ಹಳಿ ತಪ್ಪಿದ ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌

ಕೊಪ್ಪಳ: ಜಿಲ್ಲೆಯ ಕಾರಟಗಿ ರೈಲು ನಿಲ್ದಾಣದ ಸಮೀಪದಲ್ಲಿ ಮಂಗಳವಾರ ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಹಳಿ ತಪ್ಪಿದೆ. ಎಕ್ಸ್‌ಪ್ರೆಸ್‌ 

ನಿಲ್ದಾಣದ ಸಮೀಪದಲ್ಲಿಯೇ ರೈಲು ಇದ್ದ ಕಾರಣ ನಿಧಾನಗತಿಯಲ್ಲಿ ಚಲಿಸುತ್ತಿತ್ತು. ಲೋಕೊ ಪೈಲಟ್‌ ಎಚ್ಚರಿಕೆ ವಹಿಸಿದ ಕಾರಣ ಯಾವುದೇ ಅನಾಹುತವಾಗಿಲ್ಲ. ಸೋಮವಾರ ರಾತ್ರಿ ಯಶವಂತಪುರದಿಂದ 8.25ಕ್ಕೆ ಹೊರಟಿದ್ದ ರೈಲು ನಿಗದಿತ  ವೇಳಾಪಟ್ಟಿ ಪ್ರಕಾರ ಬೆಳಿಗ್ಗೆ 10.45ಕ್ಕೆ ಕಾರಟಗಿ ತಲುಪಬೇಕಾಗಿತ್ತು. ಆದರೆ, 12.05ಕ್ಕೆ ಬಂದು ತಲುಪಿದೆ.

ಇದನ್ನೂ ಓದಿ:ರೈಲು ಅಪಘಾತ | ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಒಡಿಶಾಗೆ ಸಂತೋಷ್ ಲಾಡ್

ಬೆಂಗಳೂರಿನ ಯಶವಂತಪುರದಿಂದ ಹೊರಟ ರೈಲು ಕಾರಟಗಿ ರೈಲು ನಿಲ್ದಾಣ ಸಮೀಪಿಸುತ್ತಿರುವ ಸಂದರ್ಭದಲ್ಲಿ ರೈಲು ಒಂದು ಹಳಿಯಿಂದ ಇನ್ನೊಂದು ಹಳಿಗೆ ಮಾರ್ಗ ಬದಲಿಸುವಾಗ ಈ ಘಟನೆ ನಡೆದಿದೆ. ರೈಲಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಆದರೆ ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ.

ಹಳಿ ತಪ್ಪಿದ ರೈಲನ್ನು ಮತ್ತೆ ಹಳಿಗೆ ತರಲು ಹೊಸಪೇಟೆಯಿಂದ ಕ್ರೇನ್‌ ತರಿಸಿದ್ದು, ಸುಮಾರು 4-5 ಗಂಟೆಗಳ ಕಾಲ ಕಾರ್ಯಚರಣೆ ನಡೆಯಲಿದೆ. ಸಂಜೆಯ ತನಕ ಕಾರಟಗಿ-ಬೆಂಗಳೂರು ಮಧ್ಯದ ಸಂಚಾರವನ್ನು ರದ್ದುಪಡಿಸುವ ಸಾಧ್ಯತೆ ಇದೆ. ರೈಲು ಹಳಿ ತಪ್ಪಿದ್ದರಿಂದ ಮಧ್ಯಾಹ್ನ 2.15ಕ್ಕೆ ಕಾರಟಗಿಯಿಂದ ಹುಬ್ಬಳಿ ಮಾರ್ಗದಲ್ಲಿ ಸಂಚರಿಸಬೇಕಿದ್ದ ರೈಲು ಪ್ರಯಾಣ ಸ್ಥಗಿತಗೊಳಿಸಲಾಗಿದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಸಹಜವಾಗಿ ಪ್ರತಿ ಗಂಟೆಗೆ 90 ರಿಂದ 100 ಕಿಮೀ ವೇಗದಲ್ಲಿ ಸಂಚರಿಸುವ ಕಾರಟಗಿ-ಯಶವಂತಪುರ ರೈಲು, ಕಾರಟಗಿಯ ನಿಲ್ದಾಣ ಸಮೀಪಿಸಿದ್ದರಿಂದ ರೈಲಿನ ವೇಗವನ್ನು ಗಂಟೆಗೆ 20 ರಿಂದ 30 ಕಿ.ಮೀಗೆ ಇಳಿಸಲಾಗಿತ್ತು. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಡಿಯೋ ನೋಡಿ:ಕೈವಾರ ತಾತಯ್ಯ ಅವರ ಅನುಭಾವದ ಗೀತೆಗಳು : ಪ್ರಸ್ತುತಿ – ಖ್ಯಾತ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌

Donate Janashakthi Media

Leave a Reply

Your email address will not be published. Required fields are marked *