-ಬಸು-ಬಳ್ಳಾರಿ
ಧಿಕ್ಕಾರವಿರಲಿ ನಿನಗೆ, ದುಷ್ಠ ಬಿಗುಮಾನವೇ
ದುರುಳ ಅಹಂ ಭಾವವೇ,
ದ್ರೋಹಿ ನೀನು, ಕೊಲ್ಲುತ್ತಿರುವೇ ವಿಶ್ವಾಸವಾ
ಹೇ., ತೊಲಗು, ತೊಲಗಾಚೆ ಬಿಟ್ಟು ಜಗವಾ.
ಸದ್ದಿಲ್ಲದೇ ನನ್ನೊಳಗೆ ಸೇರಿದೆ
ಹಿತವಾಗಿರುವಿಯೆಂದು ನೀನೇ ನಾನಾದೆ
ನನ್ನವರೊಳಗೂ ಬೆಳೆದೆ
ಅವರಿಗೂ ಹಿತವಾಗಿ ನೀನೇ ಅವರಾದೆ.
ನಮ್ಮನ್ನೆ ನಾವು ಮರೆತ ಮೇಲೆ
ಈರ್ವರ ಮುಖಾ ಮುಖಿಯಾಗಿಸಿ ಹೆಮ್ಮರವಾದೆ
ಅಬ್ಬಾ ನಿನ್ನ ಸಹವಾಸವೇ
ನಮ್ಮೊಳಗೆ ಬಿಕ್ಕಟ್ಟನಿಟ್ಟೆ, ಗೋಡೆಗಳ ನೆಟ್ಟೇ,
ಅಪ್ರಾಮಾಣಿಕರನ್ನಾಗಿಸಿಟ್ಟೆ,
ಅಯ್ಯೋ.. ಪ್ರೀತಿಯನ್ನೇ ಕೊಂದು ಬಿಟ್ಟೆ
ಚದುರ ನೀನು, ಅಮ್ಮಾ…ವಿಷವನ್ನೇ ಬಿತ್ತೇ,
ದ್ವೇಷ-ಅಸೂಯೆಯನ್ನೆ ಬೆಳೆಸಿಬಿಟ್ಟೆ.
ಹೊಂದಾಣಿಕೆಯನ್ನು ಹಣಿದಣಿದು
ಎಲ್ಲರ ದೂರ ಮಾಡಿ ಬಿಟ್ಟೆ,
ಗಗನವೇ ಬಿರಿಯುವಂತೆ ಗಹ ಗಹಿಸಿ
ಗೆಲುವಿನ ನಗೆಯ ಅಲೆಯ ತೇಲಿ ಬಿಟ್ಟೆ
ಭಲೇ, ಎಂತೆಂತವರ ಕೆಡವಿ ಬಿಟ್ಟೆ
ಕ್ರೂರಿ ನೀನು ಸಾಕಿನ್ನು ನಿನ್ನ ಸಹವಾಸ
ನೀ ತಿನ್ನುವುದು ಹೊಂದಾಣಿಕೆ, ಕುಡಿಯುವುದು ವಿಶ್ವಾಸ
ಜಗಿಯುವುದು ಪ್ರೀತಿ, ಹುಗಿಯುವುದು ದ್ವೇಷ
ನೀನು ಇದ್ದಷ್ಠು ನಾವು ದೂರ ಬಹು ದೂರ
ಛೀ.. ಬೇಗನೇ ತೊಲಗಾಚೆ ನೀ ಬಲು ಭಾರಾ.
ನಿನ್ನಿಂದ ಮನ ಹಾಳು, ಮನೆ ಪಾಳು,
ಹೊಲ ಬೀಳು, ಬದುಕು ಹಾಳು !
ಮತ್ತೆ ಕೇಳು ದೇಶ, ವಿಶ್ವವೇ ಹಾಳು !!
ನನ್ನ ಬಿಟ್ಟರಷ್ಠೇ ಅಲ್ಲಾ
ಬದುಕಿನಿಂದಾಚೆ ತೊಲಗು ನಮ್ಮೆಲ್ಲಾ
ಯಾಕೇ, ವಿಶ್ವದಾಚೆಗೇ..
ತೊಲಗು ನೀ ತೊಲಗು ತೊಲಗಾಚೆಗೆ.
ನೀನು ಬೇಕಿಲ್ಲಾ
ನಿನ್ನ ಅಗತ್ಯವೇ ನಮಗಿಲ್ಲ.
ಮರಳಿ ಬರಬೇಡಾ, ಇತ್ತ ಸುಳಿಯ ಬೇಡಾ!
ಸುಳಿದೀಯ ಜೋಕೆ…? ಮರೆತು ಎಚ್ಚರವನ್ನಾ!
ಇಟ್ಟು ನೋಡು ನೆನಪನ್ನು,
ನಾ ಸತ್ತರೂ ಚಿಂತೆಯಿಲ್ಲಾ
ಎಲ್ಲಿ, ಎಲ್ಲೆಲ್ಲಿ ಅವಿತರೂ,
ಒಬಾಮನೇ ನ್ಯಾಟೋದೊಂದಿಗೆ ಅಡ್ಡ ಬಂದರೂ
ತ್ರಿಮೂತರ್ಿಗಳೇ ರಕ್ಷಣೆಗೆ ನಿಂತರೂ
ಬಿಡುವುದಿಲ್ಲ ಕೊಲ್ಲದೇ ನಿನ್ನನ್ನಾ..?
ಕೇಳು. ಕೇಳಿಲ್ಲಿ. ತೊಲಗಿ ಬಿಡು, ಕೊಲ್ಲುವ ಮುನ್ನ !
ಕೊಡುವೆ ಇದಕ್ಕೆ, ಸುಂದರಯ್ಯನ ಸಾಕ್ಷಿಯನ್ನಾ !!
ನೀವ್ ಬನ್ನಿ ಬಂಧುಗಳೇ,
ಕೈ ಜೋಡಿಸೋಣ
ವಿಶ್ವದೊಳಗೇ ಪ್ರೀತಿಯನ್ನು ಬೆಸೆಯೋಣ !
ದುಷ್ಠ ಬಿಗುಮಾನವಾ,
ದುರುಳ ಅಹಂ ಭಾವವಾ ಬಡಿದು ಓಡಿಸೋಣ !!
ಸದೆ ಬಡಿದು ಓಡಿಸೋಣ !!!
0