ಬೆಂಗಳೂರು: ಉದ್ಯೊಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಕೊಟ್ಯಾಂತರ ರೂಪಾಯಿ ವಂಚನೆ ಮಾಡಿದ ಆರೋಪದಡಿ ಭಾಷಣಕಾರ್ತಿ ಚೈತ್ರಾ ಕುಂದಾಪುರ ಬಂಧನದ ಬೆನ್ನಲ್ಲೇ, ಕಾಂಗ್ರೆಸ್ ಟ್ವೀಟ್ ಮಾಡಿ, ಬಿಜೆಪಿಯಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಎಂದು ಪ್ರಶ್ನಿಸಿದೆ. ಹುದ್ದೆಗೆ
ಎಕ್ಸ್(ಟ್ವಿಟರ್) ಖಾತೆಯಲ್ಲಿ ಈ ಕುರಿತು ಹೇಳಿರುವ ಕಾಂಗ್ರೆಸ್, ಮುಖ್ಯಮಂತ್ರಿ ಹುದ್ದೆಗೆ ₹2500 ಕೋಟಿ, ಮಂತ್ರಿಗಿರಿಗೆ ₹70 ಕೋಟಿಯಿಂದ ₹80ಕೋಟಿ, ವಿಧಾನಸಭಾ ಕ್ಷೇತ್ರದ ಟಿಕೆಟ್ಗೆ ₹7 ಕೋಟಿ. ಇದೆಲ್ಲವೂ ಬಿಜೆಪಿಯವರಿಂದಲೇ ಬಯಲಾದ ಸತ್ಯಗಳು ಎಂದಿದೆ. ನಾಯಕನ ಹುದ್ದೆಗೆ
ಇದನ್ನೂ ಓದಿ:ಎಂಎಲ್ಎ ಟಿಕೆಟ್ ಕೊಡಿಸೋದಾಗಿ 7 ಕೋಟಿ ರೂಪಾಯಿ ವಂಚನೆ, ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ
ಯತ್ನಾಳ್ ಆಣೆಗೂ ಇದು ನಾವು ಹೇಳಿದ್ದಲ್ಲ. ಈ ಮಾರಾಟದ ಆಟದಲ್ಲಿ ವಿರೋಧ ಪಕ್ಷದ ನಾಯಕನ ಹುದ್ದೆಗೆ ಇನ್ನೂ ಯಾರೊಬ್ಬರೂ ಬಿಡ್ ಸಲ್ಲಿಸಿಲ್ಲವೇ? ಎಂದು ಪ್ರಶ್ನಿಸಿದೆ. ಕಾಂಗ್ರೆಸ್
ಕಾಂಗ್ರೆಸ್ನ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಕೆಲವರು, ಅವರನ್ನೇ ಕೇಳಬೇಕು. ದೇಶವನ್ನೇ ಮಾರುವವರಿಗೆ ಇದು ಯಾವ ಲೆಕ್ಕ ಎಂದು ಪ್ರಶ್ನೆ ಮಾಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಗೆ ನೀವೆಷ್ಟು ತಗೋತೀರಾ ಎನ್ನುವುದನ್ನು ಹೇಳಿ ಬಿಡಿ ಎಂದು ಕಾಂಗ್ರೆಸ್ ಪಕ್ಷವನ್ನು ಮತ್ತೊಬ್ಬರು ಕೇಳಿದ್ದಾರೆ.
ವಿಡಿಯೋ ನೋಡಿ:ಪಿಚ್ಚರ್ ಪಯಣ – 137, ಸಿನೆಮಾ : ಏಕ್ ದಿನ ಅಚಾನಕ್, ವಿಶ್ಲೇಷಣೆ : ಮೀನಾಕ್ಷಿ ಬಾಳಿ Janashakthi Media