ರಾಣೇಬೆನ್ನೂರು: ರಾಜ್ಯದಲ್ಲಿ ಇದೊಂದು ಮಾದರಿ ಕೇಸ್ ಆಗಿದ್ದು, ಕುಟುಂಬದ ಆರ್ಥಿಕ ಸಮಸ್ಯೆಗೆ ಪರಿಹಾರ ಒದಗಿಸಿದ್ದು, ಕಾನೂನಾತ್ಮಕವಾಗಿ ಪರಿಣಾಮಕಾರಿಯಾಗಿ ವಾದ ಮಂಡಿಸಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಅದು ವಿದ್ಯಾರ್ಥಿಯ ವಿಚಾರದಲ್ಲಿ ದೊಡ್ಡ ಕೆಲಸವಾಗಿದೆ ಎಂದು ಎಸ್ ಎಫ್ ಐ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ವಕೀಲರಾದ ನಾರಾಯಣ ಕಾಳೆ ಹೇಳಿದರು.
ನಗರದ ಪ್ರವಾಸ ಮಂದಿರದ ಸರ್ಕ್ಯೂಟ್ ಹೌಸ್ ನಲ್ಲಿ ಕಾವ್ಯ ಬೆನ್ನೂರು ಪರವಾದ ಮಂಡಿಸಿ ಕುಟುಂಬಕ್ಕೆ ನ್ಯಾಯವನ್ನು ಒದಗಿಸಿದ ನ್ಯಾಯವಾದಿ ಮೃತ್ಯುಂಜಯ ಗುದಿಗೆರ ಅವರಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಮಾಜದಲ್ಲಿ ಸಂಘಟನೆಗಳ ಪಾತ್ರ ಬಹುದೊಡ್ಡದಿದೆ. ಇಂತಹ ಘಟನೆಗಳನ್ನು ರಾಜಕಾರಣಿಗಳು ಮುತುವರ್ಜಿ ವಹಿಸಿ ಪರಿಹಾರ ನೀಡುವುದಿಲ್ಲ, ಅದಕ್ಕಾಗಿ ಇಂತಹ ಕೇಸ್ ಗಳು ಬಿದ್ದು ಹೋಗುತ್ತವೆ. ಹಾಗಾಗಿ ಇಂದು ನಮ್ಮ ನ್ಯಾಯವಾದಿ ಮೃತ್ಯುಂಜಯ, ಗುದಿಗೇ ಇದನ್ನು ಸ್ವತಃ ತಾವೇ ತೆಗೆದುಕೊಂಡು ವಾದ ಮಂಡಿಸಿ ಜಯಗಳಿಸಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳ ಹೋರಾಟ ಹಾಗೂ ಸಂಘಟನೆಗಳ ಹೋರಾಟ ಫಲವಾಗಿಯೇ ಈ ಕೇಸು ಗೆದ್ದಿದೆ ಎಂದರೆ ತಪ್ಪಾಗಲಾರದು ಎಂದರು.
ಇದನ್ನೂ ಓದಿ:ಇಂಜಿನಿಯರಿಂಗ್ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳಕ್ಕೆ ಎಸ್ಎಫ್ಐ ವಿರೋಧ: ಅಮರೇಶ ಕಡಗದ
ಸನ್ಮಾನ ಸ್ವೀಕರಿಸಿ ತಾಲೂಕ ಎಸ್ಎಫ್ಐ ಮಾಜಿ ಅಧ್ಯಕ್ಷ ಹಾಗೂ ವಕೀಲರಾದ ಮೃತ್ಯುಂಜಯ ಗುದಿಗೇರ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿ ಕಾವ್ಯ ಬೆನ್ನೂರ್ ರವರಿಗೆ ನ್ಯಾಯವದಿಗಿಸಲು ಹಲವಾರು ಸಮಸ್ಯೆಗಳು ಬಂದವು, ಅವುಗಳನ್ನು ನಾವು ಪರಿಗಣಿಸದೆ ನಮ್ಮ ವಾದವನ್ನು ಮಂಡಿಸಿದವು. ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆ ಎಂಬ ಹಲವರ ಹೇಳಿಕೆಗಳಿಗೆ ಕಿವಿಗೊಡದೆ ಧೈರ್ಯವಾಗಿ ಈ ಕೇಸ್ ನಾನು ತೆಗೆದುಕೊಂಡು ನಡೆಸಿದೆ.
ಮುಂದೆ ಎಲ್ಲರ ಸಹಕಾರದಿಂದ ನ್ಯಾಯಾಲಯದಲ್ಲಿ ವಾದ ಮಂಡಿಸಿ ಜಯ ಸಾಧಿಸಿದ್ವಿ, ಈ ಕೇಸ್ನಲ್ಲಿ ಉನ್ನತ ಅಧಿಕಾರಿಗಳ ವಿರುದ್ಧ ಕೇಸ್ ಮಾಡಿ ಪ್ರತಿಯೊಂದು ಹಂತದಲ್ಲಿಯೂ ನಾವು ಸೂಕ್ಷ್ಮವಾಗಿ ಸಾಕ್ಷಿಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ಉತ್ತರ ನೀಡಿದ್ದೇವೆ. ಒಂದು ಕಾರ್ಯ ಮಾಡಬೇಕಾದರೆ ಹಲವು ವಿಘ್ನಗಳು ಉಂಟಾಗುತ್ತವೆ. ಅಂತದ್ದೇ ನಮ್ಮ ಕೇಸ್ ಲ್ಲಿ ಆಯ್ತು ಆದರೆ ಅದಕ್ಕೆ ನಾವು ಹೆದರದೆ ಮುಂದೆ ಸಾಗಿ ಇಂದು ಜಯಶಾಲಿಯಾಗಿ ನಿಂತಿದ್ದೇವೆ. ಕಾವ್ಯ ಬೆನ್ನೂರಾವರ ಕುಟುಂಬಕ್ಕೆ ಪರಿಹಾರ ಒದಗಿಸುವುದೇ ಒಂದೇ ನನ್ನ ಉದ್ದೇಶವಾಗಿತ್ತು ಇದು ರಾಜ್ಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದ ವಿಶೇಷ ಪ್ರಕರಣವಾಗಿತ್ತು, ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಹಲವು ಸಾಕ್ಷಾಧಾರಗಳನ್ನು ನೀಡಿ ನಾವು ಗೆದ್ದೆವು ಹಾಗಾಗಿ ಇದು ಒಂದು ವಿಶೇಷ ಪ್ರಕರಣವೆಂದು ಹೇಳಲಾಗುತ್ತಿದೆ. ಒಂದು ಕಡೆ ದುಃಖ ಮತ್ತೊಂದು ಕಡೆ ನ್ಯಾಯ ಸಿಕ್ಕ ಗೆಲುವು ಇವೆರಡನ್ನು ಮಧ್ಯೆ ಸಮವಾಗಿ ತೆಗೆದುಕೊಂಡು ಬಂದಿದ್ದು ಕಾವ್ಯ , ಕುಟುಂಬಕ್ಕೆ ಆರ್ಥಿಕವಾಗಿ ನಮ್ಮಿಂದ ಸಹಾಯ ಮಾಡಲಾಗಿದೆ ಎಂದರು.
ಇದನ್ನೂ ಓದಿ:ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲು ಎಸ್ಎಫ್ಐ ಪ್ರತಿಭಟನೆ
ಮೃತ ವಿದ್ಯಾರ್ಥಿನಿ ಕಾವ್ಯ ಬೆನ್ನೂರ ಅವರ ಪಾಲಕರಾದ ಅಶೋಕಪ್ಪ ಬೆನ್ನೂರ ಹಾಗೂ ಲಕ್ಷ್ಮವ್ವ ಅವರು ವಕೀಲರಾದ ಮೃತ್ಯುಂಜಯ ಗುದಿಗೇರ್ ಅವರಿಗೆ ಸನ್ಮಾನ ಮಾಡಿ ಅಭಿನಂದಿಸಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿನಿ ಸಂಬಂಧಿ ಚಂದ್ರು ಚಪ್ಪರಮನಿ, ವನಸಿರಿ ಸಂಸ್ಥೆಯ ಎಸ್.ಡಿ.ಬಳಿಗಾರ, ಛಲವಾದಿ ಸಮಾಜದ ಉಪಾಧ್ಯಕ್ಷ ಮಲ್ಲೇಶಪ್ಪ ಮದ್ಲೇರ್, ಕಾರ್ಮಿಕ ಮುಖಂಡರಾದ ಶೋಭ ಮುದೇನೂರ, ಪತ್ರಕರ್ತರಾದ ಬಿರೇಶ್ ಪೂಜಾರ , ಶಿವಕುಮಾರ್ ಓಲೇಕಾರ ಶುಭ ಕೋರಿದರು. ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ, ಎಸ್ಎಫ್ಐ ಮಾಜಿ ತಾಲ್ಲೂಕು ಅಧ್ಯಕ್ಷೆ ಜ್ಯೋತಿ ಪೋಲಿಸಗೌಡ್ರು, ಉಪಾಧ್ಯಕ್ಷ ನೇಹಾಲ್ ಖಾನ್ ಗಂಗಾವತಿ, ಮುಖಂಡರಾದ ಹೊನ್ನಪ್ಪ ಕುದರಿಹಾಳ, ಮಲ್ಲಿಗೆ ಜೆಟ್ಟಪ್ಪನವರ, ಷಟ್ಟುಖಪ್ಪ ಕಂಬಳಿ, ಆನಂದ್ . ಹುಲ್ಮನಿ, ಕಿರಣ ಗುಳೇದಗುಡ್ಡ, ಬೀರಪ್ಪ ಲಮಾಣಿ, ಸೇರಿದಂತೆ ಮೃತ ವಿದ್ಯಾರ್ಥಿನಿ ಕುಟುಂಬಸ್ಥರು ಹಾಗೂ ಸಮಾನ ಮನಸ್ಕ ಸಂಘಟನೆಗಳ ಅನೇಕ ಮುಖಂಡರು ಉಪಸ್ಥಿತರಿದ್ದರು.