ಕೊಲ್ಕತ್ತ: ಹಿರಿಯ ಸಿಪಿಐ(ಎಂ) ನಾಯಕ, ಮಾಜಿ ಸಂಸದ ಬಾಸುದೇಬ್ ಆಚಾರ್ಯ ಅವರು ಸೋಮವಾರ ತಮ್ಮ 81 ನೇ ವಯಸ್ಸಿನಲ್ಲಿ ಹೈದರಾಬಾದ್ನಲ್ಲಿ ನಿಧನರಾಗಿದ್ದಾರೆ. ಅವರು ತಮ್ಮ ಮಗನೊಂದಿಗೆ ವಾಸಿಸುತ್ತಿದ್ದರು. ಆಚಾರ್ಯ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1942 ಜುಲೈ 11ರಂದು ಪುರುಲಿಯಾದಲ್ಲಿ ಜನಿಸಿದ ಬಾಸುದೇಬ್ ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲೆ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಅವರು ಸಿಪಿಐ(ಎಂ) ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. ಅವರು 1980 ರಿಂದ 2014 ರವರೆಗೆ ಬಂಕುರಾ ಕ್ಷೇತ್ರದಿಂದ ಒಂಬತ್ತು ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. 2014 ರಲ್ಲಿ ಬಂಕುರಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮುನ್ಮುನ್ ಸೇನ್ ಅವರನ್ನು ಸೋಲಿಸಿದ್ದರು.
ಇದನ್ನೂ ಓದಿ: ಬಳ್ಳಾರಿ| ಹಾಡಹಗಲೇ ಬಳ್ಳಾರಿ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ ಪ್ರಕರಣ ದಾಖಲು
ಚಿಕ್ಕಂದಿನಿಂದಲೂ ಬಾಸುದೇಬ್ ಆಚಾರ್ಯ ಅವರು ಕಾರ್ಮಿಕರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಅವರು ವಿವಿಧ ಕಾರ್ಮಿಕ ಸಂಘಗಳಲ್ಲಿ ಕಾರ್ಮಿಕರನ್ನು ಸಂಘಟಿಸಿದರು. ಪಶ್ಚಿಮ ಬಂಗಾಳದ ರೈಲ್ವೆ ಗುತ್ತಿಗೆದಾರ ಕಾರ್ಮಿಕ ಸಂಘ, ಎಲ್ಐಸಿ ಏಜೆಂಟ್ ಆರ್ಗನೈಸೇಷನ್ ಆಫ್ ಇಂಡಿಯಾ, ಡಿವಿಸಿ ಗುತ್ತಿಗೆದಾರ ಕಾರ್ಮಿಕರ ಒಕ್ಕೂಟ ಮತ್ತು ಇತರರ ಅಧ್ಯಕ್ಷರೂ ಆಗಿ ಚಳವಳಿಗೆ ಸೇವೆ ಸಲ್ಲಿಸಿದ್ದಾರೆ.
ದೇಶದ ಪ್ರಮುಖ ಕಾರ್ಮಿಕ ಸಂಘಟನೆಯಾಗಿರುವ ಸಿಐಟಿಯುನ ಜನರಲ್ ಕೌನ್ಸಿಲ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಹಲವಾರು ಸಂಸದೀಯ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, 25 ವರ್ಷಗಳ ಕಾಲ ರೈಲ್ವೆ ಸ್ಥಾಯಿ ಸಮಿತಿಯಲ್ಲಿದ್ದರು.
ಆಚಾರ್ಯ ಅವರ ಸಾವಿನ ಬಗ್ಗೆ ಮಾಹಿತಿ ನೀಡಿರುವ ಸಿಪಿಐ(ಎಂ) ಪಶ್ಚಿಮ ಬಂಗಾಳ ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಡಿ. ಸೆಲೀಮ್, ಹಿರಿಯ ಸಂಸದೀಯ ಪಟು, ಟ್ರೇಡ್ ಯೂನಿಯನ್ ನಾಯಕ ಬಾಸುದೇಬ್ ಆಚಾರ್ಯ ಇಂದು ಮಧ್ಯಾಹ್ನ ಹೈದರಾಬಾದ್ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ದಾರೆ. “ಎಡ-ಪ್ರಜಾಸತ್ತಾತ್ಮಕ ಚಳವಳಿಗೆ ಅವರು ನೀಡಿದ ಕೊಡುಗೆಯನ್ನು ನಾವು ಗೌರವದಿಂದ ಸ್ಮರಿಸುತ್ತೇವೆ” ಎಂದು ಸಿಪಿಐ(ಎಂ) ಪಶ್ಚಿಮ ಬಂಗಾಳ ಹೇಳಿದೆ.
ಇದನ್ನೂ ಓದಿ: ಬಿ.ವೈ. ವಿಜಯೇಂದ್ರ 3 ವರ್ಷ ಮಾತ್ರ ರಾಜ್ಯಾಧ್ಯಕ್ಷ| ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
সিপিআই(এম) কেন্দ্রীয় কমিটির প্রাক্তন সদস্য, শ্রমিক আন্দোলনের প্রাক্তন সর্বভারতীয় নেতৃত্ব, প্রাক্তন সাংসদ কমরেড বাসুদেব আচারিয়া ৮১ বছর বয়সে আজ প্রয়াত হয়েছেন। দীর্ঘদিন ধরেই বার্ধক্যজনিত অসুস্থতার কারণে তিনি চিকিৎসারত ছিলেন। বাম-গণতান্ত্রিক আন্দোলনে তাঁর অবদানকে আমরা… pic.twitter.com/bx19yDyfzg
— CPI(M) WEST BENGAL (@CPIM_WESTBENGAL) November 13, 2023
ಸಿಪಿಐ(ಎಂ) ಕೇಂದ್ರ ಸಮಿತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಸದಾ ಜನರ ಸಮಸ್ಯೆಯನ್ನು ಕೈಗೆತ್ತಿಕೊಂಡ ಅತ್ಯುತ್ತಮ ಸಂಸದೀಯ ಪಟು ಎಂದು ಹೇಳಿದೆ.
The Polit Bureau of the Communist Party of India (Marxist) expresses its profound grief at the death of veteran communist, parliamentarian and trade union leader, Basudeb Acharia. pic.twitter.com/oq49yXPJLo
— CPI (M) (@cpimspeak) November 13, 2023
ಇದನ್ನೂ ಓದಿ: ಹೈದರಾಬಾದ್ | ಜನವಸತಿ ಕಟ್ಟಡಕ್ಕೆ ಬೆಂಕಿ; ಕನಿಷ್ಠ 9 ಸಾವು
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡಾ ಹಿರಿಯ ನಾಯಕನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಅನುಭವಿ ಎಡಪಂಥೀಯ ನಾಯಕ, ಮಾಜಿ ಸಂಸದ ಬಾಸುದೇಬ್ ಆಚಾರ್ಯ ಅವರ ನಿಧನದಿಂದ ದುಃಖವಾಗಿದೆ. ಟ್ರೇಡ್ ಯೂನಿಯನ್ ನಾಯಕರಾಗಿದ್ದ ಅವರು ಅಸಾಧಾರಣ ಶಕ್ತಿಯ ಸಂಸದರಾಗಿದ್ದರು. ಅವರ ನಿಧನವು ಸಾರ್ವಜನಿಕ ಜೀವನದಲ್ಲಿ ಗಮನಾರ್ಹ ನಷ್ಟವನ್ನು ಉಂಟುಮಾಡುತ್ತದೆ. ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಸಂತಾಪಗಳು” ಎಂದು ಹೇಳಿದ್ದಾರೆ.
Saddened at the demise of the veteran Left leader and former MP Basudeb Acharia.
He was a trade union leader and Parliamentarian of formidable strength and his departure will cause significant loss in public life.
Condolences to his family, friends and colleagues.
— Mamata Banerjee (@MamataOfficial) November 13, 2023
ವಿಡಿಯೊ ನೋಡಿ: ದೀಪಾವಳಿ ಹಬ್ಬದ ವಿಶೇಷ ಕವಿತೆ : ನನ್ನ ಹಣತೆ – ಡಾ. ಜಿ.ಎಸ್. ಶಿವರುದ್ರಪ್ಪ Janashakthi Media