`ಉತ್ತಮ ಹಾಸ್ಟೆಲ್ ಸೌಕರ್ಯ ಕೊಡಿ ಮನೆ ಬಿಟ್ಟು ಬಂದ ವಿದ್ಯಾಥರ್ಿಗಳಲ್ಲಿ ಅನಾಥ ಭಾವನೆ ತರಬೇಡಿ’

ಚಿಕ್ಕರಾಜು

ಓದುವ ಉದ್ದೇಶಕ್ಕಾಗಿ ತಮ್ಮ ತಂದೆ-ತಾಯಿ, ಪೋಷಕರ ಆರೈಕೆ ಮತ್ತು ಪ್ರೀತಿಯಿಂದ ದೂರವಾಗಿ ಹಾಸ್ಟೇಲ್ಗಳಲ್ಲಿ ಉಳಿಯುವ ಮಕ್ಕಳಿಗೆ ತಾವು ಬಿಟ್ಟುಬಂದ ಪ್ರೀತಿಯನ್ನು ತುಂಬಿಕೊಡುವಂತಹ ಉತ್ತಮ ಪರಿಸರವನ್ನು ಹಾಸ್ಟೆಲ್ಗಳಲ್ಲಿ ನಿಮರ್ಿಸಬೇಕು. ಉತ್ತಮ ಶೈಕ್ಷಣಿಕ ಸೌಲಭ್ಯಗಳು ಮತ್ತು ಕ್ರೀಡಾ-ಸಾಂಸ್ಕೃತಿಕ ಅವಕಾಶಗಳನ್ನು ಒದಗಿಸಬೇಕು ಎಂದು ಹಾಸ್ಟೆಲ್ ವಿದ್ಯಾಥರ್ಿಗಳ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಎಂಭತ್ತರ ದಶಕದಲ್ಲಿ ರಚಿಸಲಾಗಿದ್ದ ಶಾಸಕ `ಗುರುಪ್ರಸಾದ್ ಸಮಿತಿ’ ವರದಿ ಹೇಳಿತ್ತು. ಈ ಆಶಯವನ್ನು ನೆನಪಿಸಿಕೊಳ್ಳುವುದು ಇಂದಿಗೂ ಅಗತ್ಯವಾಗಿದೆ.

ಶಾಲಾ ಕಾಲೇಜು ಆರಂಭವಾದ ಕೂಡಲೇ ಹಾಸ್ಟೆಲ್ ಆರಂಭಿಸಿ, ನೀರು ಕೊಡಿ, ಶೌಚಾಲಯ ಕಟ್ಟಿಸಿ ಕೊಡಿ, ಹಾಸ್ಟೆಲ್ ಕಟ್ಟಿಸಿಕೊಡಿ ಎಂದು ಇಂದಿಗೂ ಕೇಳಬೇಕಾದ ಸ್ಥಿತಿಯೇ ಮುಂದುವರಿದಿರುವುದು ನಿಜಕ್ಕೂ ದುರಂತ.

Sfi

ಆಥರ್ಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ವಿದ್ಯಾಥರ್ಿಗಳ ಶೈಕ್ಷಣಿಕ ಪ್ರಗತಿಯ ಉದ್ದೇಶಕ್ಕಾಗಿ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯದಂತೆ ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಬಿಸಿಎಂ ಮತ್ತು ಎಸ್.ಸಿ/ಎಸ್.ಟಿ ಹಾಸ್ಟೆಲ್ಗಳನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತದೆ. ಆದರೆ ಈ ಹಾಸ್ಟೆಲುಗಳಲ್ಲಿ ನಮ್ಮ ವಿದ್ಯಾಥರ್ಿಗಳು ಬದುಕಬೇಕಾದ ಪರಿಸರವನ್ನು, ಓದುವುದಕ್ಕಾಗಿ ಇರುವ ಸೌಕರ್ಯಗಳನ್ನು ಗಮನಿಸಿದರೆ ವಿದ್ಯಾಥರ್ಿಗಳ ಸ್ಥಿತಿ ಶೋಚನೀಯವಾಗಿದೆ. ವಿದ್ಯಾಥರ್ಿ ನಿಲಯಗಳು ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿಲ್ಲ. ಹಾಸ್ಟೆಲ್ ಬಯಸಿ ಬರುವ ಬಡ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಹಾಸ್ಟೆಲ್ಗಳ ಸಂಖ್ಯೆ ಮಾತ್ರ ಹೆಚ್ಚಾಗುತ್ತಿಲ್ಲ. ಹೀಗಾಗಿ ಇಂದಿಗೂ ಶೇ. 88% ರಷ್ಟು ವಿದ್ಯಾಥರ್ಿಗಳು ಉನ್ನತ ಶಿಕ್ಷಣದಿಂದ ಹೊರಗುಳಿದಿದ್ದಾರೆ. ಅಂದರೆ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಕೇವಲ 12% ಮಾತ್ರ. ಉನ್ನತ ಶಿಕ್ಷಣದ ಪರಿಧಿಯಿಂದ ಅತಿ ಹೆಚ್ಚು ಹೊರಹಾಕಲ್ಪಟ್ಟಿರುವುದು ಎಸ್.ಸಿ, ಎಸ್.ಟಿ ಮತ್ತು ಆಥರ್ಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾಥರ್ಿ ಸಮುದಾಯ.

ದೇಶದೆಲ್ಲೆಡೆ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುವಾಗ ಹಾಸ್ಟೆಲ್ ವಿದ್ಯಾಥರ್ಿಗಳ ದಿನದ ಊಟಕ್ಕೆ ಸಕರ್ಾರ ನೀಡುತ್ತಿರುವುದು ಕಾಲೇಜು ವಿದ್ಯಾಥರ್ಿಗಳಿಗೆ ದಿನಕ್ಕೆ ಕೇವಲ 27.41ರೂ. (ಮಾಸಿಕ-850 ರೂ.) ಮತ್ತು ಶಾಲಾ ವಿದ್ಯಾಥರ್ಿಗಳಿಗೆ ದಿನಕ್ಕೆ ಕೇವಲ 24.19 ರೂ. (ಮಾಸಿಕ-750ರೂ.) ಮಾತ್ರ. ದೈಹಿಕವಾಗಿ-ಮಾನಸಿಕವಾಗಿ ಸದೃಢವಾಗಿ ಬೆಳವಣಿಗೆ ಹೊಂದಬೇಕಾದ ವಯೋಮಾನದ ಈ ವಿದ್ಯಾಥರ್ಿಗಳಿಗೆ ಗುಣಮಟ್ಟದ ಆಹಾರ ನೀಡಲು ಇದರಿಂದ ಸಾಧ್ಯವೇ ಇಲ್ಲ.
ಜೈಲಿನಲ್ಲಿರುವ ಖೈದಿಗಳಿಗೆ ರಾಜ್ಯ ಸಕರ್ಾರ ದಿನಕ್ಕೆ ಸುಮಾರು 120 ರೂ.ಗಳನ್ನು ಆಹಾರಕ್ಕಾಗಿ ಖಚರ್ು ಮಾಡುತ್ತಿದೆ. ಆದರೆ ವಿದ್ಯಾಥರ್ಿಗಳಿಗೆ-ಶೈಕ್ಷಣಿಕ ಪ್ರಗತಿಯ ಅಗತ್ಯಕ್ಕೆ ತಕ್ಕಂತೆ ಹಣ ಖಚರ್ು ಮಾಡಲು ಸಕರ್ಾರಗಳು ಸಿದ್ದವಿಲ್ಲ.

ಬಹುತೇಕ ಹಾಸ್ಟೆಲ್ಗಳಲ್ಲಿ ವಿದ್ಯಾಥರ್ಿಗಳ ಅಗತ್ಯಕ್ಕೆ ಅನುಗುಣವಾಗಿ ಕನಿಷ್ಠ ಶೌಚಾಲಯಗಳಿಲ್ಲ. ಬಾಡಿಗೆ ಕಟ್ಟಡಗಳಲ್ಲಿ ನಡೆಸುತ್ತಿರುವ ಕೆಲವು ಹಾಸ್ಟೆಲ್ಗಳಂತೂ ಹಂದಿಗೂಡಿಗಿಂತಲೂ ಕೀಳಾಗಿವೆ. ಪ್ರತಿ ಹಾಸ್ಟೆಲ್ಗಳಿಗೂ ಗ್ರಂಥಾಲಯಗಳು ಇರಬೇಕೆಂದು ನಿಯಮವಿದೆ. ಆದರೆ ಅದು ಎಲ್ಲಿಯೂ ಜಾರಿಯಲ್ಲಿಲ್ಲ. ಪಠ್ಯಕ್ರಮ, ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಿರುವ ಪುಸ್ತಕಗಳು, ದಿನಪತ್ರಿಕೆಗಳು ಮತ್ತು ಮಾಸ ಪತ್ರಿಕೆಗಳು ಹಾಸ್ಟೆಲ್ನ ಗ್ರಂಥಾಲಯಗಳಲ್ಲಿ ಸಿಗುತ್ತಿಲ್ಲ. ಕ್ರೀಡಾ ಸಾಮಗ್ರಿಗಳು, ಉಪಕರಣಗಳೂ ಕೂಡ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಗುಣಮಟ್ಟದ ಆಹಾರ, ಶುದ್ದ ಕುಡಿಯುವ ನೀರು, ಸೂಕ್ತ ಕಟ್ಟಡ, ಹಾಸಿಗೆ, ಹೊದಿಕೆಗಳಿಲ್ಲದೆ ವಿದ್ಯಾಥರ್ಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಸ್ಟೆಲ್ ಮತ್ತು ಶೌಚಾಲಯಗಳನ್ನು ಶುಚಿಗೊಳಿಸುವವರಿಗೆ ತಿಂಗಳಿಗೆ ಕೇವಲ 500-1,000 ರೂ.ಗಳನ್ನು ನೀಡಿ ಸಕರ್ಾರ ಅವರನ್ನು ಅವಮಾನಿಸುತ್ತಿದೆ. ಹಾಸ್ಟೆಲ್ಗಳಲ್ಲಿ ಖಾಯಂ ಅಡುಗೆ ಸಿಬ್ಬಂದಿ ನೇಮಕಾತಿ ನಿಂತುಹೋಗಿದೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದರೂ ಅವರಿಗೆ ಸರಿಯಾದ ಸಮಯಕ್ಕೆ ಸೂಕ್ತ ಸಂಬಳ ನೀಡುತ್ತಿಲ್ಲ. ಒಬ್ಬ ವಾರ್ಡನ್ 2ಕ್ಕಿಂತ ಹೆಚ್ಚು ಹಾಸ್ಟೆಲ್ಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಪದವಿ ಪೂರ್ವ ಕಾಲೇಜುಗಳ ತರಗತಿಗಳು ಪ್ರಾರಂಭವಾಗಿ ಎರಡು ತಿಂಗಳುಗಳಾಗಿವೆ. ಪದವಿ ತರಗತಿಗಳು ಸೇರಿದಂತೆ ಡಿಪ್ಲೊಮೋ, ಇಂಜಿನಿಯರಿಂಗ್, ಇನ್ನಿತರ ಕೋಸರ್ುಗಳು ಕೂಡ ಪ್ರಾರಂಭವಾಗಿವೆ. ಉನ್ನತ ಶಿಕ್ಷಣಕ್ಕಾಗಿ ದೂರದ ಗ್ರಾಮೀಣ ಪ್ರದೇಶಗಳಿಂದ ಬೆಂಗಳೂರಿನಲ್ಲಿ ವಿದ್ಯಾಥರ್ಿಗಳು ಪ್ರವೇಶ ಪಡೆದಿರುತ್ತಾರೆ. ಹಾಸ್ಟೆಲ್ಗಳಿಗಾಗಿ ಎಸ್ಸಿ-ಎಸ್ಟಿ ಮತ್ತು ಬಿಸಿಎಂ ಇಲಾಖೆಗಳಿಗೆ ಅಜರ್ಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಇನ್ನೂ ವಿದ್ಯಾಥರ್ಿಗಳ ಆಯ್ಕೆ ಪಟ್ಟಿ ಪ್ರಕಟಗೊಂಡಿಲ್ಲ. ಪ್ರವೇಶ ಕೂಡ ನೀಡಿಲ್ಲ. ಪ್ರತಿನಿತ್ಯ ದೂರದ ವಾಸಸ್ಥಳದಿಂದ ಕಾಲೇಜುಗಳಿಗೆ ಪ್ರಯಾಣ ಮಾಡಲು ಹಣವಿಲ್ಲದೆ ವಿದ್ಯಾಥರ್ಿಗಳು ತೀವ್ರ ತೊಂದರೆಯನ್ನು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ವಿದ್ಯಾಥರ್ಿಗಳಿಗೆ ಸರಿಯಾದ ಮಾಹಿತಿಗಳನ್ನೊದಗಿಸದೆ ಬೇಜವಾಬ್ದಾರಿತನದಿಂದ ವತರ್ಿಸಿ ವಿದ್ಯಾಥರ್ಿಗಳ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ.

ಇಲ್ಲಿಯವರೆಗೂ ಮೆಟ್ರಿಕ್ ನಂತರದ ವಿದ್ಯಾಥರ್ಿನಿಲಯದ ವಿದ್ಯಾಥರ್ಿಗಳಿಗೆ 850 ರೂ. ಮತ್ತು ಮೆಟ್ರಿಕ್ ಪೂರ್ವ ವಿದ್ಯಾಥರ್ಿ ನಿಲಯಗಳ ವಿದ್ಯಾಥರ್ಿಗಳಿಗೆ 750 ರೂ. ಮಾಸಿಕ ಆಹಾರ ಭತ್ಯೆಯನ್ನು ಕೊಡಲಾಗುತ್ತಿತ್ತು. ಇದರಿಂದಾಗಿ ಹಾಸ್ಟೆಲ್ಗಳಲ್ಲಿ ನೀಡುತ್ತಿದ್ದ ಹಾಲು, ಮೊಟ್ಟೆ, ಬಾಳೆಹಣ್ಣು, ಮಾಂಸಾಹಾರ ಇನ್ನಿತರ ಪೌಷ್ಠಿಕ ಆಹಾರದಿಂದ ಹಾಸ್ಟೆಲ್ ವಿದ್ಯಾಥರ್ಿಗಳು ವಂಚಿತರಾಗುತ್ತಿದ್ದಾರೆ ವಿದ್ಯಾಥರ್ಿಗಳ ಹೋರಾಟದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2013-14ನೇ ಸಾಲಿನ ಆಯವ್ಯಯದಲ್ಲಿ ಮೆಟ್ರಿಕ್ ನಂತರದ ವಿದ್ಯಾಥರ್ಿನಿಲಯದ ವಿದ್ಯಾಥರ್ಿಗಳಿಗೆ ಆಹಾರಭತ್ಯೆಯನ್ನು 1,000 ರೂಗೆ, ಮೆಟ್ರಿಕ್ ಪೂರ್ವ ವಿದ್ಯಾಥರ್ಿಗಳಿಗೆ 900ರೂ.ಗಳಿಗೆ ಅಂದರೆ ತಲಾ ವಿದ್ಯಾಥರ್ಿಗೆ 150 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇಷ್ಟಾದರೂ ಏನಾದರೂ ನೆಪ ಹೇಳಿ ವಿದ್ಯಾಥರ್ಿಗಳಿಗೆ ಪೌಷ್ಠಿಕ ಆಹಾರ ನೀಡದೇ ತಪ್ಪಿಸುವ ಆಪಾಯವೂ ಇದೆ. ಆದ್ದರಿಂದ ಹಾಸ್ಟೆಲ್ಗಳಲ್ಲಿ ಹಿಂದೆ ನೀಡುತ್ತಿದ್ದ ಹಾಲು, ಮೊಟ್ಟೆ, ಬಾಳೆಹಣ್ಣು, ಮಾಂಸಾಹಾರ ಇನ್ನಿತರ ಪೌಷ್ಠಿಕಾಂಶ ಆಹಾರವನ್ನು ಈ ತಿಂಗಳಿನಿಂದಲೇ ಮತ್ತೆ ನೀಡಬೇಕೆಂದು ಒತ್ತಡ ತರಬೇಕಾದ ಅಗತ್ಯ ಬಂದಿದೆ.

ವಿದ್ಯಾಥರ್ಿಗಳ ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಬೇಡಿಕೆಗಳನ್ನು ಈಡೇರಿಸಬೇಕೆಂದು ಎಸ್ಎಫ್ಐ ಬೆಂಗಳೂರು ಜಿಲ್ಲಾ ಸಮಿತಿಯು 22, ಜುಲೈ 2013ರಂದು ಜಿಲ್ಲಾ ಪಂಚಾಯತ್ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿತು. ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ವಿಳಂಬ ಮಾಡಬೇಡಿ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಎಸ್ಎಫ್ಐ ಮುಖಂಡರು ಆಗ್ರಹಿಸಿದರು.

ಅಜರ್ಿ ಹಾಕಿದ ಎಲ್ಲಾ ವಿದ್ಯಾಥರ್ಿಗಳಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು. ವಿದ್ಯಾಥರ್ಿಗಳ ಮೊದಲನೇ ಹಂತದ ಆಯ್ಕೆ ಪಟ್ಟಿಯನ್ನು ಕೂಡಲೇ ಪ್ರಕಟಿಸಬೇಕು. ಎಸ್.ಸಿ/ಎಸ್.ಟಿ ಮತ್ತು ಬಿಸಿಎಂ ಹಾಸ್ಟೆಲ್ ವಿದ್ಯಾಥರ್ಿಗಳ ಮಾಸಿಕ ಆಹಾರ ಭತ್ಯೆಯನ್ನು ಬೆಲೆ ಏರಿಕೆಗೆ ತಕ್ಕಂತೆ ಮೆಟ್ರಕ್ಪೂರ್ವ ಹಾಸ್ಟೆಲ್ ವಿದ್ಯಾಥರ್ಿಗಳಿಗೆ ರೂ 3,000 ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾಥರ್ಿಗಳಿಗೆ ರೂ. 3,500 ಗಳನ್ನು ನೀಡಬೇಕು. ಅಗತ್ಯಕ್ಕೆ ತಕ್ಕಂತೆ ಹೆಚ್ಚು ಹಾಸ್ಟೆಲ್ಗಳನ್ನು ಪ್ರಾರಂಭಿಸಬೇಕು. ಎಲ್ಲಾ ಹಾಸ್ಟೆಲ್ಗಳಿಗೆ ಖಾಯಂ ಭದ್ರತಾ ಸಿಬ್ಬಂದಿ (ಕಾವಲುಗಾರರನ್ನು) ನೇಮಿಸಬೇಕು. ವಿದ್ಯಾಥರ್ಿನಿಯರಿಗೆ ಅಗತ್ಯಕ್ಕೆ ತಕ್ಕಂತೆ ಪ್ರತ್ಯೇಕ ಹೆಚ್ಚು ಹಾಸ್ಟೆಲ್ಗಳನ್ನು ಪ್ರಾರಂಭಿಸಬೇಕು. ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ, ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಶೌಚಾಲಯ, ದಿನ ಪತ್ರಿಕೆಗಳು, ಮಾಸಪತ್ರಿಕೆಗಳು, ಪ್ರಥಮ ಚಿಕಿತ್ಸಾ ಕೇಂದ್ರ, ಕಂಪ್ಯೂಟರ್ಸ್, ಇಂಟರ್ನೆಟ್ ಸೌಕರ್ಯ, ಕ್ರೀಡಾ ಸಾಮಾಗ್ರಿಗಳು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ನೀಡಬೇಕು.

ಪ್ರತಿ ತಿಂಗಳಿಗೊಮ್ಮೆ ಹಾಸ್ಟೆಲ್ ವಿದ್ಯಾಥರ್ಿಗಳಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು. ಹಾಸ್ಟೆಲ್ಗಳಿಗೆ ಅಗತ್ಯವಿರುವ ನಿಲಯ ಪಾಲಕರು ಸೇರಿದಂತೆ ಅಡುಗೆ ತಯಾರಕರು, ಸಹಾಯಕರು, ಸ್ವಚ್ಛತೆಗೊಳಿಸುವವರು ಇತರೆ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವುದನ್ನು ಕೈ ಬಿಟ್ಟು ಖಾಯಂ ಆಗಿ ನೇಮಕ ಮಾಡಿಕೊಳ್ಳಬೇಕು. ಹಾಸ್ಟೆಲ್ಗಳಿಗೆ ಗ್ಯಾಸ್ ಸಿಲಿಂಡರ್ ಅನ್ನು ಸಬ್ಸಿಡಿ ದರದಲ್ಲಿ ಪೂರೈಸಬೇಕು ಮತ್ತು ಪಡಿತರ ವ್ಯವಸ್ಥೆ ಮೂಲಕ ಅಗತ್ಯವಿರುವಷ್ಟು ಅಕ್ಕಿ, ಬೇಳೆಕಾಳುಗಳು, ಎಣ್ಣೆ, ಸೋಪು, ಬಟ್ಟೆ, ಪುಸ್ತಕ, ಪೆನ್ನು ಇನ್ನಿತರ ವಿದ್ಯಾಥರ್ಿಗಳಿಗೆ ಅಗತ್ಯವಿರುವ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಸರಬರಾಜು ಮಾಡಬೇಕು. ರಾಜ್ಯದಲ್ಲಿ ಬಾಕಿಯಿರುವ ಎಲ್ಲಾ ಹಂತದ ವಿದ್ಯಾಥರ್ಿ ವೇತನವನ್ನು ಬಿಡುಗಡೆಗೊಳಿಸಬೇಕು ಮತ್ತು ವಿದ್ಯಾಥರ್ಿ ವೇತನದ ಪ್ರಮಾಣವನ್ನು ಹೆಚ್ಚಿಸಬೇಕು. ವಿದ್ಯಾಥರ್ಿ ವೇತನ ಪಡೆಯಲು ವಿದ್ಯಾಥರ್ಿಗಳಿಗೆ ಅನುಕೂಲವಾಗುವಂತೆ ಹಾಸ್ಟೆಲ್ ವಿದ್ಯಾಥರ್ಿಗಳಿಗೆ ಸಕರ್ಾರವೇ ಜವಾಬ್ದಾರಿ ವಹಿಸಿ ಶೂನ್ಯ ಠೇವಣಿ ಖಾತೆ ತೆರೆಯಲು ಕ್ರಮ ಕೈಗೊಳ್ಳಬೇಕು. ಎಸ್ಸಿಪಿ (ವಿಶೇಷ ಘಟಕ ಯೋಜನೆ) ಮತ್ತು ಟಿಸಿಪಿ (ಟ್ರೈಬಲ್ ಉಪಯೋಜನೆ) ಯ ಮೂಲಕ ಎಸ್.ಸಿ/ಎಸ್.ಟಿ ಹಾಸ್ಟೆಲ್ ವಿದ್ಯಾಥರ್ಿಗಳಿಗೆ ನೀಡುತ್ತಿರುವ ಅನುದಾನ ದುರ್ಬಳಕೆ ಆಗುತ್ತಿರುವುದನ್ನು ತಡೆಗಟ್ಟಬೇಕು. ಹಾಸ್ಟೆಲ್ ವಿದ್ಯಾಥರ್ಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬೇಕು ಎಂದು ಎಸ್ಎಫ್ಐ ರಾಜ್ಯ ಅಧ್ಯಕ್ಷ ಅನಂತ್ನಾಯಕ್.ಎನ್, ಆಗ್ರಹಿಸಿದರು. ಕಾರ್ಯದಶರ್ಿ ಹುಳ್ಳಿ ಉಮೇಶ್, ಜಿಲ್ಲಾ ಅಧ್ಯಕ್ಷ ಮುನಿರಾಜು.ಎಂ, ಕಾರ್ಯದಶರ್ಿ ಚಿಕ್ಕರಾಜು.ಎಸ್. ಮುಂತಾದವರು ನೇತೃತ್ವ ವಹಿಸಿದ್ದರು. ಬೆಂಗಳೂರು ನಗರ ಜಿಲ್ಲೆಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳೊಂದಿಗೆ ವಿದ್ಯಾಥರ್ಿಗಳ ನಿಯೋಗ ಚಚರ್ೆ ನಡೆಸಿತು. ಜಿಲ್ಲಾ ಮುಖಂಡರಾದ ಯುವರಾಜು.ಎಂ.ಪಿ, ವೆಂಕಟೇಶ್.ಕೆ ರಮೇಶ್.ಎಂ.ಪಿ, ಶೃತಿ, ಅಶ್ವಥ್, ಹನಮಂತ ದುರ್ಗದ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0

Donate Janashakthi Media

Leave a Reply

Your email address will not be published. Required fields are marked *