ಟ್ರಿಪೋಲಿ: ಲಿಬಿಯಾದಲ್ಲಿ ಭೀಕರ ಬಿರುಗಾಳಿ ಮತ್ತು ಪ್ರವಾಹದಿಂದ ಅಲ್ಲಿನ ಜನರು ತತ್ತರಿಸಿದ್ದಾರೆ. ಲಿಬಿಯಾದ ಪೂರ್ವ ನಗರವಾದ ಡರ್ನಾದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 1500 ಕ್ಕೂ ಹೆಚ್ಚು ಜನರ ಶವಗಳು ಪತ್ತೆಯಾಗಿದ್ದು, ಚಂಡಮಾರುತದಿಂದ ಉಂಟಾದ ಭೀಕರ ಪ್ರವಾಹಕ್ಕೆ 5,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 10 ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ. ಭೀಕರ
ಸ್ಟಾರ್ಮ್ ಡೇನಿಯಲ್ ಹೆಸರಿನ ಚಂಡಮಾರುತದಿಂದ ಉಂಟಾದ ಈ ಪ್ರವಾಹದಿಂದಾಗಿ ಅಣೆಕಟ್ಟು ಒಡೆದು ಹೋಗಿದ್ದು ಇದರ ಪರಿಣಾಮವಾಗಿ, ನೀರು ಅನೇಕ ನಗರಗಳು ಮತ್ತು ಹಳ್ಳಿಗಳಿಗೆ ಹರಡಿದೆ. ಡರ್ನಾದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಗೌರಿಕುಂಡ ಬಳಿ ಪ್ರವಾಹ:12 ಜನ ಕಾಣೆಯಾಗಿದ್ದು,3 ಅಂಗಡಿಗಳು ಕೊಚ್ಚಿಹೋಗಿವೆ
ಮೆಡಿಟರೇನಿಯನ್ ಸಮುದ್ರದಲ್ಲಿನ ಡೇನಿಯಲ್ ಚಂಡಮಾರುತದಿಂದಾಗಿ, ಹಲವೆಡೆ ಮನೆಗಳು ಧ್ವಂಸಗೊಂಡಿವೆ. ಸಮುದ್ರದ ನೀರು ಪ್ರವಾಹದ ರೂಪದಲ್ಲಿ ನಗರವನ್ನು ಪ್ರವೇಶಿಸಿದ್ದು, ಅಣೆಕಟ್ಟುಗಳು, ಸೇತುವೆಗಳು ಒಡೆದಿವೆ. ಇಂತಹ ಭೀಕರ ವಿನಾಶವನ್ನು ಹಿಂದೆ ಯಾರೂ ನೋಡಿರಲಿಲ್ಲ. ಡೇನಿಯಲ್ ಚಂಡಮಾರುತವನ್ನು ಮಡಿಕೇನ್ ಎಂದೂ ಕರೆಯಲಾಗುತ್ತಿದೆ.