ಬೆಂಗಳೂರು: ಬಸವಾದಿ ಶರಣರ ತತ್ವಗಳ ಮೇಲೆ ಮುಂದುವರಿದ ದಾಳಿಯನ್ನು ವಿರೋಧಿಸಿ ಅವುಗಳನ್ನು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಎದುರಿಸಲು ಕರ್ನಾಟಕ ಪ್ರಜ್ಞಾವಂತರ ವೇದಿಕೆ ತ್ರೀರ್ಮಾನಿಸಿದೆ. ಶರಣ ಸಂಸ್ಕೃತಿ
ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಕರ್ನಾಟಕ ಪ್ರಜ್ಞಾವಂತರ ಅನುಭವ ಮಂಟಪ’ ವೇದಿಕೆಯಲ್ಲಿ ಚಿಂತಕರಾದ ಡಾ.ಸಿದ್ಧನಗೌಡ ಪಾಟೀಲ್ ರವರು ಮಾತನಾಡಿ ಅರ್ಥ ಮದ, ಅಹಂಕಾರ ಮದ, ಕುಲ ಮದ ವನ್ನು ಬಿಡಬೇಕೆಂದು ಚನ್ನ ಬಸವಣ್ಣನವರು ಹೇಳಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಕಾರ್ಪೋರೇಟ್ ಅಹಂಕಾರ, ಭಿನ್ನ ಅಭಿಪ್ರಾಯಗಳನ್ನು ಸಹಿಸುವುದಿಲ್ಲವೆನ್ನುವ ಕೋಮುವಾದಿಗಳ ರಾಜಕೀಯ ಅಹಂಕಾರ, ಈ ಎರಡನ್ನೂ ರಕ್ಷಿಸಿಕೊಳ್ಳಲು ಕುಲವನ್ನು ಮಧ್ಯೆ ತರುತ್ತಿದ್ದಾರೆ. ಜಾತಿ ಶ್ರೇಷ್ಠತೆಯ ಹಿನ್ನೆಲೆಯಲ್ಲಿ ಇದನ್ನು ಮಾಡುತ್ತಿದ್ದಾರೆ ಎಂದರು.
ಇದರ ವಿರುದ್ಧ ಪ್ರಜ್ಞಾವಂತರ ಅನುಭವ ಮಂಟಪ ನಿಲ್ಲಲಿದೆ. ಸಮಕಾಲೀನ ಸಂದರ್ಭದಲ್ಲಿ ಶರಣ ಸಂಸ್ಕೃತಿ ಆಂದೋಲನವನ್ನು ಮಾಡಬೇಕಾಗಿದೆ. ಪ್ರತಿರೋಧ ಹಾಗೂ ಪರ್ಯಾಯವನ್ನು ಕಟ್ಟುವ ದಿಕ್ಕಿನಲ್ಲಿ ನಮ್ಮಆಂದೋಲನ ಮುನ್ನಡೆಯಬೇಕಿದೆ ಎಂದರು.
ಕರ್ನಾಟಕದ ಘನತೆ ಮತ್ತು ಅಸ್ಮಿತೆಯನ್ನು ನಾಶಪಡಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಇದೇ ಕಾರಣಕ್ಕೆ ಎಂ.ಎಂ ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಮಾಡಲಾಗಿತ್ತು. ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಮೇಲೆ ನಡೆಯುತ್ತಿರುವ ದಾಳಿಯಲ್ಲಿಯೂ ಇಂಥ ಛಾಯೆ ಇದೆ. ವಿದ್ವಾಂಸರಿಗೆ, ವಿಚಾರವಾದಿಗಳಿಗೆ ಕೊಲೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪದಲ್ಲಿ ಬಂಧಿತನಾಗಿರುವ ವ್ಯಕ್ತಿಗೂ ಕಲಬುರ್ಗಿಮ ಗೌರಿ ಹತ್ಯೆ ಆರೋಪಿಗಳಿಗೂ ಸಂಬಂಧವಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ಕಾರಣಗಳಿಂದ ಎಲ್ಲಾರೂ ಎಚ್ಚರ ವಹಿಸಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಕ್ಲಿಪ್ ಮಾಡಿದ ವಿಡಿಯೊ ಬಳಸಿ, ‘ರಾಹುಲ್ ಗಾಂಧಿ ಭಾರತ ಮಾತೆಗೆ ಅವಮಾನಿಸಿದ್ದಾರೆ’ ಎಂದು ಸುಳ್ಳು ಹೇಳಿದ ಬಿಜೆಪಿ
ಇಂದೂಧರ ಹೊನ್ನಾಪುರ ಅವರು ಮಾತನಾಡಿ, ನಮ್ಮ ಎಲ್ಲಾ ಚಳುವಳಿಗಳು ಮಿತಿಗಳನ್ನು ಮೀರಿ ಪ್ರತಿರೋಧವನ್ನು ಕಟ್ಟಬೇಕಿದೆ ಎಂದರು.
ಹಾಗೂ ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ತಾರತಮ್ಯದಿಂದ ಕೂಡಿರುವ ಸನಾತನ ಧರ್ಮಕ್ಕೆ ಹಾಗೂ ಸಾಂಸ್ಕೃತಿಕ ದಾಸ್ಯಕ್ಕೆ ಪ್ರತಿರೋಧವಾಗಿ ಶರಣ ಸಂಸ್ಕೃತಿ ಪರ್ಯಾಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅನುಭವ ಮಂಟಪದ ಸದಸ್ಯರಾದ ಎಸ್.ಜಿ.ಸಿದ್ದರಾಮಯ್ಯ, ಜಯಪ್ರಕಾಶ್ ಬಂಜಗೆರೆ, ಮಾವಳ್ಳಿ ಶಂಕರ್, ಲೀಲಾ ಸಂಪಿಗೆ, ಸಿದ್ದಪ್ಪ ಮೂಲಿಗೆ ಉಪಸ್ಥಿತರಿದ್ದರು.
ವಿಡಿಯೋ ನೋಡಿ: ರಾಜ್ಯದಲ್ಲಿ ಸರ್ಕಾರ ಬದಲಾಗಿದೆ, ನಿಲುವುಗಳಲ್ಲಿ ಬದಲಾವಣೆ ಇಲ್ಲ – ಬಿ.ಸುರೇಶ್ Janashakthi Media