ಅಂಚೆ ಕಛೇರಿಗೆ ದಿಢೀರ್ ಭೇಟಿ ವಿವಿಧ ಸಮಸ್ಯೆಗಳ ಪರಿಹಾರಕ್ಕೆ | ಡಿವೈಎಫ್‌ಐ ನಿಯೋಗ ಮನವಿ

ಬಳ್ಳಾರಿ:  ತೋರಣಗಲ್ಲು ಗ್ರಾಮದ ಅಂಚೆ ಕಛೇರಿ ಮುಂದೆ, ಡಿವೈಎಫ್‌ಐ ನ ಪದಾಧಿಕಾರಿಗಳು  ದಿಢೀರ್ ಪ್ರತಿಭಟನೆ ನಡೆಸಿದರು. ವಯಸ್ಕರರು, ಅಂಗವಿಕಲರು ಮತ್ತು ವಿಧವೆ ಮಹಿಳೆಯರ ಪಿಂಚಣಿ ವಿತರಣೆ ಸೇರಿದಂತೆ ಇತರೇ ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹಿಸಲಾಯಿತು.

ಇದನ್ನೂ ಓದಿ:ನೀರಿನ ಅಭಾವ : ಶಾಶ್ವತ ಪರಿಹಾರಕ್ಕೆ ಡಿವೈಎಫ್‌ಐ ಆಗ್ರಹ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ತೋರಣಗಲ್ಲು ಗ್ರಾಮದಲ್ಲಿ ಅಕ್ಟೋಬರ್-21‌ ರಂದು ಡಿವೈಎಫ್‌ಐ ಪದಾಧಿಕಾರಿಗಳ ನಿಯೋಗ, ಅಂಚೆ ಕಛೇರಿಗೆ  ಭೇಟಿ ಮಾಡಿ ವೃದ್ಧರು, ವಿಧವೆ ತಾಯಂದಿರು ಮತ್ತು ಅಂಗವಿಕಲರು ತಮ್ಮ ಪಿಂಚಣಿಯನ್ನು ಪಡೆಯಲು ಅಂಚೆ ಕಚೇರಿಗೆ ಅಲೆದಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಪೋಸ್ಟ್ ಮ್ಯಾನ್ ಗಳು, ನಿವಾಸ ಪ್ರದೇಶಗಳಿಗೆ ಹೋಗಿ ಪಿಂಚಣಿಯನ್ನು ಕೊಡುತ್ತಿದ್ದರು. ಆದರೆ ಇತ್ತೀಚಿನ ತಿಂಗಳಲ್ಲಿ ನಿಲ್ಲಿಸಿದ ಕಾರಣ ಸುತ್ತ ಮುತ್ತಿನ ಹಳ್ಳಿಗಳಿಂದ ಬಂದು ಪಿಂಚಣಿ ಸೌಲಭ್ಯ ಪಡೆಯಲು ಹರಸಾಹಸ ಪಡುತ್ತಿದ್ದಾರೆ.  ಸುಸ್ತಾಗಿ ಅನಾರೋಗ್ಯದಿಂದ ಬಳಲುವ ಪರಿಸ್ಥಿತಿ ಬಂದಿದೆ.  ಫಲಾನುಭವಿಗಳಿಗೆ ಪಿಂಚಣೆ ನೀಡಿವಾಗ, ಕೆಲವು ಕಡೆ ಪೋಸ್ಟ ಮ್ಯಾನ್ ಗಳು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಡಿವೈಎಫ್‌ಐ ವತಿಯಿಂದ ಸುಭಾಶ್‌ ಚಂದ್ರಬೋಸ್‌ ಜನ್ಮದಿನ ಆಚರಣೆ

ಬೇಡಿಕೆಗಳು:

  • ಪಿಂಚಣಿ ಪಡೆಯುವ ಎಲ್ಲಾ ಫಲಾನುಭವಿಗಳಿಗೆ ನಿಗದಿತ ವೇಳೆಗೆ ಸಮರ್ಪಕವಾಗಿ ವಿತರಣೆ ಆಗಬೇಕು.
  • ಅಂಚೆ ಕಚೇರಿಯ ಸಮಯದ ವೇಳೆಯಂತೆ ಬೆಳಗ್ಗೆ 8 ರಿಂದ ಸಂಜೆ 4:00 ಗಂಟೆ ವರೆಗೆ ಸಾರ್ವಜನಿಕರ ಕರ್ತವ್ಯ ಕೆಲಸಕ್ಕಾಗಿ ಕಚೇರಿ ಬಾಗಿಲು ತೆಗೆಯಬೇಕು.
  • ಗ್ರಾಮದ ಗ್ರಾಮದ ಪ್ರತಿ ವಾರ್ಡುಗಳ ಫಲಾನುಭವಿಗಳ ಮನೆಗಳಿಗೆ ಹೋಗಿ ಪೋಸ್ಟ್ ಮ್ಯಾನ್ ಗಳು ಪಿಂಚಣಿ ನೀಡಬೇಕು ಯಾವುದೇ ತಾರತಮ್ಯ ಹಣದ ಆಮಿಷವಿಲ್ಲದೆ ಕೊಡಬೇಕು.
  • ತಾಳೂರು ಗ್ರಾಮದಲ್ಲಿ ಪ್ರತ್ಯೇಕ ಅಂಚೆ ಕಚೇರಿ ಕಟ್ಟಡ ನಿರ್ಮಿಸಿ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಮತ್ತು ಪೋಸ್ಟ್ ಮ್ಯಾನ್ ಗಳ ಹಣ ಪಡೆದು ಪಿಂಚಣಿಯನ್ನು ಕೊಡುವ ದಂದೆಯನ್ನು ಈ ಕೂಡಲೇ ನಿಲ್ಲಿಸಬೇಕು.
  • ಅಂಚೆ ಕಚೇರಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆ ಮಾಡಬೇಕು.

ಈ ಮೇಲಿನ ಎಲ್ಲಾ ಸಮಸ್ಯೆಗಳು ಸರಿಪಡಿಸಬೇಕು ಮತ್ತು ಒಂದು ಸಭೆ ನಿಗದಿ ಮಾಡಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ಉಪಾಧ್ಯಕ್ಷರು ಕಾಲೂಬ, ಎಸ್‌ಏಫ್‌ಐ ರಾಜ್ಯ ಮುಖಂಡ ಶಿವು ತೋರಣಗಲ್ಲು, ಗ್ರಾಮ ಘಟಕದ ಕಾರ್ಯದರ್ಶಿ ಲೋಕೇಶ್ , ಮುಖಂಡರುಗಳಾದ ಅರ್ಜುನ್,ನಂದೀಶ್,ಅನೀಲ್,ಶಂಕರ, ಡಿಎಚ್‌ಎಸ್‌ ನ ಎ.ಸ್ವಾಮಿ ಇತರರು ಇದ್ದರು.

ವಿಡಿಯೋ ನೋಡಿ:ಮುಂಬಡ್ತಿ ಗೊಂದಲ ನಿವಾರಣೆಗೆ ಆಗ್ರಹಿಸಿ ಶಿಕ್ಷಕ – ಉಪನ್ಯಾಸಕರ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *