ಮುಂಬೈ :ವಾಂಖೆಡೆ ಮೈದಾನದಲ್ಲಿ ನಡೆದ ವಿಶ್ವಕಪ್ 2023ರ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭಾರತ ತಂಡ ರೋಚಕ ಹಂತದಲ್ಲಿ ಗೆದ್ದು, ವಿಶ್ವಕಪ್ 2023ರ ಫೈನಲ್ಗೆ ಮೊದಲ ತಂಡವಾಗಿ ಲಗ್ಗೆಯಿಟ್ಟಿದೆ.
ಭಾರತ ವಿಶ್ವಕಪ್ ನಲ್ಲಿ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದೆ.ಕಳೆದ 10 ವರ್ಷಗಳ ಐಸಿಸಿ ಟ್ರೋಫಿ ಕೊರತೆ ನೀಗಿಸಲು ಟೀಮ್ ಇಂಡಿಯಾಗೆ ಇನ್ನೊಂದು ಗೆಲುವು ಮಾತ್ರ ಬಾಕಿ ಇದೆ. ಹಾಗೂ ವಿಶ್ವಕಪ್ ನಲ್ಲಿ ತನ್ನ ಅಜೇಯ ಓಟವನ್ನು ಭಾರತ ಮುಂದುವರಿಸಿದೆ.
ಸತತವಾಗಿ 3ನೇ ಬಾರಿ ಫೈನಲ್ಗೆ ತಲುಪುವ ಕನಸಿನಲ್ಲಿದ್ದ ಕಿವೀಸ್ ಆಸೆಗೆ ಭಾರತ ತಂಡ ತಣ್ಣೀರೆರಚಿದೆ. ಭಾರತ ತಂಡ ನೀಡಿದ 398 ರನ್ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ ತಂಡ ಒಂದು ಹಂತದಲ್ಲಿ ಭಾರತಕ್ಕೆ ದೊಡ್ಡ ತಲೆನೋವಾಗಿ ಕಾಡಿತ್ತು. ಆದರೆ ಪಂದ್ಯದ ಗತಿಯನ್ನು ವೇಗಿ ಮೊಹಮ್ಮದ್ ಶಮಿ ಬದಲಿಸುವ ಮೂಲಕ ಭಾರತ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಅಂತಿಮವಾಗಿ ನ್ಯೂಜಿಲ್ಯಾಂಡ್ ತಂಡ 48.5 ಓವರ್ಗೆ 10 ವಿಕೆಟ್ ನಷ್ಟಕ್ಕೆ 327 ರನ್ ಗಳಿಸುವ ಮೂಲಕ 70 ರನ್ ಗಳಿಂದ ಸೋತು
ಇನ್ನು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ, ಬ್ಯಾಟಿಂಗ್ ಅಖಾಡದಲ್ಲಿ ಭರ್ಜರಿ ಅಬ್ಬರ ತೋರಿಸಿತ್ತು. ನಾಯಕ ರೋಹಿತ್ ಶರ್ಮ ಆಕ್ರಮಣಕಾರಿ ಆಟವಾಡುವ ಮೂಲಕ ಭದ್ರ ಬುನಾದಿ ಹಾಕಿದರು. ಶುಭಮನ್ ಗಿಲ್ ಅದನ್ನು ಮುಂದುವರಿಸಿ ಸರಾಗವಾಗಿ ಬ್ಯಾಟಿಂಗ್ ಬೀಸಿದರು. ಕಾಲಿಗೆ ಪೆಟ್ಟುಮಾಡಿಕೊಂಡ ಗಿಲ್ ರಿಟೈರ್ಟ್ ಹರ್ಟ್ ಆದಾಗ ಕೊಹ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ ರನ್ ಮಳೆಯನ್ನೆ ಸುರಿಸಿದರು. ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್ ನಲ್ಲಿ ಐದನೇ ಶತಕ ದಾಖಲಿಸಿದ್ದಾರೆ. 67 ಎಸೆತಗಳಲ್ಲಿ ಅವರು ಶತಕ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಗುರಿಯನ್ನ ತಲುಪಿದ್ರು. 2023 ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯಲ್ಲಿ, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಶತಕಗಳ ಸಾಧನೆ ಮಾಡಿದರು. ಹಾಗೇ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ 49 ಶತಕ ಸಿಡಿಸಿದ್ದ ಸಚಿನ್ ಸಾಧನೆ ಮೀರಿಸಿ, 50ನೇ ಸೆಂಚ್ಯುರಿ ಬಾರಿಸಿದ್ದಾರೆ ಕೊಹ್ಲಿ. ಈ ಮೂಲಕ ಭಾರತ ತಂಡದ ಗೆಲುವಿನಲ್ಲಿ ಕೊಹ್ಲಿ ಕೊಡುಗೆ ಕೂಡ ಮಹತ್ವದ ಪಾತ್ರ ಪಡೆದಿದೆ.
7 ವಿಕೆಟ್ ಪಡೆದು ಶಮಿ ಸಾಧನೆ!
ಇಡೀ ಪಂದ್ಯದಲ್ಲಿ ಭಾರತದ ಪರವಾಗಿ ಮಿಂಚಿದ ಏಕೈಕ ಬೌಲರ್ ಅಂದ್ರೆ ಮೊಹಮ್ಮದ್ ಶಮಿ. ಯಾಕಂದ್ರೆ ಮಿಕ್ಕೆಲ್ಲ ಬೌಲರ್ಗಳ ಮೇಲೆ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆ ಅಟ್ಯಾಕ್ ಮಾಡುತ್ತಿದ್ದರೆ, ಮೊಹಮ್ಮದ್ ಶಮಿ ಮಾತ್ರ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆ ಮೇಲೆ ದಾಳಿ ಮಾಡಿದರು. ಹೀಗೆ ಮೊಹಮ್ಮದ್ ಶಮಿ ಬೌಲಿಂಗ್ ದಾಳಿ ಎದುರು ಬೆಚ್ಚಿಬಿದ್ದ ಕಿವೀಸ್ಗೆ, ಇನ್ನೇನು ಪಂದ್ಯದ ಅಂತ್ಯದಲ್ಲಿ ಮ್ಯಾಚ್ ಕೈಬಿಟ್ಟು ಹೋಗುವುದು ಪಕ್ಕಾ ಆಗಿತ್ತು. ಇದೇ ವೇಳೆ ಮೊಹಮ್ಮದ್ ಶಮಿ ಭರ್ಜರಿ 7 ವಿಕೆಟ್ ಪಡೆದರು. ಒಟ್ಟು 9.5 ಓವರ್ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಶಮಿ 57 ರನ್ ನೀಡಿ 7 ವಿಕೆಟ್ ಪಡೆದು ಭಾರತವನ್ನ ಸೋಲಿನ ದವಡೆಯಿಂದ ಪಾರು ಮಾಡಿದರು.