ನವದೆಹಲಿ:ಉತ್ತರ ದೆಹಲಿಯ ಮಜ್ನು ಕಾ ತಿಲ ಸಮೀಪದಲ್ಲಿ ಗುಡಿಸಲಿನ ಹೊರಗೆ ಮಲಗಿದ್ದವರ ಮೇಲೆ ಟೆಂಪೂ ಹರಿದ ಪರಿಣಾಮ 3ಮಂದಿ ಗಾಯಗೊಂಡಿದ್ದು, ಒಬ್ಬ ಮಹಿಳೆ ಹಾಗೂ ಆಕೆಯ 4 ವರ್ಷದ ಮಗಳು ಸಾವನ್ನಪಿದ್ದಾರೆ. ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟೆಂಪೂ
ಈ ದುರಂತದ ಬಗ್ಗೆ ಮುಂಜಾನೆ 5.33ಕ್ಕೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಗಾಯಗೊಂಡಿರುವ ಐವರು ಹಾಗೂ ಅಪಘಾತ ನಡೆದ ಸ್ಥಿತಿಯಲ್ಲಿ ಟಾಟಾ ಏಸ್ ಕಾಣಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅಮೆರಿಕಾದ ಸೇಬಿಗೆ ಆಮದು ಸುಂಕ ಕಡಿತದ ಲಾಭ, ಭಾರತದ ಸೇಬು ಬೆಳೆಗಾರರಿಗೆ ದುರಂತ
ಗಾಯಾಳುಗಳನ್ನು ತುರ್ತು ನಿಗಾ ಕೇದ್ರಕ್ಕೆ ದಾಖಲಿಸಲಾಯಿತಾದರೂ, ಜ್ಯೊತಿ (32) ಅವರನ್ನು ಆಸ್ಪತ್ರೆಗೆ ಕೆರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.ಅವರ ಮಗಳು ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದು, ಸುಭಾಷ್ (30) ಹಾಗೂ 6 ಮತ್ತು 17 ವಯಸ್ಸಿನ ಇಬ್ಬರು ಘಟನೆಯಲ್ಲಿ ಗಾಯಗೊಂಡಿದ್ದು ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.
ಆರೋಪಿ ಚಾಲಕ ದಿನೇಶ್ ರೈ, ಕರವಾಲ ನಗರ ನಿವಾಸಿಯಾಗಿದ್ದು, ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐಪಿಸಿಯ 279, 337 ಹಾಗೂ 304A ವಿಧಿಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ.
ವಿಡೀಯೋ ನೋಡಿ:‘ಸಿನಿಮಾ’ ಸಾಮಾಜಿಕ ತಲ್ಲಣಗಳ ಪ್ರತಿಬಿಂಬ – ನಟ, ನಿರ್ದೇಶಕ ಬಿ.ಸುರೇಶ ಜೊತೆ ಮಾತುಕತೆ Janashakthi Media