ಆರ್‌ಎಸ್‌ಎಸ್ ತತ್ವದಿಂದ ಯಾರು ಉದ್ದಾರ ಆಗಿದ್ದಾರೆಂದು ತೋರಿಸಿ ; ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಲ ಪಂಥಿಯ ಸಂಘಟನೆಗಳು ಆಪತ್ತಿನಲ್ಲಿ ಸಿಲುಕಿಕೊಂಡಿದ್ದಾವೆ ಎಂಬ ಮಾತುಗಳು ಬಲ ಪಂಥಿಯ ವಲಯಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಬಲ ಪಂಥಿಯ ಸಂಘಟನೆಗಳ ವಿರುದ್ಧ ಆಡಳಿತರೂಢ ಕಾಂಗ್ರೆಸ್‌ ಸರ್ಕಾರದ ಶಾಸಕರು ಆಗಾಗ ಬಲ ಪಂಥಿಯ ಸಂಘನಟೆಗಳ ವಿರುದ್ಧ ಆಕ್ರೋಶವನ್ನ ವ್ಯಕ್ತ ಪಡಿಸುತ್ತಲೇ ಇದ್ದಾರೆ. ತತ್ವ

ಇದನ್ನೂ ಓದಿ:ಸಮಾನತೆ ನೀಡದ ಯಾವುದೇ ಧರ್ಮ ಧರ್ಮವಲ್ಲ: ಪ್ರಿಯಾಂಕ್ ಖರ್ಗೆ

ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ. ಆರ್.ಎಸ್.ಎಸ್ ತತ್ವದಿಂದ ಯಾರು ಉದ್ದಾರ ಆಗಿದ್ದಾರೆಂದು ತೋರಿಸಿ ಎಂದು ಹೇಳಿಕೆ ನೀಡುವ ಮೂಲಕ ಬಲ ಪಂಥಿಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಅವರು ಆರ್‌ಎಸ್‌ಎಸ್‌ ಸಂಘಟನೆ ಒಂದು ನಿಷ್ಪ್ರಯೋಜಕ ಸಂಘಟನೆ ಎಂಬ ಅರ್ಥ ಬರುವಂತೆ ಮಾತನಾಡಿದ್ದಾರೆ.

ಆರ್.ಎಸ್.ಎಸ್ ತತ್ವ ಪ್ರಜಾಪ್ರಭುತ್ವ ವಿರೋಧಿ, ದೇಶ ವಿರೋಧಿಯಾಗಿದೆ. ಆರ್ಥಿಕ ಸಮಾನತೆಯೂ ಇಲ್ಲ, ದೇಶ ಭಕ್ತಿಯೂ ಇಲ್ಲ, ನಾನೇನೂ ಆರ್.ಎಸ್.ಎಸ್ ಬಗ್ಗೆ ಮಾತನಾಡಲು ಭಯಪಡಲ್ಲ, ಸರ್ಕಾರದ ಶೈಕ್ಷಣಿಕ ಕೇಂದ್ರಗಳಲ್ಲಿ ಕೇಸರಿಕರಣ ನಡೆಯಬಾರದು. ಆರ್.ಎಸ್.ಎಸ್ ನವರಿಗೆ ಆಸಕ್ತಿ ಇದ್ದರೆ ಖಾಸಗಿಯಾಗಿ ನಡೆಸಲಿʼʼ ಎಂದು ಹೇಳಿಕೆ ನೀಡುವ ಮೂಲಕ ಆರ್‌ಎಸ್‌ಎಸ್‌ ವಿರುದ್ಧ ವ್ಯಾಪಕವಾದ ಆಕ್ರೋಶವನ್ನ ಹೊರ ಹಾಕಿದ್ದಾರೆ.

 

ವಿಡಿಯೋ ನೋಡಿ:ದೇವದಾಸಿ ಪದ್ದತಿ ಹುಟ್ಟಿದ್ದು ಸನಾತನ ಧರ್ಮದಿಂದ – ಬಿ. ಮಾಳಮ್ಮ Janashakthi Media

Donate Janashakthi Media

Leave a Reply

Your email address will not be published. Required fields are marked *