ಸರ್ಕಾರ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಏನೇನಿದೆ? | ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಗಳವಾರ ಅಂಗೀಕರಿಸಿದೆ. ಮಸೂದೆ ಮಂಡನೆಯಾದರೂ 2024ರ ಲೋಕಸಭೆ ಚುನಾವಣೆಯಲ್ಲಿ ಈ ಕಾಯ್ದೆ ಜಾರಿಯಾಗುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. 2026ರ ಡಿಲಿಮಿಟೇಶನ್ ಪ್ರಕ್ರಿಯೆಯು ಮುಗಿದ ನಂತರ, ಬಹುಶಃ 2029 ರಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ವರದಿಯಾಗಿದೆ.

ಸಂವಿಧಾನಕ್ಕೆ ಹೊಸ ತಿದ್ದಪಡಿ ಮಾಡುವ ಮೂಲಕ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸುವ ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಮಂಡಿಲಾಗಿದೆ. ಸಂವಿಧಾನ (ನೂರಾ ಇಪ್ಪತ್ತೆಂಟನೇ ತಿದ್ದುಪಡಿ) ಮಸೂದೆ- 2023 ರ ಮೂಲಕ, ಸಂವಿಧಾನಕ್ಕೆ ಮೂರು ಹೊಸ ವಿಧಿಗಳನ್ನು ಮತ್ತು ಒಂದು ಹೊಸ ಷರತ್ತುಗಳನ್ನು ಪರಿಚಯಿಸಲಾಗಿದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಮಂಡನೆ; ‘ಇದು ನಮ್ಮದು’ ಎಂದ ಕಾಂಗ್ರೆಸ್!

ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಏನೇನಿವೆ ಎಂಬುವುದನ್ನು ಗಮನಿಸೋಣ:

239AA (ಹೊಸ ಷರತ್ತು)

ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸೀಟುಗಳನ್ನು ಮೀಸಲಿಡಬೇಕು. SC ಗಳಿಗೆ ಮೀಸಲಾದ ಸ್ಥಾನಗಳಲ್ಲಿ 1/3 ನೇ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಬೇಕು, ನೇರ ಚುನಾವಣೆಯ ಮೂಲಕ ಭರ್ತಿ ಮಾಡಬೇಕಾದ ಒಟ್ಟು ಸೀಟುಗಳ 1/3 ಭಾಗವು ಸಂಸತ್ತು ನಿರ್ಧರಿಸುವ ಕಾನೂನಿನ ಮೂಲಕ ಮಹಿಳೆಯರಿಗೆ ಮೀಸಲಿಡಬೇಕು.

330A (ಹೊಸ ವಿಧಿ)

ಲೋಕಸಭೆಯಲ್ಲಿ ಮಹಿಳೆಯರ ಮೀಸಲಾತಿಯಲ್ಲಿ SC ಮತ್ತು ST ಗಳಿಗೆ ಮೀಸಲಾದ 1/3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಲೋಕಸಭೆಗೆ ನೇರ ಚುನಾವಣೆಯಿಂದ ತುಂಬಲಾಗುವ ಒಟ್ಟು ಸ್ಥಾನಗಳ 1/3 ಭಾಗ ಮಹಿಳೆಯರಿಗೆ ಮೀಸಲಿಡಬೇಕು.

332A (ಹೊಸ ವಿಧಿ)

ಪ್ರತಿ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳಲ್ಲಿ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾದ 1/3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ರಾಜ್ಯ ವಿಧಾನಸಭೆಗೆ ನೇರ ಚುನಾವಣೆಯ ಮೂಲಕ ಭರ್ತಿ ಮಾಡುವ ಒಟ್ಟು ಸ್ಥಾನಗಳ 1/3 ಭಾಗವು ಮಹಿಳೆಯರಿಗೆ ಮೀಸಲಿಡಬೇಕು.

334A(ಹೊಸ ವಿಧಿ)

ಮೀಸಲಾತಿಯು ಮೊದಲ ಜನಗಣತಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಡಿಲಿಮಿಟೇಶನ್ ಕೈಗೊಂಡಾದ ಮೇಲೆ ಜಾರಿಗೆ ಬರುತ್ತದೆ. ಮಹಿಳೆಯರ ಸ್ಥಾನದ ಕ್ಷೇತ್ರದ ಬದಲಾವಣೆಯು ಪ್ರತಿ ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ ಜಾರಿಗೆ ಬರುತ್ತದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ನಡೆದು ಬಂದ ಹಾದಿ ಹೀಗಿದೆ!

WRB ಒಪ್ಪಿಗೆ ನೀಡುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ( AIDWA) ಸೇರಿದಂತೆ ಎಡಪಕ್ಷಗಳ ಸಂಸತ್ ಸದಸ್ಯರು ಸಂಸತ್ತಿನ ಒಳಗೆ ಮತ್ತೆ ಹೊರಗೆ ಮಹಿಳಾ ಮೀಸಲಾತಿ ಜಾರಿ ಆಬೇಕು ಎಂದು ಪ್ರತಿಭಟಿಸುತ್ತಲೆ ಬಂದಿವೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸುವ ಮಸೂದೆಯನ್ನು ಮೊದಲು ಲೋಕಸಭೆಯಲ್ಲಿ 1996 ರಲ್ಲಿ ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರ ಮಂಡಿಸಿತು. ಇದು ಸದನದ ಅನುಮೋದನೆಯನ್ನು ಪಡೆಯುವಲ್ಲಿ ವಿಫಲವಾಯಿತು. ನಂತರ 1996ರ ಡಿಸೆಂಬರ್‌ನಲ್ಲಿ ಲೋಕಸಭೆಗೆ ತನ್ನ ವರದಿ ಸಲ್ಲಿಸಿದ ಜಂಟಿ ಸಂಸದೀಯ ಸಮಿತಿಗೆ ಇದನ್ನು ಕಳುಹಿಸಲಾಯಿತು. ಆದರೆ ಲೋಕಸಭೆಯ ವಿಸರ್ಜನೆಯೊಂದಿಗೆ ಈ ಮಸೂದೆ ರದ್ದಾಯಿತು.

1998 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಲೋಕಸಭೆಯಲ್ಲಿ ಮಸೂದೆಯನ್ನು ಪುನಃ ಮಂಡಿಸಿತು. ಈ ಮಸೂದೆ ಕೂಡಾ ಬೆಂಬಲ ಪಡೆಯುವಲ್ಲಿ ವಿಫಲವಾಗಿ ಮತ್ತೆ ರದ್ದಾಯಿತು. ಈ ಮಸೂದೆಯನ್ನು 1999, 2002 ಮತ್ತು 2003 ರಲ್ಲಿ ಪುನಃ ಮಂಡಿಸಲಾಯಿತು. ಕಾಂಗ್ರೆಸ್, ಬಿಜೆಪಿ ಮತ್ತು ಎಡಪಕ್ಷಗಳು ಇದಕ್ಕೆ ಬೆಂಬಲ ನೀಡಿದ್ದರೂ ಕೂಡಾ ಮಸೂದೆಯು ಬಹುಮತ ಪಡೆಯುವಲ್ಲಿ ವಿಫಲವಾಯಿತು.

2008 ರಲ್ಲಿ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿತು ಮತ್ತು ಅದನ್ನು 2010 ರಲ್ಲಿ ಅಂಗೀಕರಿಸಲಾಯಿತು. ಆದಾಗ್ಯೂ, ಮಸೂದೆಯನ್ನು ಲೋಕಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲೇ ಇಲ್ಲ, 2014ರಲ್ಲಿ 15 ನೇ ಲೋಕಸಭೆಯ ವಿಸರ್ಜನೆಯೊಂದಿಗೆ ಆ ಮಸೂದೆ ಕೂಡಾ ರದ್ದಾಯಿತು.

ವಿಡಿಯೊ ನೋಡಿ: ಒಂದು ದೇಶ ಒಂದು ಚುನಾವಣೆ : ದೇಶದ ಭದ್ರತೆಯನ್ನು ನಾಶ ಮಾಡುವ ಪ್ರಸ್ತಾಪ – ಎ ನಾರಾಯಣ Janashakthi Media

Donate Janashakthi Media

Leave a Reply

Your email address will not be published. Required fields are marked *