ಮುಂಬರಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಎಲ್ಲಾ ನಾಗರಿಕರಿಗೆ 25 ಲಕ್ಷ ರೂ ಆರೋಗ್ಯ ವಿಮೆ, ಒಬಿಸಿಗಳಿಗೆ ಶೇ. 27 ಮೀಸಲಾತಿ ಸೇರಿದಂತೆ ಹಲವಾರು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.
ಕಾಂಗ್ರೆಸ್ ತನ್ನ 106 ಪುಟಗಳ ಪ್ರಣಾಳಿಕೆಯಲ್ಲಿ 59 ಭರವಸೆಗಳನ್ನು ಪಟ್ಟಿ ಮಾಡಿದ್ದು, ರೈತರು, ಮಹಿಳೆಯರು ಮತ್ತು ಸರ್ಕಾರಿ ನೌಕರರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳಿಗೆ ಹಲವು ಭರವಸೆಗಳನ್ನು ನೀಡಿದೆ.ಪಕ್ಷವು ತನ್ನ ಪ್ರಣಾಳಿಕೆಗೆ ವಚನಪತ್ರ ಎಂದು ಹೆಸರಿಟ್ಟಿದೆ.
ಹೆಣ್ಣುಮಕ್ಕಳ ಮದುವೆಗೆ 1 ಲಕ್ಷ ರೂ ನೀಡಲಾಗುತ್ತದೆ, ನಮ್ಮ ಪ್ರಣಾಳಿಕೆಗೆ 9 ಸಾವಿರಕ್ಕೂ ಹೆಚ್ಚು ಸಲಹೆಗಳನ್ನು ಕಳುಹಿಸಿದ್ದಕ್ಕಾಗಿ ಮಧ್ಯಪ್ರದೇಶದ ಜನರಿಗೆ ಧನ್ಯವಾದಗಳು ಎಂದಿದ್ದಾರೆ. ಅನೇಕ ಸಂಘ, ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಿದ್ದೇವೆ, ಅಂಚೆ ಮೂಲಕವೂ ಸಲಹೆಗಳು ಬಂದಿವೆ. ಅವುಗಳ ಆಧಾರದ ಮೇಲೆ ಪ್ರಾಮಿಸರಿ ನೋಟ್ ಸಿದ್ಧಪಡಿಸಿದ್ದೇವೆ, ಸಾಮಾನ್ಯ ಜನರಿಗೆ ಸಂಬಂಧಿಸಿದ 59 ಸಮಸ್ಯೆಗಳನ್ನು ಪ್ರಾಮಿಸರಿ ನೋಟ್ನಲ್ಲಿ ಸೇರಿಸಲಾಗಿದೆ. ರಾಜ್ಯಕ್ಕೆ ಕಾಂಗ್ರೆಸ್ ಬಂದರೆ ಸಮೃದ್ಧಿಯೂ ಬರುತ್ತದೆ ಎಂದು ಕಮಲ್ನಾಥ್ ಹೇಳಿದ್ದಾರೆ.
ಕಾಂಗ್ರೆಸ್ ಮಧ್ಯಪ್ರದೇಶ ಜನರಿಗೆ ನೀಡಿದ ಭರವಸೆಗಳು
ಹಳೆಯ ಪಿಂಚಣಿ ಯೋಜನೆ ಅನುಷ್ಠಾನ -100 ಯೂನಿಟ್ವರೆಗೆ ಉಚಿತ ವಿದ್ಯುತ್ -200 ಯೂನಿಟ್ವರೆಗೆ ಅರ್ಧದಷ್ಟು ವಿದ್ಯುತ್ ಬಿಲ್ -ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ. -ರೈತರ ಸಾಲ ಮನ್ನಾ -ಎಲ್ಪಿಜಿ ಗ್ಯಾಸ್ ಸಿಲಿಂಡರ್ 500 ರೂ. -ರೈತರಿಂದ ಗೋಧಿ ಕ್ವಿಂಟಾಲ್ಗೆ 2,600 ರೂ. ಕೊಟ್ಟು ಖರೀದಿ -ಪ್ರತಿ ಕ್ವಿಂಟಾಲ್ಗೆ 2,500 ರೂ,ನಂತೆ ಭತ್ತ ಖರೀದಿ -25 ಲಕ್ಷ ರೂ ಆರೋಗ್ಯ ವಿಮೆ -10 ಲಕ್ಷ ರೂ. ಅಪಘಾತ ವಿಮೆ -ಹೆಣ್ಣುಮಕ್ಕಳ ಮದುವೆ 1 ಲಕ್ಷ ರೂ. -ಐಪಿಎಲ್ ಮಧ್ಯಪ್ರದೇಶ ತಂಡ ರಚನೆ -ಗ್ರಾಮ ಮಟ್ಟದಲ್ಲಿ ಒಂದು ಲಕ್ಷ ಹೊಸ ಹುದ್ದೆಗಳನ್ನು ಸೃಷ್ಟಿಸುವ ಭರವಸೆ.
ಇದನ್ನೂ ಓದಿ: ಮಣಿಪುರಕ್ಕಿಂತ ಇಸ್ರೇಲ್ ಬಗ್ಗೆ ಪ್ರಧಾನಿ ಮೋದಿಗೆ ಹೆಚ್ಚು ಕಾಳಜಿ : ರಾಹುಲ್ ಗಾಂಧಿ
ತೆಲಂಗಾಣದಲ್ಲಿ ಕಾಂಗ್ರೆಸ್ನಿಂದ ವಧುವಿಗೆ 10 ಗ್ರಾಂ ಚಿನ್ನ ಭರವಸೆ
ತೆಲಂಗಾಣ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ವಿವಾಹದ ಸಮಯದಲ್ಲಿ ಅರ್ಹ ವಧುಗಳಿಗೆ ಹತ್ತು ಗ್ರಾಂ ಚಿನ್ನ ಮತ್ತು ವಿದ್ಯಾರ್ಥಿಗಳಿಗೆ 1 ಲಕ್ಷ ರೂಪಾಯಿ ನಗದು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ ನೀಡುವುದಾಗಿ ಭರವಸೆ ನೀಡಿದೆ.
ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಹೊರಬರಲಿದೆ. ರಾಜಸ್ಥಾನ, ಛತ್ತೀಸ್ಗಢ, ತೆಲಂಗಾಣ, ಮಿಜೋರಾಂನಲ್ಲೂ ಅಂದೇ ಮತಎಣಿಕೆ ನಡೆಯಲಿದೆ.
ವಿಡಿಯೋ ನೋಡಿ: ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ Janashakthi Media