಂದು ವಿಸ್ತರಿಸಲಾಯಿತು. ಚುನಾವಣೆಗೆ ಒಳಪಟ್ಟ ರಾಜ್ಯಗಳು ಮತ್ತು ಕೆಲವು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳಲ್ಲಿ ಮಹಾಪಡಾವ್‍ ನಡೆದಿರುವುದು  ಅದರ ರಾಜಕೀಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಕಿಸಾನ್ ಮತ್ತು ಕಾರ್ಮಿಕ ಆಂದೋಲನಗಳ ಮುಖಂಡರಲ್ಲದೆ, ಅನೇಕ ಬುದ್ಧಿಜೀವಿಗಳು, ಕಲಾವಿದರು ಮತ್ತು ಗಣ್ಯ ವ್ಯಕ್ತಿಗಳು ಸಾಮೂಹಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಅಭಿನಂದಿಸಿದರು.

ಅನೇಕ ರಾಜ್ಯಗಳಲ್ಲಿ, ಇತರ ವಿಭಾಗಗಳ ಜನರು ಮತ್ತು ಅವರ ಸಂಘಟನೆಗಳು ಮಹಾಪಡಾವ್‌ನಲ್ಲಿ ಭಾಗಿಯಾದವು. ಅನೇಕ ರಾಜ್ಯಗಳಲ್ಲಿ ‘ಕಿಸಾನ್ ಮಜ್ದೂರ್ ಮಹಾಪಡಾವ್’  ಒಂದು ಜನಾಂದೋಲನವಾಗಿ ಮಾರ್ಪಟ್ಟಿದೆ.

‘ರಾಜಭವನ’ಗಳ  ಕಡೆಗೆ ಮೆರವಣಿಗೆ ನಡೆಸಿ ಆಯಾ ರಾಜ್ಯಪಾಲರಿಗೆ ಜ್ಞಾಪಕ ಪತ್ರ ಮತ್ತು ಹಕ್ಕೊತ್ತಾಯಗಳ ಚಾರ್ಟರ್ ಸಲ್ಲಿಸುವುದರೊಂದಿಗೆ ಮಹಾಪಡಾವ್‍ ಹೋರಾಟವನ್ನು ಮುಕ್ತಾಯಗೊಳಿಸಲಾಗಿದೆ. ಹತ್ತಾರು ಸಾವಿರ ರೈತರು ಮತ್ತು ಕಾರ್ಮಿಕರು ಮಹಾಪಡಾವ್‌ಗೆ ಸೇರಿದರೂ, ಹೋರಾಟವು ಅತ್ಯುನ್ನತ ಸ್ವಯಂ ಶಿಸ್ತು ಮತ್ತು ದೃಢನಿರ್ಧಾರದೊಂದಿಗೆ ದೇಶದಾದ್ಯಂತ ಶಾಂತಿಯುತವಾಗಿ ನಡೆದಿದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೇಂದ್ರ ಕಾರ್ಮಿಕ ಸಂಘಗಳು / ಒಕ್ಕೂಟಗಳ ಜಂಟಿ ವೇದಿಕೆ  24 ಆಗಸ್ಟ್  ರಂದು ನಡೆಸಿದ ಜಂಟಿ ಸಮಾವೇಶ  ಮೂರು ದಿನಗಳ ಈ ಮಹಾಪಡಾವ್‍ಗೆ ಕರೆ ನೀಡಿತ್ತು. ಎಸ್‍ಕೆಎಂ ಮತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಅಖಿಲ ಭಾರತ ನಾಯಕರು ವಿವಿಧ ರಾಜಧಾನಿ ನಗರಗಳಲ್ಲಿ ಮಹಾಪಡಾವ್‌ನಲ್ಲಿ ಪಾಲ್ಗೊಂಡರು.

ಆಗಸ್ಟ್ 24 ರ ಕಾರ್ಮಿಕರು ಮತ್ತು ರೈತರ ಅಖಿಲ ಭಾರತ ಸಮಾವೇಶದಲ್ಲಿ ಅಂಗೀಕರಿಸಿದ ಘೋಷಣೆಯನ್ನು ಜನರ ಬಳಿಗೊಯ್ಯಲು ದೇಶಾದ್ಯಂತ ನಡೆಸಿದ ಬೃಹತ್ ಅಭಿಯಾನದ ಕೊನೆಯಲ್ಲಿ ಈ ಮಹಾಪಡಾವ್‍ ಕಾರ್ಯಕ್ರಮ ನಡೆದಿದೆ. ಆ ಘೋಷಣೆಯು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಕಾರ್ಪೊರೇಟ್-ಕೋಮುವಾದಿ ಕೂಟದ ವಿನಾಶಕಾರಿ ನೀತಿಗಳ ರಾಷ್ಟ್ರವಿರೋಧಿ ಆಳ್ವಿಕೆಯೇ ಕಾರ್ಮಿಕರು ಮತ್ತು ರೈತರ ನಿಜವಾದ ಶತ್ರು ಮತ್ತು ರಾಷ್ಟ್ರದ ಸಂಕಟಗಳು, ಮತ್ತು ಜನಗಳ ದುಃಖಗಳಿಗೆ ಕಾರಣ ಎಂದು ಗುರುತಿಸಿತ್ತತ್ತು. ಈ ಆಳುವ ಕೂಟ ತಮ್ಮ ಕಾರ್ಪೊರೇಟ್ ಪರ ನೀತಿಗಳನ್ನು ಬದಲಾಯಿಸುತ್ತದೆ ಎಂದು ನಿರೀಕ್ಷಿಸಸಲು ಸಾಧ್ಯವಿಲ್ಲ, ಹೀಗಾಗಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಆ ಘೋಷಣೆ ಕರೆ ಕೊಟ್ಟಿತ್ತು.

ಇದನ್ನೂ ಓದಿ: ಖಾಸಗಿ ಮೆಡಿಕಲ್‌ ಲಾಬಿ ಆಟಕ್ಕೆ ವಿದ್ಯಾರ್ಥಿ ಬಲಿ

ಕಾರ್ಮಿಕ ಮತ್ತು ರೈತರ ಜಂಟಿ ಮತ್ತು ಸಂಯೋಜಿತ ಹೋರಾಟಗಳು ಎಷ್ಟು ಎತ್ತರಕ್ಕೆ ಬಳೆಯಬೇಕೆಂದರೆ, ಕೇಂದ್ರದ ಅಥವಾ ರಾಜ್ಯಗಳ ಯಾವುದೇ ಸರ್ಕಾರವು ಕಾರ್ಮಿಕ-ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಹೇರುವ  ಧೈರ್ಯ ಮಾಡಬಾರದು. ಕಾರ್ಮಿಕ ವರ್ಗ ಮತ್ತು ರೈತರ ಚಳವಳಿಯು ಈ ಕಾರ್ಯವನ್ನು ಜನಸಾಮಾನ್ಯರೊಂದಿಗೆ ನೆರವೇರಿಸುತ್ತವೆ ಎಂದು ಈ ಜಂಟಿ ಹೇಳಿಕೆ ವಿಶ್ವಾಸ ವ್ಯಕ್ತಪಡಿಸಿದೆ.

ನವ ಉದಾರವಾದಿ ನೀತಿಗಳ ವ್ಯವಸ್ಥಾಗತ ಬಿಕ್ಕಟ್ಟಿನ ಪಿಡುಗಿನಿಂದ ರಾಷ್ಟ್ರೀಯ ಅರ್ಥವ್ಯವಸ್ಥೆಯನ್ನು ರಕ್ಷಿಸಬೇಕು, ಶಾಸನಬದ್ಧ ಕನಿಷ್ಠ ವೇತನವನ್ನು ಹೆಚ್ಚಿಸುವುದು, ಸರ್ಕಾರದ ನಿಧಿಯೊಂದಿಗೆ ಸಾಮಾಜಿಕ ಭದ್ರತಾ ಕ್ರಮಗಳನ್ನು ವಿಸ್ತರಿಸುವುದು ಮತ್ತು ಸಾರ್ವತ್ರಿಕಗೊಳಿಸುವುದು ಮತ್ತು ಕೃಷಿ ಲಾಗುವಾಡುಗಳು ಸೇರಿದಂತೆ ರೈತರಿಗೆ ಸಬ್ಸಿಡಿ, ಸರ್ಕಾರಿ ಸ್ವಾಮ್ಯದ ಮಂಡಿಗಳು, ಸೂಕ್ತವಾದ ಎಂಎಸ್‍ಪಿ ಇತ್ಯಾದಿ ರೈತ ಸಮುದಾಯದ ಸಂಕಷ್ಟವನ್ನು ಪರಿಹರಿಸುವ ಕ್ರಮಗಳ ಮೂಲಕ ನಮ್ಮ ರಾಷ್ಟ್ರೀಯ ಸಂಪತ್ತನ್ನು ಸೃಷ್ಟಿಸುವ ಮತ್ತು ಅರ್ಥವ್ಯವಸ್ಥೆಯನ್ನು ನಡೆಸುತ್ತಿರುವ ಜನಸಾಮಾನ್ಯರ ಕೈಗಳಲ್ಲಿ ಹೆಚ್ಚಿನ ಹಣವನ್ನು ನೀಡಿ ಇದನ್ನು ಮಾಡಬೇಕು ಎಂದು ರೈತರು ಮತ್ತು ಕಾರ್ಮಿಕರು ಆಗ್ರಹ ಪಡಿಸಿದ್ದಾರೆ. ಕಾರ್ಪೊರೇಟ್‌ಗಳು, ಶ್ರೀಮಂತರು ಮತ್ತು ಅತಿ ಶ್ರೀಮಂತರ ಮೇಲಿನ ತೆರಿಗೆಗಳನ್ನು ಹೆಚ್ಚಿಸುವ ಮೂಲಕ, ಸಂಪತ್ತು ತೆರಿಗೆ ಮತ್ತು ಉತ್ತರಾಧಿಕಾರ ತೆರಿಗೆಯನ್ನು ಮರುಸ್ಥಾಪಿಸುವ ಮೂಲಕ ಇದನ್ನು ಮಾಡಬಹುದು ಎಂದು ಜಂಟಿ ಹೇಳಿಕೆ ಅಭಿಪ್ರಾಯ ಪಟ್ಟಿದೆ.

ಕೇಂದ್ರದ ಸರ್ಕಾರದ ಕ್ರಮಗಳು ನಮ್ಮ ರಾಷ್ಟ್ರದ ಒಕ್ಕೂಟ ರಚನೆಗೆ ವಿರುದ್ಧವಾಗಿವೆ ಎಂದು ಮಹಾಪಡಾವ್ ಆರೋಪಿಸಿದೆ; ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರು, ಬಹಿರಂಗವಾಗಿಯೇ ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದಾರೆ, ಚುನಾಯಿತ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಲು ಕಷ್ಟವಾಗುವಂತೆ ಮಾಡುತ್ತಿದ್ದಾರೆ, ಅನೇಕ ಚುನಾಯಿತ ರಾಜ್ಯ ಸರಕಾರಗಳನ್ನು  ಅವರ ಪಕ್ಷದ ಸರ್ಕಾರಗಳನ್ನು ಸ್ಥಾಪಿಸಲು ಉರುಳಿಸಲಾಗುತ್ತಿದೆ, ಕೇಂದ್ರದಲ್ಲಿ ಸಂಗ್ರಹಿಸಲಾದ ಜಿಎಸ್‌ಟಿ ಹಣವನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ, ಆದ್ದರಿಂದಾಗಿ ಅವು  ತಮ್ಮ ನ್ಯಾಯಯುತ ಬಾಕಿಗಳನ್ನು ಪಡೆಯಲು ಸುಪ್ರೀಂ ಕೋರ್ಟ್‌ಗೆ ಹೋಗಬೇಕಾಗಿ ಬರುತ್ತಿದೆ! ಕೇಂದ್ರದಲ್ಲಿ ಆಳುತ್ತಿರುವ ಪಕ್ಷವು ಸುಪ್ರೀಂ ಕೋರ್ಟ್ ಆದೇಶಗಳನ್ನು (ಉದಾ: ರಾಷ್ಟ್ರೀಯ ರಾಜಧಾನಿ  ಸೇವಾ ವಿಷಯದ ಪ್ರಕರಣ) ಬುಡಮೇಲು ಮಾಡಲು ತನ್ನ ಪಾಶವೀ ಬಹುಮತವನ್ನು ಬಳಸುತ್ತಿದೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ನಿರ್ಧರಿಸುವ 3 ಸದಸ್ಯರ ಸಮಿತಿಯನ್ನು ಪುನರ್ರಚಿಸಿ, ಅದರಲ್ಲಿ ಮುಖ್ಯ ನ್ಯಾಯಾಧೀಶರನ್ನು ತೆಗೆದು, ಆ ಸ್ಥಾನದಲ್ಲಿ  ಆಳುವ ಪಕ್ಷದ ಒಬ್ಬ ಮಂತ್ರಿ ಯನ್ನು ಕೂರಿಸ ಹೊರಟಿದ್ದಾರೆ.

ಇದನ್ನೂ ಓದಿ: ಸರ್ಕಾರದ ಅಸಂಬದ್ಧ ಧೋರಣೆಗಳಿಂದ ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು

ಲೇಖಕರು, ಬುದ್ಧಿಜೀವಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿರೋಧ  ಪಕ್ಷಗಳ ಸದಸ್ಯರ ಮೇಲೆ ಅವರು ಕೇವಲ ಈ ಸರ್ಕಾರವನ್ನು ಟೀಕಿಸಿರುವ ಕ್ಷುಲ್ಲಕ ಆಧಾರದ ಮೇಲೆ ಇಡಿ, ಸಿಬಿಐ, ಎನ್‌ಐಎಯಂತಹ ಸರ್ಕಾರಿ ಏಜೆನ್ಸಿಗಳ ಸಹಾಯದಿಂದ ಮತ್ತು ಯುಎಪಿಎ ಮತ್ತು ದೇಶದ್ರೋಹ ಕಾಯ್ದೆಯಂತಹ ಕರಾಳ ಕಾನೂನುಗಳ ದುರುಪಯೋಗದ ಮೂಲಕ ಗುರಿಯಿಡಲಾಗುತ್ತಿದೆ.

ವಿಡಿಯೋ ನೋಡಿ: ದುಡಿಯುವ ಜನರ ಐಕ್ಯ ಹೋರಾಟ ರೂಪಗೊಂಡಿದ್ದು ಹೇಗೆ? – ಎಚ್.ಆರ್. ನವೀನ್ ಕುಮಾರ್ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *