ಎರ್ನಾಕುಲಂ: ಕೇರಳದ ಕಾಕ್ಕನಾಡ್‌ನ ಮಾವೇಲಿಪುರಂನಲ್ಲಿರುವ ರೆಸ್ಟೊರೆಂಟ್‌ನಿಂದ ಶವರ್ಮಾ ಸೇವಿಸಿ ಫುಡ್ ಪಾಯಿಸನಿಂಗ್‌ಗೆ ಒಳಗಾಗಿ ವೆಂಟಿಲೇಟರ್‌ನಲ್ಲಿದ್ದ ಯುವಕ ಅಕ್ಟೋಬರ್ 25ರ ಬುಧವಾರ ನಿಧನರಾಗಿದ್ದಾರೆ. ಸಂತ್ರಸ್ತ ಯುವಕನನ್ನು ಪಾಲಾ ಮೂಲದ ರಾಹುಲ್ ಡಿ ನಾಯರ್ (22) ಎಂದು ಗುರುತಿಸಲಾಗಿದೆ. ಕೊಚ್ಚಿನ್ ವಿಶೇಷ ಆರ್ಥಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದ ಅವರು, ಚಿಟ್ಟೆತುಕರದಲ್ಲಿ ತನ್ನ ಸ್ನೇಹಿತರೊಂದಿಗೆ ತಂಗಿದ್ದರು.
ಕಾಕ್ಕನಾಡಿನ ಒಂದೇ ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ ಸುಮಾರು 10 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ನಾಲ್ವರು ರೋಗಿಗಳು ಇನ್ಫೋಪಾರ್ಕ್‌ನ ಉದ್ಯೋಗಿಗಳಾಗಿದ್ದು, ಇತರ ಆರು ಮಂದಿಯನ್ನು ಐಷ್ನಾ ಅಜಿತ್ (34), ಅಥರ್ವ್ ಅಜಿತ್ (8), ಅಶ್ಮಿ ಅಜಿತ್ (3), ಶ್ಯಾಮಜಿತ್ (30), ಅಂಜಲಿ (26) ಮತ್ತು ಶರತ್ (26) ಎಂದು ಗುರುತಿಸಲಾಗಿದೆ. ಇವರೆಲ್ಲರ ಪರಿಸ್ಥಿತಿಗಳು ಸ್ಥಿರವಾಗಿವೆ.
ಇದನ್ನೂ ಓದಿ: ಇಸ್ರೇಲ್ ಪರ ಬೇಹುಗಾರಿಕೆ | ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಕತಾರ್‌ನಲ್ಲಿ ಮರಣದಂಡನೆ
ಮೃತ ರಾಹುಲ್ ಸೇರಿದಂತೆ ವಿಷ ಆಹಾರ ಸೇವಿಸಿದ ವ್ಯಕ್ತಿಗಳಿಂದ ಸಂಗ್ರಹಿಸಲಾದ ರಕ್ತದ ಮಾದರಿಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ಇರುವುದು ದೃಢಪಡಿಸಲಾಗಿದೆ. ಸಾಲ್ಮೊನೆಲ್ಲಾ ಸೋಂಕು ಸಾಮಾನ್ಯವಾಗಿ ಕಚ್ಚಾ ಅಥವಾ ಬೇಯಿಸದ ಮಾಂಸ, ಮೊಟ್ಟೆ ಅಥವಾ ಮೊಟ್ಟೆ ಉತ್ಪನ್ನಗಳು ಮತ್ತು ಪಾಶ್ಚರೀಕರಿಸದ ಹಾಲನ್ನು ಸೇವಿಸಿದಾಗ ಉಂಟಾಗುತ್ತದೆ.
ಈ ವೈರಸ್ ಸೋಂಕಿ 8 ಗಂಟೆಗಳ ನಂತರ ಹೆಚ್ಚಿನ ಜನರಲ್ಲಿ ಅತಿಸಾರ, ಜ್ವರ ಮತ್ತು ಹೊಟ್ಟೆ ನೋವು ಉಂಟಾಗಲಿದೆ.
ಘಟನೆಯ ನಂತರ ಕಾಕ್ಕನಾಡ್‌ನಲ್ಲಿರುವ ಲೇ ಹಯಾತ್ ರೆಸ್ಟೋರೆಂಟ್ ಅನ್ನು ತೃಕ್ಕಾಕರ ಪುರಸಭೆ ಮುಚ್ಚಿದೆ. ಆದರೆ ಚಿಕಿತ್ಸೆ ಪಡೆದ ರೋಗಿಗಳು ಶವರ್ಮಾ ಮಾತ್ರವಲ್ಲದೆ ವಿಭಿನ್ನ ಆಹಾರ ಪದಾರ್ಥಗಳನ್ನು ಸೇವಿಸಿದ್ದರು ಎಂದು ವರದಿಗಳು ಹೇಳಿವೆ.
ರೆಸ್ಟೋರೆಂಟ್ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 284 ಮತ್ತು ಸೆಕ್ಷನ್ 308 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತೃಕ್ಕಾಕರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಡಿಯೊ ನೋಡಿ: ರಸ್ತೆ ಸಾರಿಗೆ ಕಾರ್ಮಿಕರನ್ನು ಶೋಷಿಸುವ ಮೋಟಾರು ತಿದ್ದುಪಡಿ ಕಾಯ್ದೆ ವಾಪಸ್ಸಾಗಲಿ Janashakthi Media