ಚಂಡೀಗಢ: ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ 6 ಮಂದಿ ಸಾವಿಗೀಡಾಗಿದ್ದು, ಅವರು ನಕಲಿ ಮದ್ಯ ಸೇವಿಸಿದ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಹರಿಯಾಣ
ಕಳೆದ ಎಡಡು ದಿನಗಳಲ್ಲಿ ಆರು ಮಂದಿ ಮೃತಪಟ್ಟಿದ್ದು ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ತನಿಖೆಗೆ ಗುರುಪಡಿಸಲಾಗಿದೆ.ಆದರೆ ಸಾವಿನ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ ಎಂದು ವಿವರಿಸಲಾಗಿದೆ.
“ಒಬ್ಬ ವ್ಯಕ್ತಿಯ ಸಾವಿನ ಬಗ್ಗೆ ಬುಧವಾರ ಮಧ್ಯಾಹ್ನ ಆಸ್ಪತ್ರೆಯಿಂದ ನಮಗೆ ಮಾಹಿತಿ ಬಂದಿದೆ. ಇದು ನಕಲಿ ಮದ್ಯದ ಸಾವು ಎಂದು ಹೇಳಲಾಗಿದೆ” ಎಂದು ಯಮುನಾನಗರ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಗಂಗಾ ರಾಮ್ ಪುನಿಯಾ ಅವರು ಫೋನ್ ಮೂಲಕ ಪಿಟಿಐಗೆ ತಿಳಿಸಿದ್ದಾರೆ.
ನಿಖರವಾದ ಕಾರಣ ಮರಣೋತ್ತರ ಬಳಿಕ ಗೊತ್ತಾಗಲಿದೆ, ಲಭ್ಯ ಮಾಹಿತಿ ಆಧಾರದಲ್ಲಿ ತನಿಖೆ ನಡೆಸುತ್ತಿದೆ. ಅಕ್ಕಪಕ್ಕದ ಕೆಲ ಗ್ರಾಮಗಳಲ್ಲೂ ವಿಚಾರಣೆ ನಡೆಯುತ್ತಿದೆ. ಇಬ್ಬರು ಗ್ರಾಮಸ್ಥರು ನೀಡಿದ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಇತರ ಮೂರು ಮಂದಿಯನ್ನು ಮಂಗಳವಾರ ಅಂತ್ಯಸಂಸ್ಕಾರ ನಡೆಸಲಾಯಿತು.ಇತರ ಇಬ್ಬರ ಅಂತಿಮ ಸಂಸ್ಕಾರ ಬುಧವಾರ ನೆರವೇರಿದೆ.
ಇದನ್ನೂ ಓದಿ: ಅನಿಶ್ಚಿತ ಉದ್ಯೋಗ ಮತ್ತು ಕಡಿಮೆ ಆದಾಯಗಳ ಸಮಸ್ಯೆಗೆ ವಾರಕ್ಕೆ 70 ಗಂಟೆಗಳ ದುಡಿಮೆಯ ಪರಿಹಾರ !
ಈ ಆರು ಮಂದಿ ಸಂಶಯಾಸ್ಪದವಾಗಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಈ ವಿಷಪೂರಿತ ಸೇವನೆ ಪ್ರಕರಣ ಎಂದು ಶಂಕಿಸಲಾಗಿದೆ. ಐದು ಮಂದಿಯ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡದೇ ಅಂತ್ಯಸಂಸ್ಕಾರ ನೆರವೇರಿಸಿದ್ದು ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ನೋಡಿ: ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಿಡಿದೆದ್ದ ಗ್ರಾಮ ಪಂಚಾಯಿತಿ ನೌಕರರು Janashakthi Media