ಎನ್ ಚಿನ್ನಸ್ವಾಮಿ ಸೋಸಲೆ
ಭಾರತ ಧರ್ಮ ಹಾಗೂ ಸಾಮಾಜಿಕ ವ್ಯವಸ್ಥೆಗಳು *ದೇವರ ಹೆಸರಿನಲ್ಲಿ* ಭಯದಿಂದಲೇ ವಿಕೃತವಾಗಿ ಸೃಷ್ಟಿ ಮಾಡಲಾಗಿರುವುದು ಸತ್ಯ. ಇಂತಹ ಮಾನವ ವಿರೋಧಿ ನೀತಿಗಳನ್ನು ದೇವರು ಎಂಬುವುದು ಬಯಸಿತು – ಬಯಸುತ್ತದೆ – ಬಯಸುವಂತೆ ಮಾಡಲಾಗಿದೆ – ಬಯಸುವಂತೆ ಮಾಡೇ ಮಾಡುತ್ತದೆ…. ಎಂಬ ಬಹುದೊಡ್ಡ ಇಕ್ಕಟ್ಟು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಂದೆಂದಿಗೂ, ಯಾವ ಕ್ಲಿಷ್ಟ ಸಂದರ್ಭದಲ್ಲಿಯೂ ಬಹುದೊಡ್ಡ ಶ್ರಮಿಕ ವರ್ಗ ಪ್ರಶ್ನೆಯನ್ನೇ ಮಾಡದೆ – ಕೇವಲ ಒಪ್ಪಿಕೊಳ್ಳಲೇ ಬೇಕಾದ ಬಲವಂತದ ಸಂದರ್ಭವನ್ನು ಸೂಚಿಸಲಾಯಿತು.
ನಮ್ಮ ದೇಶದಲ್ಲಿ ಧರ್ಮದ ಹಿನ್ನೆಲೆಯಿಂದ ಒಬ್ಬ ಮನುಷ್ಯ ಎಷ್ಟೇ *ಶುದ್ಧ* ಎಂದು ಹೇಳಿಕೊಂಡರೂ ಸಹ, ಅದೇ ಮನುಷ್ಯ *ಜಾತಿ* ವಿಷಯ ಬಂದಾಗ ಅಸಹ್ಯ ಹುಟ್ಟಿಸುವ ಮಾದರಿಯಲ್ಲಿ ಅಶುದ್ಧನಾಗಿರುತ್ತಾನೆ.
*ಶುದ್ಧ* ಎನ್ನುವುದು “ತಾತ್ಕಾಲಿಕ” ವಾಗಿ ಈ ಭೂಮಿ ಮೇಲೆ ಜೀವಂತ ಇರುವ ದೇಹದ ಮೇಲಿರಲ್ಲ – ಬದಲಿಗೆ ಈ ಭೂಲೋಕದಲ್ಲಿ ಇತಿಹಾಸ ನಿರ್ಮಿಸುವ ಮೂಲಕ ನಿಲ್ಲುವ ಶಾಶ್ವತವಾದ ಮನಸ್ಸಿನಲ್ಲಿರುವುದು.
ಏಕೆಂದರೆ , ವ್ಯಕ್ತಿಯ ದೇಹ ಇತಿಹಾಸವಾಗುವುದಿಲ್ಲ – ಬದಲಿಗೆ ಅವನು ಈ ಭೂಮಿಯನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ಜೀವಿಸಿದ ಆಸೆಯ ನಿರಾಕರಣೆ-ಕಾಯಕ ಸಿದ್ಧಾಂತದ ಪಾಲನೆ – ಸರ್ವ ಜನರನ್ನು ಸಮಾನಾಗಿ ಕಾಣುವ ‘ದಯವೇ ಧರ್ಮದ ಮೂಲವಯ್ಯ’ ಎಂಬ ಧರ್ಮ ಪ್ರತಿಪಾದನೆ – ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಮ ಸಮಾಜದ ಮಾನವ ಸಮಸಂಸ್ಕೃತಿಯ ತತ್ವ ಸಿದ್ಧಾಂತದಡಿಯಲ್ಲಿನ ಒಡಲಾಳದ ರಾಷ್ಟ್ರೀಯ ಸಿದ್ಧಾಂತವನ್ನೇ ತನ್ನ ಪವಿತ್ರ ಕರ್ತವ್ಯವೆಂದು ನಡೆಸಿಕೊಂಡು ಬದುಕಿದ್ದ ಮಾದರಿಯೇ *ಮಾನವತೆಯ ಶುದ್ಧ* ಮಾದರಿ.
ಇದನ್ನು ಹೊರತುಪಡಿಸಿ, ಮನಸ್ಸಿನಲ್ಲಿ ಶತಶತಮಾನಗಳ ಶ್ರೇಣಿಕೃತ ವ್ಯವಸ್ಥೆಯ ಜಾತಿ ಹಾಗೂ ಧರ್ಮದ ಅಂಧಕಾರದ ಕಾಶ್ಮಲವನ್ನೇ ತುಂಬಿಕೊಂಡು ದೇಹದಲ್ಲಿ ಮಾತ್ರ ಕ್ಷಣಿಕ ಪರಿಮಳವನ್ನು ಸೂಸುವುದು ಅರೆ ಗಳಿಗೆಯಲ್ಲಿ ಮಾಯವಾಗುವ ನೀರಿನ ಮೇಲಿನ ಗುಳ್ಳೆಯೇ ಸರಿ. ಭಾರತ ಭೂಮಿಯ ಮೇಲೆ ಜನಿಸಿರುವ ನಮ್ಮೆಲ್ಲರ ಬದುಕು ಇದಾಗಬಾರದು.
ಈ ಮಾದರಿ ಕ್ಷಣಾರ್ಧದಲ್ಲಿ ಹಾರಿಹೋಗುವ *ನೀರಿನ ಮೇಲಿನ ಗುಳ್ಳೆಯ ಇತಿಹಾಸ ಹಾಗೂ ಚರಿತ್ರೆ ರಚನೆಯ ಬದುಕೇ* ನಮ್ಮ ದೇಶದ ಐಕ್ಯತೆಯನ್ನು ಸಂಕುಚಿತ ಗೊಳಿಸುತ್ತಿದೆ.
ಇದನ್ನೂ ಓದಿ: ಪೊಲೀಸ್ ಸಂಸ್ಮರಣಾ ದಿನ| ಪ್ರಾಣತ್ಯಾಗ ಮಾಡಿದ ಪೊಲೀಸರಿಗೆ ಗೌರವ ವಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಭಾರತ ಧರ್ಮ ಹಾಗೂ ಸಾಮಾಜಿಕ ವ್ಯವಸ್ಥೆಗಳು *ದೇವರ ಹೆಸರಿನಲ್ಲಿ* ಭಯದಿಂದಲೇ ವಿಕೃತವಾಗಿ ಸೃಷ್ಟಿ ಮಾಡಲಾಗಿರುವುದು ಸತ್ಯ. ಇಂತಹ ಮಾನವ ವಿರೋಧಿ ನೀತಿಗಳನ್ನು ದೇವರು ಎಂಬುವುದು ಬಯಸಿತು – ಬಯಸುತ್ತದೆ – ಬಯಸುವಂತೆ ಮಾಡಲಾಗಿದೆ – ಬಯಸುವಂತೆ ಮಾಡೇ ಮಾಡುತ್ತದೆ…. ಎಂಬ ಬಹುದೊಡ್ಡ ಇಕ್ಕಟ್ಟು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಂದೆಂದಿಗೂ, ಯಾವ ಕ್ಲಿಷ್ಟ ಸಂದರ್ಭದಲ್ಲಿಯೂ ಬಹುದೊಡ್ಡ ಶ್ರಮಿಕ ವರ್ಗ ಪ್ರಶ್ನೆಯನ್ನೇ ಮಾಡದೆ – ಕೇವಲ ಒಪ್ಪಿಕೊಳ್ಳಲೇ ಬೇಕಾದ ಬಲವಂತದ ಸಂದರ್ಭವನ್ನು ಸೂಚಿಸಲಾಯಿತು. ಇದು ಅದೆಷ್ಟೋ ಹಸಿವು- ಆಕ್ರಂದನಗಳ ನಡುವೆಯೂ ತನಗೆ ತಾನೆ ಶತಶತಮಾನಗಳಿಂದ ಅಜ್ಞಾನವನ್ನೇ ಹಾಸುಒಕ್ಕಾಕಿಸಿಕೊಂಡಿರುವವರ ಮನೆ ಹಾಗೂ ಮನನಲ್ಲಿ ನೆಲೆ ನಿಂತಿರುವ ಚರಿತ್ರೆಯಾಗಿದೆ.
ಈ ಭಾರತದ ಮಣ್ಣಿನಲ್ಲಿ ಮಾನವ ಮೂಲಭೂತ ಹಕ್ಕುಗಳ ಪ್ರಶ್ನೆ ಎಲ್ಲಿ ಹುಟ್ಟಿಕೊಳ್ಳುತದೋ ಅಲ್ಲಿ , ಆ ಸಂದರ್ಭದಲ್ಲಿ ಸಂಬಂಧಿಸಿದಂತೆ ಹೊಸ ಹೊಸ ಅವತಾರಗಳ ದೇವಾನು ದೇವತೆಗಳು ಸೃಷ್ಟಿಯಾಗಿ *ವೈಭವ* ವನ್ನು ಮರು ಗಳಿಸಿಕೊಡುತ್ತವೆ . ಈ ಕಾರಣಕ್ಕಾಗಿ ಕಾಲಕಾಲಕ್ಕೆ ಹೊಸ ಹೊಸ ದೇವಾನುದೇವತೆಗಳು ವಿವಿಧ ರೂಪದಲ್ಲಿ ಕೆಲವೇ ಕೆಲವು ಜನ ವರ್ಗದಿಂದ ಸೃಷ್ಟಿಯಾಗುತ್ತಲೂ ಇರುತ್ತವೆ. ಈ ಸೃಷ್ಟಿಗೆ ಮೂಲ ಕಾರಣ ತಮಗೆ ತಾವೇ ಯುಗ ಯುಗಗಳಿಗೂ ಶ್ರೇಷ್ಠರು ಎಂದು ಗುರುತಿಸಿಕೊಳ್ಳುವುದೇ ಆಗಿದೆ . ದೇವರ ಹೆಸರಿನ ಹಿನ್ನೆಲೆಯಿಂದ ತಮ್ಮ ಶ್ರೇಷ್ಠತೆ ಗುರುತಿಸಿಕೊಳ್ಳಲು ಹೊರಟವರ ಮುಂದೆ ಕಾಯಕದ ಮೂಲಕ ತಮ್ಮ ಶ್ರೇಷ್ಠತೆಯನ್ನು ಗುರುತಿಸಿಕೊಳ್ಳಲು ಮುಂದಾದವರು ಶಾಶ್ವತವಾಗಿ ಸೋಲುತ್ತಿದ್ದಾರೆ. ಏಕೆಂದರೆ ಕಾಯಕ ವಾಸ್ತವ. ಅದು ಕಣ್ಣಿಗೆ ಕಾಣಿಸುತ್ತದೆ – ದೇವರು ಪುರಾಣ, ಅದು ಎಂದೆಂದಿಗೂ ಕಣ್ಣಿಗೆ ಕಾಣಿಸುವುದೇ ಇಲ್ಲ. ನಮ್ಮ ಬಹುಪಾಲು ಜನರು ಕಣ್ಣಿಗೆ ಕಾಣದ ದೇವರ ಬೆನ್ನುತ್ತಿದವರೇ ಆಗಿದ್ದಾರೆ. ಇದಾಗಬಾರದು.
ಇಡೀ ಭಾರತ ದೇಶದ 145 ಕೋಟಿ ಜನರನ್ನು ಒಂದು ಮಾಡಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ನವ ಭಾರತದ ಶ್ರೇಷ್ಠ ಗ್ರಂಥ ಸಂವಿಧಾನದ ಆಶಯದಂತೆ ನಾವೆಲ್ಲರೂ ಸಮಾನರಾಗಿ ಬದುಕಿ- ಪ್ರಪಂಚಕ್ಕೆ ಮಾದರಿಯಾಗುವ ಶ್ರೇಷ್ಠತೆಯ ಸಮ ಸಮಾಜದ ಭಾರತವನ್ನು ಕಟ್ಟಬೇಕಾಗಿದೆ.
ಇದೆ… ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಂದೆಂದಿಗೂ ಪ್ರಶ್ನೆ ಮಾಡದೆ- ಕೇವಲ ವೈಭವವಾಗಿಯೇ ಏಕಮುಖ ಮಾದರಿಯಲ್ಲಿಯೇ ಸಾಂಪ್ರದಾಯಿಕ ದಾಖಲೆಗಳನ್ನೇ ಆಧರಿಸಿ ರಚಿಸಿರುವ ಭಾರತ ಹಾಗೂ ಭಾರತೀಯರ ಚರಿತ್ರೆಯನ್ನು ಒಡಲಾಳದಿಂದ ಗ್ರಹಿಸಿ ನಿರಾಕರಿಸಿದ್ದು – ಬದಲಿಗೆ ವಾಸ್ತವದ ಇತಿಹಾಸ ಹಾಗೂ ಚರಿತ್ರೆಯನ್ನು ಒಡಲಾಳದಿಂದ ಗ್ರಹಿಸಿ ದಾಖಲೆ ಸಹಿತ ಅನಾವರಣಗೊಳಿಸಿದ್ದು.
ವಿಡಿಯೋ ನೋಡಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನಲ್ಲಿ ಶಾಂತಿ ನೆಲೆಸಲಿ ಎಂದವರನ್ನು ಬಂಧಿಸಿದ ಸರ್ಕಾರ! Janashakthi Media