ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಅಭಾವ ತೀವ್ರಗೊಂಡಿದ್ದು, ರಾಜ್ಯ ಸರ್ಕಾರ ಸದ್ದಿಲ್ಲದೇ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿ ಮಾಡಿದೆ. ವಿದ್ಯುತ್ ಅಭಾವದ ನಡುವೆಯೂ ಎಲ್ಲಾ ಎಸ್ಕಾಂಗಳು ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿದೆ. ಆದರೆ ಕೃಷಿಕರನ್ನು ಸಂಪೂರ್ಣ ಕಡೆಗಣಿಸಿದೆ. ಗ್ರಾಮೀಣ ಭಾಗ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿಯೂ ಲೋಡ್‍ಶೆಡ್ಡಿಂಗ್ ಶುರುವಾಗಿದೆ. ಗ್ರಾಮೀಣ
ರಾಜ್ಯದಲ್ಲಿ ವಿದ್ಯುತ್ ಅಭಾವ ತೀವ್ರಗೊಂಡಿದ್ದು, ಕೊರತೆ ಮಧ್ಯೆಯೂ ಎಲ್ಲ ಎಸ್ಕಾಂಗಳು (ವಿದ್ಯುತ್ ಸರಬರಾಜು ಕಂಪನಿಗಳು) ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿ, ಕೃಷಿ ಪಂಪ್‌ಸೆಟ್‌ಗಳನ್ನು ಸಂಪೂರ್ಣ ಕಡೆಗಣಿಸಿವೆ. ಗ್ರಾಮೀಣ
ಇದನ್ನೂ ಓದಿ:ಮಳೆ ಕೊರತೆಯ ಕಾರಣ : ವಿದ್ಯುತ್ ಬೇಡಿಕೆ ದುಪ್ಪಟ್ಟು
ರಾಜ್ಯದಲ್ಲಿ ಕೃಷಿ ವಲಯಕ್ಕೆ ಶೇ.35ರಷ್ಟು ಕೈಗಾರಿಕಾ ವಲಯಕ್ಕೆ ಶೇ.19.50ರಷ್ಟು ವಿದ್ಯುತ್ ಬಳಕೆಯಾಗುತ್ತಿದೆ. 1.50 ಕೋಟಿ ಗೃಹ ಬಳಕೆದಾರರು ಹಾಗೂ 32 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಹಾಗಾಗಿ, ಆದಾಯದ ಮೂಲವಾದ ಕೈಗಾರಿಕಾ ವಲಯಕ್ಕೆ ವಿದ್ಯುತ್ ವ್ಯತ್ಯಯವಾಗದಂತೆ ಪೂರೈಸಲಾಗುತ್ತಿದ್ದು, ಉಚಿತ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ವಿವಿಧ ರೈತ ಸಂಘಟನೆಗಳ ಆರೋಪ.
ಮಳೆ ಅಭಾವದ ಕಾರಣ ಎಲ್ಲೆಡೆ ಬರ ಪರಿಸ್ಥಿತಿ ಸೃಷ್ಟಿಯಾಗಿದೆ. ಜಲಾಶಯಗಳು ಬರಿದಾಗಿವೆ. ಮಳೆಯಾಶ್ರಿತ ಪ್ರದೇಶಗಳ ಬೆಳೆ ಸಂಪೂರ್ಣ ಒಣಗಿವೆ. ನೀರಾವರಿ ಪ್ರದೇಶದ ತೋಟಾಗಾರಿಕಾ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಆದರೆ, ಕೃಷಿ ಪಂಪ್‌ಸೆಟ್‌ಗಳಿಗೆ ಅಗತ್ಯ ವಿದ್ಯುತ್ ಪೂರೈಕೆಯಾಗದೇ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಯಮದಂತೆ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 7 ತಾಸು ತ್ರೀಫೇಸ್ ವಿದ್ಯುತ್ ಪೂರೈಸಬೇಕು. ಅಕ್ಟೋಬರ್‌ನಲ್ಲಿ ಪೂರೈಕೆಯಾಗುತ್ತಿರುವುದು ಗರಿಷ್ಠ ಎರಡು ತಾಸು ಮಾತ್ರ.
ಅಂಕಿ-ಅಂಶ:
- ಕೃಷಿ ಪಂಪ್‌ಸೆಟ್-32 ಲಕ್ಷ
- ದೊಡ್ಡ ಕೈಗಾರಿಕೆಗಳು-15,147
- ಸಣ್ಣ ಕೈಗಾರಿಕೆಗಳು-5.35
- ಉಚಿತ ವಿದ್ಯುತ್ ಪಡೆಯುತ್ತಿರುವವರು-1.50 ಕೋಟಿ
- ಒಟ್ಟು ಗೃಹ ಬಳಕೆದಾರರು-2 ಕೋಟಿ
ಪ್ರಸ್ತುತ ಬೇಸಿಗೆಯ ಸಮಯದಲ್ಲಿ ಇರುತ್ತಿದ್ದ ವಿದ್ಯುತ್ ಬೇಡಿಕೆ ಕಳೆದ ಎರಡು ತಿಂಗಳಿನಿಂದಲೂ ಮುಂದುವರಿದಿದೆ. ಪ್ರಸ್ತುತ 16 ಸಾವಿರ ಮೆಗಾವಾಟ್‌ಗೆ ಬೇಡಿಕೆ ಇದೆ. ರಾಜ್ಯದ ಒಟ್ಟು ಉತ್ಪಾದನಾ ಸಾಮರ್ಥ್ಯ 32 ಸಾವಿರ ಮೆಗಾವಾಟ್‌ನಷ್ಟಿದೆ. ಹಾಗಿದ್ದರು ಜಲಾಶಯಗಳಲ್ಲಿ ನೀರಿನ ಕೊರತೆ, ಕಲ್ಲಿದ್ದಲು ಪೂರೈಕೆಯ ವ್ಯತ್ಯಯ, ಕಳಪೆ ಉತ್ಪಾದನೆ ನಿರ್ವಹಣಾ ಸಾಮರ್ಥ್ಯ ಮತ್ತಿತರ ಕಾರಣಗಳಿಂದ ಉತ್ಪಾದನೆ 10 ಸಾವಿರ ಮೆಗಾವಾಟ್ ದಾಟಿಲ್ಲ. ಕೇಂದ್ರ, ಇತರೆ ರಾಜ್ಯವು ಸೇರಿ 14 ಸಾವಿರ ಮೆಗಾವಾಟ್ ಲಭ್ಯವಾಗುತ್ತಿದೆ. ಇದರಿಂದ ಬೇಸಿಗೆ ಆರಂಭಕ್ಕೂ ನಾಲ್ಕು ತಿಂಗಳ ಮೊದಲೇ ಲೋಡ್‌ಶೆಡ್ಡಿಂಗ್ ಅನಿವಾರ್ಯವಾಗಿದೆ. ನಗರದಲ್ಲಿ ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ನಗರ
ಇದನ್ನೂ ಓದಿ:ಕಲ್ಲಿದ್ದಲು ಕೊರತೆ : ಪವರ್ ಕಟ್, ರೈಲ್ ಬಂದ್
ವಿದ್ಯುತ್ ಬೇಡಿಕೆ-ಪೂರೈಕೆ (ಮೆಗಾವಾಟ್‌ಗಳಲ್ಲಿ):
- ವಿದ್ಯುತ್ ಬೇಡಿಕೆ-16 ಸಾವಿರ
- ರಾಜ್ಯದ ಉತ್ಪಾದನೆ-10 ಸಾವಿರ
- ಕೇಂದ್ರದ ಪೂರೈಕೆ-3 ಸಾವಿರ
- ಹೊರ ರಾಜ್ಯದ ಪೂರೈಕೆ-1 ಸಾವಿರ
- ಕೊರತೆ-2 ಸಾವಿರ
ಕೊರತೆ ನೀಗಿಸಲು ಅಗತ್ಯವಾದ ವಿದ್ಯುತ್ ಖರೀದಿಸಲು ಉತ್ತರದ ರಾಜ್ಯಗಳ ಜತೆ ಮಾತುಕತೆ ನಡೆದಿದೆ. ಶೀಘ್ರ ಬೇಡಿಕೆಗೆ ತಕ್ಕ ವಿದ್ಯುತ್ ಲಭ್ಯವಾಗಲಿದೆ.
-ಕೆ.ಜೆ.ಜಾರ್ಜ್,ಇಂಧನ ಸಚಿವ
1.50 ಲಕ್ಷ ಪಂಪ್‌ಸೆಟ್‌ಗಳಿಗೆ ಇಲ್ಲ ಸಂಪರ್ಕ:
ರಾಜ್ಯದ ರೈತರು 1.50 ಲಕ್ಷ ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಲ್ಪಿಸಲು ವಿವಿಧ ಎಸ್ಕಾಂಗಳಿಗೆ ಅರ್ಜಿ ಸಲ್ಲಿಸಿದ್ದಾರೆ. 2015ರಿಂದ ಅಂತಹ ಪಂಪ್‌ಸೆಟ್‌ಗಳಿಗೆ ಸಂಪರ್ಕವೇ ಸಿಕ್ಕಿಲ್ಲ.
ಅಕ್ರಮ-ಸಕ್ರಮ ಯೋಜನೆ ಅಡಿ ಸಂಪರ್ಕ ಕಲ್ಪಿಸಲು ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ₹6,099 ಕೋಟಿ ವೆಚ್ಚ ಮಾಡುತ್ತಿದೆ. ಬರ ಪರಿಸ್ಥಿತಿಯ ಈ ಸಮಯದಲ್ಲಿ ತುರ್ತು ಕ್ರಮಕೈಗೊಂಡು ನಮಗೆ ನೆರವಾಗಬೇಕು ಎನ್ನುತ್ತಾರೆ ರೈತರು.
ಇದನ್ನೂ ಓದಿ:ವಿದ್ಯುತ್ ಬಿಲ್ ಏರಿಕೆಯನ್ನು ಹಿಂತೆಗೆದುಕೊಳ್ಳುವಂತೆ ವಿದ್ಯಾರ್ಥಿ ಸಂಘಟನೆಗಳ ಆಗ್ರಹ
ಇಂಧನ ಇಲಾಖೆ ಹೇಳಿದ್ದೇನು?
ಮುಂಗಾರು ಕೊರತೆಯಿಂದ ತೀವ್ರ ವಿದ್ಯುತ್ ಸಮಸ್ಯೆಯಾಗಿದ್ದು ಪವನ ವಿದ್ಯುತ್, ಸೋಲಾರ್, ಜಲ ವಿದ್ಯುತ್, ಉಷ್ಣಸ್ಥಾವರಗಳಲ್ಲಿ ಉತ್ಪಾದನೆ ಕುಂಠಿತವಾಗಿದೆ. ಪ್ರಸ್ತುತ ನಿತ್ಯ 15 ಸಾವಿರ ಮೆಗಾವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 9,032 ಮೆಗಾವ್ಯಾಟ್‌ಗೆ ಬೇಡಿಕೆ ಇತ್ತು.
ರಾಜ್ಯದಲ್ಲಿ ನಿತ್ಯ 10 ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದು, ಕೇಂದ್ರ ಮತ್ತು ಹೊರ ರಾಜ್ಯಗಳಿಂದ 3 ಸಾವಿರ ಮೆಗಾವ್ಯಾಟ್ ಪೂರೈಕೆ ಆಗುತ್ತಿದೆ. ನಿತ್ಯ 2 ಸಾವಿರ ಮೆಗಾವ್ಯಾಟ್‌ನಷ್ಟು ವಿದ್ಯುತ್ ಕೊರತೆಯಿದೆ. ಅಲ್ಪಾವದಿಯ ಟೆಂಡರ್ ಮೂಲಕ ವಿದ್ಯುತ್ ಖರೀದಿಗೆ ಪ್ರಯತ್ನ ನಡೆಯುತ್ತಿದ್ದು, ಪ್ರತಿ ಜಿಲ್ಲೆಗೂ ನೋಡಲ್ ಅಧಿಕಾರಿ ಮೂಲಕ ವಿದ್ಯುತ್ ಹಂಚಿಕೆಗೆ ಚಿಂತನೆ ನಡೆದಿದೆ.ಗ್ರಾಮೀಣ