ತಿರುವನಂತಪುರ: ಕೆಪಿಸಿಸಿ (ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ) ಯು ಯದ್ಧಪೀಡಿತ ಪ್ಯಾಲೆಸ್ಟೈನ್ ಜನತೆಗೆ ಬೆಂಬಲ ನೀಡುವ ಸಲುವಾಗಿ ನವೆಂಬರ್ 23ಕ್ಕೆ ಬೃಹತ್ ರ್ಯಾಲಿಯನ್ನು ಆಯೋಜಿಸುವುದಾಗಿ ಘೋಷಿಸಿದೆ.
ನವೆಂಬರ್ 23ರಂದು ಕೋಯಿಕ್ಕೋಡ್ ಬೀಚ್ನಲ್ಲಿ ರ್ಯಾಲಿ ನಡೆಯಲಿದೆ. ಕೇರಳದಲ್ಲಿ ರಾಜಕೀಯ ಮತ್ತು ಚುನಾವಣಾ ಲಾಭ ಪಡೆಯಲು ಪ್ಯಾಲೆಸ್ಟೈನ್ ಜನರ ದುರವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಆಡಳಿತಾರೂಢ ಸಿಪಿಐ(ಎಂ) ಬೂಟಾಟಿಕೆಯನ್ನು ಬಯಲಿಗೆಳೆಯಲು ಈ ರ್ಯಾಲಿಯ ವೇದಿಕೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ಹೇಳಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ರ್ಯಾಲಿಗೆ ಚಾಲನೆ ನೀಡಲಿದ್ದು, ಭಾರಿ ಜನಸ್ತೋಮ ಒಟ್ಟುಗೂಡುವ ಮೂಲಕ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹರಿಯಾಣ| ನಕಲಿ ಮದ್ಯ ಸೇವನೆ ಶಂಕೆ; 6 ಮಂದಿ ಸಾವು
ಕಾಂಗ್ರೆಸ್ ಇಸ್ರೇಲ್ಗೆ ಬೆಂಬಲ ನೀಡುತ್ತಿದ್ದು,ಪ್ಯಾಲೆಸ್ಟೈನ್ ಜನರ ವಿರುದ್ಧವಾಗಿದೆ ಎಂದು ಸಿಪಿಐ(ಎಂ)ನ ಕಟು ಟೀಕೆಗಳ ಹಿನ್ನೆಲೆಯಲ್ಲಿ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಪ್ಯಾಲೆಸ್ಟೈನ್ ಪರ ರ್ಯಾಲಿ ಆಯೋಜಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಆರ್ಯಡನ್ ಶೌಕತ್ ಅವರಿಂದ ವಿವರಣೆ ಕೇಳಿದ ಕೆಪಿಸಿಸಿ ನಡೆಯನ್ನು ಎಡಪಕ್ಷವು ಪ್ರಶ್ನಿಸಿದೆ.
ಇಸ್ರೇಲ್ ಪಡೆಗಳು ಅಮಾಯಕ ಪ್ಯಾಲೆಸ್ಟೈನಿಯನ್ನರನ್ನು ಕಗ್ಗೊಲೆ ಮಾಡುತ್ತಿವೆ ಎಂದು ಆರೋಪಿಸಿದ ಅವರು,ತಾಯ್ನಾಡಿನಲ್ಲಿ ವಾಸಿಸುವ ಪ್ಯಾಲೆಸ್ಟೈನ್ ಜನರ ಹಕ್ಕನ್ನು ಕಸಿದುಕೊಳ್ಳವ ಯಾವುದೇ ಕ್ರಮವನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ, ಜವಾಹರಲಾಲ್ ನೆಹರೂ ಅವರಿಂದ ಮನಮೋಹನ್ ಸಿಂಗ್ವರೆಗಿನ ಕಾಂಗ್ರೆಸ್ ಸರ್ಕಾರವು ಯಾವಾಗಲೂ ಪ್ಯಾಲೆಸ್ಟೈನ್ ಜನರ ಹೋರಾಟವನ್ನು ಬೆಂಬಲಸಿವೆ ಎಂದು ತಿಳಿಸಿದ್ದಾರೆ.
ವಿಡಿಯೋ ನೋಡಿ: ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media