ಪ್ರಕಾಶ್‌ಕಾರತ್
ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ವಿತರಣೆಯಲ್ಲಿ ಪ್ರಮುಖ ಹಗರಣ ನಡೆದಿರುವುದು ಇಂಥ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.ಅಲ್ಪಸಂಖ್ಯಾತರ ಸ್ಕಾಲರ್‌ಶಿಪ್ ಕಾರ್ಯಕ್ರಮದಡಿ ಸಕ್ರಿಯವಾಗಿರುವ ಶೇಕಡ 53ರಷ್ಟು ಸಂಸ್ಥೆಗಳು ನಕಲಿ ಎಂಬುದು ಸಿಬಿಐ ತನಿಖೆಯಿಂದ ದೃಢಪಟ್ಟಿದೆ.832 ಸಂಸ್ಥೆಗಳಲ್ಲಿನ ಭ್ರಷ್ಟಾಚಾರದಿಂದಾಗಿ ಕಳೆದ ಐದು ವರ್ಷಗಳಲ್ಲಿ 144 ಕೋಟಿರೂಪಾಯಿ ನುಂಗಣ್ಣರ ಪಾಲಗಿದೆ ಎನ್ನುವುದು ಗೊತ್ತಾಗಿದೆ.ರಾಜ್ಯಗಳಲ್ಲಿನ ಹಗರಣಗಾರರು ಈ ರೀತಿಯ ಹಗರಣಗಳನ್ನು ನಡೆಸಿದ್ದಾರೆ ಮತ್ತು ಹಣವನ್ನು ನುಂಗಿ ಹಾಕಿದ್ದಾರೆ; ಕೇಂದ್ರ ಸರಕಾರ ಅದರಲ್ಲಿ ಒಳಗೊಂಡಿಲ್ಲ ಎಂದು ಮೋದಿ ಸರಕಾರ ಹೇಳಿಕೊಳ್ಳಬಹುದು
ಸಿಎಜಿ ವರದಿಗಳ ಮಹತ್ವದ ಕೆಲಸ
ಭ್ರಷ್ಟಾಚಾರ-ಮುಕ್ತ ಸಂಕಥನದ ಹೂರಣ
ಹಿಂದಿನ ಕಾಂಗ್ರೆಸ್ ಮತ್ತು ಯುಪಿಎ ಸರಕಾರಗಳ ಭ್ರಷ್ಟ ಆಡಳಿತದ ವಿರುದ್ಧ ಮಾತನಾಡುವುದು ಪ್ರಧಾನಿ ನರೇಂದ್ರ ಮೋದಿಯ ಪ್ರತಿದಿನದ ಅಭ್ಯಾಸವಾಗಿದೆ. ಬಿಜೆಪಿ ವಿರುದ್ಧವಿರುವ ಆಳುವ ಪ್ರಾದೇಶಿಕ ಪಕ್ಷಗಳ ವಿಚಾರದಲ್ಲೂ ಮೋದಿ ಭ್ರಷ್ಟಾಚಾರವನ್ನೇ ಟಾರ್ಗೆಟ್ ಮಾಡುತ್ತಿರುತ್ತಾರೆ.
ಬಿಜೆಪಿ ಸರಕಾರ ಮತ್ತು ತಾನು ಭ್ರಷ್ಟಾಚಾರ ಮುಕ್ತ ಎಂದು ಆರಂಭದಿಂದಲೂ ಬಿಂಬಿಸಿಕೊಳ್ಳಲು ಮೋದಿ ಪ್ರಯತ್ನಿಸುತ್ತಿದ್ದಾರೆ.`ನಾ ಖಾವೂಂಗಾ ನಾ ಖಾನೇ ದೂಂಗಾ’; (ಅಂದರೆ ನಾನೂ ಲಂಚ ತಿನ್ನುವುದಿಲ್ಲ, ಬೇರೆಯವರಿಗೂ ಬಿಡುವುದಿಲ್ಲ) ಎನ್ನುತ್ತಾ ಭ್ರಷ್ಟಾಚಾರವನ್ನುಯಾವ ರೀತಿಯಲ್ಲೂ ಸಹಿಸಿ ಕೊಳ್ಳುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ.ಇದು ವಿವಿಧ ಪಕ್ಷಗಳು ಅಧಿಕಾರದಲ್ಲಿದ್ದಾಗಿನ ಪರಿಸ್ಥಿತಿಗೆ ತೀರಾ ವ್ಯತಿರಿಕ್ತವಾದುದಾಗಿದೆ.
ಇ.ಡಿ. ಮೂಗಿಗೆ ಬಡಿಯುವ ವಾಸನೆ!
ಕಳೆದ ಒಂಬತ್ತು ವರ್ಷಗಳಲ್ಲಿ ಉನ್ನತ ಮಟ್ಟದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಯಾವುದೇ ಸರಕಾರಿ ಸಂಸ್ಥೆಯಿಂದ ನಿಜವಾದ ತನಿಖೆಯನ್ನು ಮಾಡದಿರುವ ಮೂಲಕ ಭ್ರಷ್ಟಾಚಾರ-ಮುಕ್ತ ಸಂಕಥನವನ್ನು ಉಳಿಸಿಕೊಂಡು ಬರಲಾಗಿದೆ. ಅನುಷ್ಠಾನ ನಿರ್ದೇಶನಾಲಯ (ಇ.ಡಿ.) ಮತ್ತು ಕೇಂದ್ರೀಯ ತನಿಖಾ ದಳದಂಥ (ಸಿಬಿಐ) ತನಿಖಾ ಸಂಸ್ಥೆಗಳು ಪ್ರತಿಪಕ್ಷ ಮುಖಂಡರುಗಳು ಮತ್ತು ಬಿಜೆಪಿಯೇತರ ರಾಜ್ಯ ಸರಕಾರಗಳ ಮಂತ್ರಿಗಳ ವಿರುದ್ಧ ಪುಂಖಾನುಪುಂಖ ತನಿಖೆಗಳನ್ನು ಕೈಗೊಂಡಿವೆ. ಅದರಲ್ಲೂ ವಿಶೇಷವಾಗಿ ಕುಖ್ಯಾತ ಸಂಜಯ್ ಮಿಶ್ರಾ ನಾಯಕತ್ವದ ಇ.ಡಿ. ಮೂಗಿಗೆ ಬಹುಶಃ ಬಿಜೆಪಿಯೇತರ ರಾಜಕೀಯ ವಲಯಗಳ ಭ್ರಷ್ಟಾಚಾರದ ವಾಸನೆ ಮಾತ್ರ ಬಡಿಯುತ್ತದೆ!
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮೋದಿ ಸರಕಾರದ ದಾಖಲೆಯನ್ನು ಶುದ್ಧವಾಗಿರಿಸಲಾಗಿದೆ ಹಾಗೂ ಸ್ಯಾನಿಟೈಸ್ ಮಾಡಲಾಗಿದೆ.ಸರಕಾರಿ ಭ್ರಷ್ಟಾಚಾರದ ತನಿಖೆ ಬಗ್ಗೆ ಮಾತ್ರವೇ ಇರುವಂಥ ಲೋಕಪಾಲ್ ಸಂಸ್ಥೆಯನ್ನುಯಾವುದೇ ಅಧಿಕಾರವಿಲ್ಲದ ಹಾಗೂ ನಿಷ್ಕ್ರಿಯ ಸಂಸ್ಥೆಯನ್ನಾಗಿ ಮಾಡುವ ಮೂಲಕ ಈ ಉದ್ದೇಶವನ್ನು ಸಾಧಿಸಲಾಗಿದೆ.ಅಣ್ಣಾ ಹಜಾರೆಯವರು ಭ್ರಷ್ಟಾಚಾರ-ವಿರೋಧಿ ಆಂದೋಲನವನ್ನು ಆರಂಭಿಸಿದ ನಂತರ, ಯುಪಿಎ ಸರಕಾರ 2013ರಲ್ಲಿ ಲೋಕಪಾಲ್ ಮತ್ತು ಲೋಕಾಯುಕ್ತ ಕಾನೂನುಗಳನ್ನು ಅಂಗೀಕರಿಸಿತ್ತು.ಕೊನೆಗೂ 2019ರಲ್ಲಿ ಲೋಕಪಾಲ್‌ಗೆ ಸದಸ್ಯರನ್ನು (ನಾಲ್ವರು ನ್ಯಾಯಾಂಗ ಹಾಗೂ ನ್ಯಾಯಾಂಗೇತರ ಸದಸ್ಯರು) ನೇಮಿಸಲು ಮೋದಿ ಸರಕಾರಕ್ಕೆ ಬರೋಬ್ಬರಿ ಐದು ವರ್ಷ ಬೇಕಾಯಿತು.ಅದಾದ ಮೂರು ವರ್ಷಗಳಲ್ಲಿ ಲೋಕಪಾಲ್ ಯಾವುದೇ ಗಮನಾರ್ಹ ಪ್ರಕರಣವನ್ನಾಗಲೀ ದೂರನ್ನಾಗಲೀ ತನಿಖೆ ಮಾಡಿದ ಸುಳಿವಿಲ್ಲ. ಅಸಲಿಗೆ, ಲೋಕಪಾಲ್ ನಿಜವಾಗಿಯೂ ಏನು ಮಾಡುತ್ತಿದ್ದಾರೆ ಎನ್ನುವುದೇ ನಿಗೂಢವಾಗಿದೆ.
ಸಿಎಜಿ ಸಹಕಾರ
ಸರಕಾರಿ ವೆಚ್ಚಗಳನ್ನು ಪರಿಶೀಲಿಸುವ ಸಾಂವಿಧಾನಿಕ ಸಂಸ್ಥೆಯಾದ ಭಾರತೀಯ ಮಹಾ ಲೆಕ್ಕಪರಿಶೋಧಕರು (ಸಿಎಜಿ), ಸರಕಾರಿ ಹಣ ದುರುಪಯೋಗದ ಯಾವುದೇ ದೊಡ್ಡ ಪ್ರಕರಣಗಳನ್ನು ಬಹಿರಂಗಪಡಿಸದೇ ಇರುವಲ್ಲಿ ಕೇಂದ್ರ ಸರಕಾರದೊಂದಿಗೆ ಗಮನಾರ್ಹವಾದ ಸಹಕಾರ ನೀಡುತ್ತಿದೆ.ರಫೇಲ್ ವ್ಯವಹಾರದ ಪ್ರಕರಣದಲ್ಲಿ, ಫ್ರೆಂಚ್ ಕಂಪನಿಯಿಂದ ಯುದ್ಧ ವಿಮಾನಗಳನ್ನು ಖರೀದಿಸುವಲ್ಲಿ ಸರಕಾರಿ ಖಜಾನೆಯ ಹಣದ ಯಾವುದೇ ದುರುಪಯೋಗವಾಗಿಲ್ಲ ಎನ್ನುವ ಕಣ್ಣೊರೆಸುವ ವರದಿಯೊಂದನ್ನು ಸಿಎಜಿ ಮಂಡಿಸಿದೆ.
ಇದನ್ನೂ ಓದಿ:“ತರಾತುರಿಯಲ್ಲಿ ರೈಲ್ವೇ ದುರಂತ ತನಿಖೆಗೆ ಸಿಬಿಐಯನ್ನು ನೇಮಿಸಿರುವುದು ಅಚ್ಚರಿ ಉಂಟು ಮಾಡಿದೆ” – ಇ ಎ ಎಸ್ ಶರ್ಮಾ
ಆದರೆ, ದ್ವಾರಕಾ ಎಕ್ಸ್ಪ್ರೆಸ್‌ವೇ ಹೆದ್ದಾರಿ ಯೋಜನೆಯಲ್ಲಿ ಸರಕಾರಿ ಹಣ ವ್ಯಯಿಸುವಲ್ಲಿ ಗಂಭೀರ ಅವ್ಯವಹಾರಗಳು ನಡೆದಿವೆ ಎಂದು ಸಿಎಜಿ ಇತ್ತೀಚಿನ ವರದಿಯೊಂದರಲ್ಲಿ ಬಹಿರಂಗ ಪಡಿಸಿದೆ.ನಿರ್ಮಾಣ ವೆಚ್ಚವು ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಿಂತ 14 ಪಟ್ಟು ಜಾಸ್ತಿಯಾಗಿದೆ ಎಂದು ಸಿಎಜಿ ವರದಿ ಹೇಳಿದೆ.ಮೂಲದಲ್ಲಿ ತಲಾ ಕಿಲೋ ಮೀಟರ್ ನಿರ್ಮಾಣ ವೆಚ್ಚ 18.20 ಕೋಟಿರೂಪಾಯಿ ಎಂದು ಅನುಮೋದಿಸಲಾಗಿತ್ತು.ಆದರದು ಪ್ರತಿ ಕಿ.ಮೀ.ಗೆ ಅಗಾಧವಾದ 250.77 ಕೋಟಿರೂಪಾಯಿಗೆ ಏರಿದೆ.ವಿಸ್ತ್ರತವಾದ ಯೋಜನಾ ವರದಿ ಇಲ್ಲದಿರುವುದು ಮತ್ತು ಇತರ ಅನೇಕ ಗಂಭೀರವಾದ ಪ್ರಶ್ನಾರ್ಹ ನಿರ್ಧಾರಗಳನ್ನು ಕೈಗೊಂಡಿರುವತ್ತಲೂ ಸಿಎಜಿ ವರದಿ ಬೆಟ್ಟು ಮಾಡಿದೆ.ರಾಷ್ಟ್ರರಾಜಧಾನಿ ವಲಯದ (ಎನ್‌ಸಿಆರ್) ಪ್ರತಿಷ್ಠಿತ ಯೋಜನೆಯೊಂದು ಸಂಬಂಧಪಟ್ಟ ಪಕ್ಷಗಳಿಗೆ ಅಗಾಧವಾದ ಲಾಭವನ್ನು ಮಾಡಿಕೊಡುವುದಾದರೆ ಇತರ ಹೆದ್ದಾರಿ ಯೋಜನೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳಲ್ಲಿ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರಬಹುದು ಎಂಬ ಬಗ್ಗೆ ಅಚ್ಚರಿಯಾಗದೇ ಇರಲು ಸಾಧ್ಯವಿಲ್ಲ.
ಸತ್ತವರ ಹೆಸರಲ್ಲಿ ಕೋಟ್ಯಂತರ ರೂಪಾಯಿ ಬಿಲ್
ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ (ಪಿಎಂ-ಜೆಎವೈ)ನಂಥ ಕೇಂದ್ರ ಸರಕಾರದ ಕಲ್ಯಾಣ ಯೋಜನೆಗಳಲ್ಲಿ ಹಗರಣಗಳು ಕಾಯಂ ಆಗಿ ನಡೆಯುತ್ತಿವೆ ಎಂಬುದನ್ನು ಕೂಡ ಸಿಎಜಿ ಬಹಿರಂಗಪಡಿಸಿದೆ. ವೈದ್ಯಕೀಯ ದಾಖಲೆಗಳಲ್ಲಿ ಮೃತರೆಂದು ಪತ್ತೆಯಾಗಿರುವ 3,446 ರೋಗಿಗಳ ಚಿಕಿತ್ಸೆಗೆಂದು 6.97 ಕೋಟಿ ರೂಪಾಯಿಗಳನ್ನು ವಿತರಿಸಿರುವ ಪ್ರಕರಣವನ್ನು ಸಿಎಜಿ ಪತ್ತೆ ಮಾಡಿದೆ.ಪಿಎಂ-ಜೆಎವೈಅಡಿಯಲ್ಲಿ ನೊಂದಾಯಿಸಿಕೊಂಡಿರುವ ಸುಮಾರು 7.5 ಲಕ್ಷ ಫಲಾನುಭವಿಗಳು ಒಂದೇ ಮೊಬೈಲ್ ಸಂಖ್ಯೆಯಿಂದ ಲಿಂಕ್‌ಆಗಿದ್ದಾರೆ. ಅಷ್ಟು ಮಾತ್ರವಲ್ಲದೆ, ಪಿಎಂ-ಜೆಎವೈ ಒಂದು ಕಾಗದ ರಹಿತ ಮತ್ತು ನಗದು ರಹಿತ ಸೇವೆಯಾಗಿದ್ದರೂ ಅನೇಕ ರಾಜ್ಯಗಳಲ್ಲಿ ಬಹಳಷ್ಟು ರೋಗಿಗಳು ಈ ಯೋಜನೆಯಡಿ ಕವರ್‌ಆಗಿದ್ದರೂ ವಿವಿಧ ಬಾಬ್ತುಗಳಿಗೆ ನಾನಾ ಮೊತ್ತದ ನಗದನ್ನು ನೀಡಬೇಕಾಗಿದೆ. ಡಾಟಾಬೇಸ್‌ನಲ್ಲಿ ಮತ್ತು ಮೌಲ್ಯಮಾಪನದಲ್ಲಿ ಇನ್ನೂ ಹಲವು ಬಗೆಯ ದೋಷಗಳನ್ನು ಕೂಡ ಸಿಎಜಿ ಪತ್ತೆ ಹಚ್ಚಿದೆ.
ಕಲ್ಯಾಣ ಯೋಜನೆಗಳ ಪಾವತಿಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಮಧ್ಯವರ್ತಿಗಳು ಮತ್ತು ಭ್ರಷ್ಟಾಚಾರವನ್ನುತೊಡೆದು ಹಾಕಲಾಗಿದೆಎನ್ನುವುದು ಮೋದಿ ಸರಕಾರ ಪದೇ ಪದೇ ಕೊಚ್ಚಿಕೊಳ್ಳುವ ಒಂದುದೊಡ್ಡ ವಿಷಯವಾಗಿದೆ. ಆದರೆ, ಇಂಥ ಡಿಜಿಟಲೀಕರಿಸಿದ ಯೋಜನೆಗಳು ಕೂಡ ಅವ್ಯವಹಾರಗಳಿಗೆ ತುತ್ತಾಗಬಹುದುಎನ್ನುವುದನ್ನು ಪಿಎಂ-ಜೆಎವೈನಲ್ಲಿನ ಹಗರಣಗಳು ಸಾಬೀತುಪಡಿಸಿವೆ.
ಅಲ್ಪಸಂಖ್ಯಾತರ ಸ್ಕಾಲರ್‌ಶಿಪ್ ಗೋಲ್‌ಮಾಲ್
ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ವಿತರಣೆಯಲ್ಲಿ ಪ್ರಮುಖ ಹಗರಣ ನಡೆದಿರುವುದು ಇಂಥ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.ಅಲ್ಪಸಂಖ್ಯಾತರ ಸ್ಕಾಲರ್‌ಶಿಪ್ ಕಾರ್ಯಕ್ರಮದಡಿ ಸಕ್ರಿಯವಾಗಿರುವ ಶೇಕಡ 53ರಷ್ಟು ಸಂಸ್ಥೆಗಳು ನಕಲಿ ಎಂಬುದು ಸಿಬಿಐ ತನಿಖೆಯಿಂದ ದೃಢಪಟ್ಟಿದೆ.832 ಸಂಸ್ಥೆಗಳಲ್ಲಿನ ಭ್ರಷ್ಟಾಚಾರದಿಂದಾಗಿ ಕಳೆದ ಐದು ವರ್ಷಗಳಲ್ಲಿ 144 ಕೋಟಿರೂಪಾಯಿ ನುಂಗಣ್ಣರ ಪಾಲಗಿದೆ ಎನ್ನುವುದು ಗೊತ್ತಾಗಿದೆ.ರಾಜ್ಯಗಳಲ್ಲಿನ ಹಗರಣಗಾರರು ಈ ರೀತಿಯ ಹಗರಣಗಳನ್ನು ನಡೆಸಿದ್ದಾರೆ ಮತ್ತು ಹಣವನ್ನು ನುಂಗಿ ಹಾಕಿದ್ದಾರೆ; ಕೇಂದ್ರ ಸರಕಾರ ಅದರಲ್ಲಿ ಒಳಗೊಂಡಿಲ್ಲ ಎಂದು ಮೋದಿ ಸರಕಾರ ಹೇಳಿಕೊಳ್ಳಬಹುದು.ಆದರೆ, ಇಂಥ ಪ್ರಕರಣಗಳ ತನಿಖೆ ನಡೆಯುವುದು ಅಗತ್ಯವಾಗಿರುವಾಗ; ಭ್ರಷ್ಟಾಚಾರಕ್ಕೆಕಡಿವಾಣ ಹಾಕುವುದೇ ಉದ್ದೇಶವಾಗಿರುವ ಕೇಂದ್ರೀಯ ತನಿಖಾ ಸಂಸ್ಥೆಗಳು ಇವುಗಳನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕುತ್ತಿರುವುದು ನಿಜಕ್ಕೂ ಗಂಭೀರ ವಿಷಯವಾಗಿದೆ. ಹಗರಣಗಳನ್ನು ಮುಚ್ಚಿಹಾಕುವ ತಂತ್ರವಿದು ಎಂದು ತಿಳಿಯುತ್ತದೆ.
ಏನೇ ಇರಲಿ, ಕೇಂದ್ರ ಮಟ್ಟದಲ್ಲಿ ಭ್ರಷ್ಟಾಚಾರದ ಸುತ್ತಕಟ್ಟಲಾದ ರಕ್ಷಣಾ ಗೋಡೆಯನ್ನುಇತ್ತೀಚಿನ ಸಿಎಜಿ ವರದಿ ಸ್ವಲ್ಪ ಮಟ್ಟಿಗೆ ಕೆಡವಿ ಹಾಕಿರುವುದು ಸಮಾಧಾನದ ವಿಷಯವಾಗಿದೆ.
ಅನು: ವಿಶ್ವ