ವಿಶ್ವಾಸಾರ್ಹತೆಯನ್ನು ಕಳಕೊಂಡ ಕೇರಳದ ಯುಡಿಎಫ್ ಸರಕಾರ ಮತ್ತು ಮುಖ್ಯಮಂತ್ರಿ

ಸೀತಾರಾಮ್ ಯೆಚೂರಿ

ಕೇರಳದ ಮುಖ್ಯಮಂತ್ರಿ ಮತ್ತು ಅಲ್ಲಿನ ಯುಡಿಎಫ್ ಸರಕಾರ ಸೌರ ಫಲಕ(ಸೋಲಾರ್ ಪ್ಯಾನಲ್) ಹಗರಣ ಬಯಲಾದ ನಂತರ ಕಟಕಟೆಯಲ್ಲಿ ನಿಂತಿದೆ. ಸೌರ ಸಾಧನಗಳ ಪೂರೈಕೆಯಲ್ಲಿನ ಮೋಸವನ್ನು ಎಸಗಿದವರು-ಬಿಜು ರಾಧಾಕೃಷ್ಣನ್ ಮತ್ತು ಸರಿತಾ ನಾಯರ್- ಜೈಲು ಸೇರಿದ್ದಾರೆ. ಅವರಿಂದ ಮೋಸಹೋದ ವ್ಯಾಪಾರಸ್ಥರು ಮತ್ತು ಇತರರ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ. ಅದಾದ ಕೂಡಲೇ, ಮುಖ್ಯಮಂತ್ರಿ ಕಚೇರಿಯ ಶಾಮೀಲು ಮತ್ತು ಉಮ್ಮನ್ ಚಾಂಡಿಯವರೊಂದಿಗೆ ಸಂಪರ್ಕ ಬಯಲಿಗೆ ಬಂತು.

kerala protests

ಮುಖ್ಯಮಂತ್ರಿಯವರ ಒಬ್ಬ ಪಿ.ಎ.(ವೈಯಕ್ತಿಕ ಸಹಾಯಕ) ಹಗರಣಕೋರರೊಂದಿಗೆ ಆತನ ಸಂಪರ್ಕ ದೃಢಪಟ್ಟ ನಂತರ ಈಗ ಕಸ್ಟಡಿಯಲ್ಲಿದ್ದಾನೆ. ಮುಖ್ಯಮಂತ್ರಿ ಕಚೇರಿ ಸಿಬ್ಬಂದಿವರ್ಗಕ್ಕೆ ಸೇರಿದ ಇತರ ಮೂವರನ್ನು ತೆಗೆದು ಹಾಕಲಾಗಿದೆ. ಮುಖ್ಯಮಂತ್ರಿ ವೈಯಕ್ತಿಕವಾಗಿ ಇದರಲ್ಲಿ ಇದ್ದಾರೆಂಬುದರ ಸಾಕ್ಷ್ಯ ಬೆಳಕಿಗೆ ಬಂದಾಗ ತನಗೆ ಅವರೊಂದಿಗೆ ಯಾವುದೇ ಸಂಪರ್ಕ ಇಲ್ಲ ಎಂದು ಅವರು ನಿರಾಕರಿಸಲು ಪ್ರಯತ್ನಿಸಿದರು. ಆದರೆ ಮುಖ್ಯಮಂತ್ರಿ ಬಿಜು ರಾಧಾಕೃಷ್ಣನ್ ಜತೆ ಒಂದು ಗಂಟೆಯ ಮಾತುಕತೆ ನಡೆಸಿದ್ದರು, ಮತ್ತು ದಿಲ್ಲಿಯ ವಿಜ್ಞಾನ ಭವನದಲ್ಲಿ ಮುಖ್ಯಮಂತ್ರಿ ಒಂದು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾಗ ಅಲ್ಲಿ ಸರಿತಾ ನಾಯರ್ ಹಾಜರಿದ್ದರು ಎಂಬ ಸಂಗತಿಗಳು ಬೆಳಕಿಗೆ ಬಂದು ಅವರ ನಿರಾಕರಣೆಗಳು ಠುಸ್ಸಾದವು.

ಈ ವ್ಯವಹಾರ, ಶಂಕಿತ ಹಗರಣಕೋರರು ಗೃಹಮಂತ್ರಿ ಮತ್ತು ಇತರ ಮಂತ್ರಿಗಳಿಗೂ ಮಾಡಿದ ವಿವಿಧ ಕರೆಗಳು ಬಯಲಾಗಿ ಇನ್ನಷ್ಟು ರಾಡಿಯಾಗಿದೆ.
ಈ ವಿಷಯದ ಬಗ್ಗೆ ಸ್ಪಷ್ಟಗೊಳಿಸಿ ಎಂದು ಪ್ರತಿಪಕ್ಷಗಳು ಅವಿರತವಾಗಿ ಆಗ್ರಹಿಸಿದರೂ, ಯುಡಿಎಫ್ ಸರಕಾರ ವಿಧಾನಸಭೆಯನ್ನು ಮುಂದೂಡುತ್ತ ತಪ್ಪಿಸಿಕೊಳ್ಳಲು ಪ್ರಯತ್ನಿಸಿತು. ಕೊನೆಗೆ ಇದ್ದಕ್ಕಿದ್ದಂತೆ ಅಧಿವೇಶನವನ್ನು ಸಮಾಪ್ತಗೊಳಿಸಿತು. ನ್ಯಾಯಾಂಗ ತನಿಖೆ ಆಗಬೇಕು, ಮುಖ್ಯಮಂತ್ರಿ ಕೆಳಗಿಳಿಯಬೇಕು ಎಂದು ಎಡ ಪ್ರಜಾಪ್ರಭುತ್ವ ರಂಗ (ಎಲ್ಡಿಎಫ್) ಆಗ್ರಹಿಸಿದೆ. ಉಮ್ಮನ್ ಚಾಂಡಿ ಅಧಿಕಾರದಲ್ಲಿ ಇರುವ ವರೆಗೆ ಈ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗದು.

ಸೌರ ಹಗರಣ ಮತ್ತು ಅದರಲ್ಲಿ ಮುಖ್ಯಮಂತ್ರಿ ಶಾಮೀಲಿನ ವಿರುದ್ಧ ಸಾಮೂಹಿಕ ಪ್ರತಿಭಟನೆಗಳನ್ನು ಅಮಾನುಷವಾಗಿ ಹತ್ತಿಕ್ಕಲಾಗಿದೆ. ಪ್ರತಿಪಕ್ಷಗಳ ಶಾಸಕರು ಭಾಗವಹಿಸಿದ್ದ ಧರಣಿ ಕಾರ್ಯಕ್ರಮದ ಮೇಲೆ ಅಶ್ರುವಾಯು ಪ್ರಯೋಗ ಪ್ರತಿಪಕ್ಷದ ಮುಖಂಡ ವಿ.ಎಸ್.ಅಚ್ಯುತಾನಂದನ್ ಮತ್ತು ಮಾಜಿ ಮಂತ್ರಿ ಸಿ.ದಿವಾಕರನ್ ಅಸ್ವಸ್ಥರಾಗಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆಗಳ ಮೇಲೆ ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಗಳನ್ನು ನಡೆಸಲಾಗಿದೆ.

ಉಮ್ಮನ್ ಚಾಂಡಿ ಸರಕಾರ ಎಂದರೇನೇ ದುರಾಡಳಿತ ಎನ್ನುವಂತಾಗಿದೆ. ಎರಡು ವರ್ಷಗಳ ಹಿಂದೆ ಅದು ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆಗಳು ಮತ್ತೆ ಕಾಣಿಸಿ ಕೊಳ್ಳಲಾರಂಭಿಸಿವೆ. ಹಿಂದಿನ ಎಲ್ಡಿಎಫ್ ಸರಕಾರ ಕೈಗೊಂಡ ಕ್ರಮಗಳಿಂದಾಗಿ ರೈತ ಆತ್ಮಹತ್ಯೆಗಳು ಕೊನೆಗೊಂಡಿದ್ದವು. ಅಟ್ಟಪ್ಪಾಡಿಯಲ್ಲಿ ಬುಡಕಟ್ಟು ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಬರ ಮತ್ತು ನೆರೆಯ ಸನ್ನಿವೇಶಗಳಲ್ಲಿ ಸರಕಾರ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಸರಕಾರ ಜಾತಿವಾದಿ ಮತ್ತು ಕೋಮುವಾದಿ ಸಂಘಟನೆಗಳನ್ನು ಬಹಿರಂಗವಾಗಿಯೇ ಸಂತುಷ್ಟಗೊಳಿಸುವ ದಾರಿಯನ್ನು ಹಿಡಿದಿದೆ.

ಇಂತಹ ಹಿನ್ನೆಲೆಯಲ್ಲಿ, ಸೌರ ಹಗರಣ ಯುಡಿಎಫ್ ಸರಕಾರ ಮತ್ತು ಮುಖ್ಯಮಂತ್ರಿಗಳ ವಿಶ್ವಾಸಾರ್ಹತೆಯನ್ನು ತಟ್ಟಿದೆ. ಪ್ರಜಾಪ್ರಭುತ್ವ ವಿಧಿ-ವಿಧಾನಗಳು ಮತ್ತು ನೈತಿಕತೆಯ ದೃಷ್ಟಿಯಿಂದ ಮುಖ್ಯಮಂತ್ರಿ ತಕ್ಷಣವೇ ರಾಜೀನಾಮೆ ನೀಡಬೇಕಾಗಿದೆ. ಇದನ್ನು ಆಗಗೊಳಿಸಲು ಒಂದು ದೃಢನಿಧರ್ಾರದ ಸಾಮೂಹಿಕ ಹೋರಾಟವನ್ನು ಕೇರಳ ವೀಕ್ಷಿಸುತ್ತಿದೆ.
0

Donate Janashakthi Media

Leave a Reply

Your email address will not be published. Required fields are marked *