ಬರ ಪರಿಹಾರ ವಿತರಣೆಯಲ್ಲಿ ಕೇಂದ್ರದ ತಾರತಮ್ಯ – ಎಂ.ಬಿ ಪಾಟೀಲ್ ಆರೋಪ

ವಿಜಯಪುರ: ಕೇಂದ್ರ ಸರ್ಕಾರ ರಾಜ್ಯದಲ್ಲಿನ ಬರದ ಬಗ್ಗೆ ಗಮನ ಹರಿಸುತ್ತಿಲ್ಲ. ಬರ ನಿರ್ವಹಣೆ ಚರ್ಚೆಗೆ ಮುಖ್ಯಮಂತ್ರಿಗಳಿಗೆ ಸಮಯಾವಕಾಶ ಕೂಡ ನೀಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹೇಳಿದರು.

ನಾಗಠಾಣ ಹಾಗೂ ಇಂಡಿ ತಾಲೂಕುಗಳಲ್ಲಿ ಬರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವರು ನಮಗೆ ಸಿಗುತ್ತಿಲ್ಲ. ಭೇಟಿಗೆ ಸಮಯ ಸಹ ನೀಡುತ್ತಿಲ್ಲ. ಅವರಲ್ಲಿ ಸಮಯ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಯಾವುದೋ ಒಂದು ಪಕ್ಷದ ಆಸ್ತಿ ಅಲ್ಲ, ಅವರು ಮತ ಹಾಕಿರಬಹುದಷ್ಟೇ. ರಾಜಕೀಯ ಬದಿಗಿಟ್ಟು ಎಲ್ಲರೂ ರೈತರ ನೆರವಿಗೆ ಬರಬೇಕಿದೆ ಎಂದು ಒತ್ತಾಯಿಸಿದರು. ಬರ

ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಒಂದು ತಿಂಗಳಾದರೂ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸರಕಾರ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಎನ್ ಡಿಆರ್ ಎಫ್ ಮಾರ್ಗಸೂಚಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಪ್ರತಿ ಹೆಕ್ಟೇರ್ ನಿಗದಿ ಪಡಿಸಿರುವ ಪರಿಹಾರ ಮೊತ್ತ ರೈತರು ಬೆಳೆಗಾಗಿ ಮಾಡಿರುವ ಖರ್ಚಿಗೂ ಸಾಕಾಗುವುದಿಲ್ಲ. ಈ ಪರಿಹಾರ ರೈತರ ಪಾಲಿಗೆ ಬಕಾಸುರನ ಹೊಟ್ಟೆಗೆ ಅರೆಕಾಸಿಮಜ್ಜಿಗೆ ಎಂಬಂತಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ಕಾರಟಗಿ | ಮೈಲಾಪುರದಲ್ಲಿ ಬಸಿ ನೀರಿನದ್ದೇ ಸಮಸ್ಯೆ, ಗಾಢನಿದ್ರೆಯಲ್ಲಿ ಅಧಿಕಾರಿಗಳು  ಬರ

ಕೇಂದ್ರದ ಮೇಲೆ ಒತ್ತಡ ಹಾಕುವ ಮೂಲಕ ನಾವು ನಮ್ಮ ಜವಾಬ್ದಾರಿಯಿಂದ‌ ನುಣಿಚಿಕೊಳ್ಳುತ್ತಿಲ್ಲ. ಸಂಸದರು ಕೇಂದ್ರ ಸರ್ಕಾರದ ಮನವೊಲಿಸಿ ಸಹಾಯಕ್ಕೆ ಬರಬೇಕಿದೆ. ಇದು ಅವರು ಮಾಡಬೇಕಿರುವ ಮೊದಲ ಕೆಲಸ. ಅದಕ್ಕಾಗಿಯೇ ಸಂಸದರನ್ನು ರಾಜ್ಯದ ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಈಗಾಗಲೇ ಬರ ಅಧ್ಯಯನಕ್ಕೆ ಬಂದಿದ್ದ ತಂಡ ಕೇಂದ್ರಕ್ಕೆ ವರದಿ ಒಪ್ಪಿಸಿದೆ. ಈ ವರೆಗೆ ಪರಿಹಾರ ಬಂದಿಲ್ಲ. ಕೇಂದ್ರ ನಿಯಮಾವಳಿಯಂತೆ ಪರಿಹಾರ ನೀಡಬೇಕಿದೆ.

ರಾಜ್ಯ ಸರ್ಕಾರವು ತಮ್ಮ ಇತಿಮಿತಿಯಲ್ಲಿ ಸಹಾಯ ಮಾಡೇ ಮಾಡುತ್ತದೆ. ನಷ್ಟವಾದ ಪ್ರಮಾಣದ ಅರ್ಧವನ್ನಾದರೂ ಕೇಂದ್ರ ಸರ್ಕಾರ ನೀಡಬೇಕು. ಏಕರೆಗೆ 12 ಸಾವಿರವಾದರೂ ಕೊಡಲಿ, 24 ಸಾವಿರ ಕೇಳಿದರೆ ಅದು ರಾಜಕೀಯವಾಗುತ್ತೆ. ಈ ನಿಟ್ಟಿನಲ್ಲಿ ರಾಜ್ಯದ 26 ಸಂಸದರು ಬರದ ಬಗ್ಗೆ ಕೇಂದ್ರ ಹಾಗೂ ಪ್ರಧಾನಿಗಳ ಗಮನ ಸೆಳೆಯುತ್ತಿಲ್ಲ ಎಂದು ಸಚಿವರು ಆಕ್ರೋಶ ಹೊರಹಾಕಿದರು. ಬರ

ವಿಡಿಯೋ ನೋಡಿ: ಗೂಗಲ್ ಮತ್ತು ಯುಟ್ಯೂಬ್ ಹ್ಯಾಕ್ ಆಗದಂತೆ ಎಚ್ಚರಿಕೆ ವಹಿಸೋದು ಹೇಗೆ? – ಡಾ. ಎನ್. ಬಿ. ಶ್ರೀಧರ್

 

Donate Janashakthi Media

Leave a Reply

Your email address will not be published. Required fields are marked *