ಚಿಕಿತ್ಸೆ ನೀಡಲು ಹೋಗಿದ್ದ ಅರಣ್ಯ ಸಿಬ್ಬಂದಿಯನ್ನೇ ಕೊಂದ ಕಾಡಾನೆ

ಹಾಸನ: ಇತ್ತೀಚೆಗೆ ಕಾಡಾನೆಗಳ ನಡುವಿನ ಕಲಹದ ವೇಳೆ ಗಾಯಗೊಂಡಿದ್ದ ಕಾಡಾನೆ ಭೀಮನಿಗೆ ಚಿಕಿತ್ಸೆ ಕೊಡಲು ಹೋಗಿದ್ದ ಅರಣ್ಯ ಸಿಬ್ಬಂದಿಯ ಮೇಲೆ ಭೀಮ, ದಾಳಿ ನಡೆಸಿರುವ ಘಟನೆ ಆ. 31ರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ವೆಂಕಟೇಶ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಭೀಮ: ಮೂರು ದಿನಗಳ ಹಿಂದೆ, ಇತರ ಕಾಡಾನೆಗಳ ಜೊತೆಗೆ ಕಾದಾಟ ನಡೆಸಿದ್ದ ಭೀಮ, ಬೇರೆ ಕಾಡಾನೆಯೊಂದರ ದಂತದಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ. ಆತನ ಕಾಲಿಗೆ ಗಾಯವಾಗಿತ್ತು. ಆತನಿಗೆ ಓಡಾಡಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಕಳೆದ ಮೂರು ದಿನಗಳಿಂದ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರವಾದ ಗಾಯ, ನೋವು, ಹಸಿವಿನಿಂದ ಭೀಮ ಕಂಗೆಟ್ಟಿದ್ದ ಎಂದು ಹೇಳಲಾಗಿದೆ. ಆ. 31ರಂದು ಅರಣ್ಯ ಇಲಾಖೆಯ ಸಿಬ್ಬಂದಿಯು ಬಂದ ಕೂಡಲೇ ರೊಚ್ಚಿಗೆದ್ದು ಆತ ಏಕಾಏಕಿ ದಾಳಿ ನಡೆಸಿದ್ದಾನೆ. ಆತ ದಾಳಿ ಮಾಡುತ್ತಾನೆಂದು ಕನಸಿನಲ್ಲಿ ಅಂದುಕೊಂಡಿರದ ಸಿಬ್ಬಂದಿಗಳು ಓಡುವಷ್ಟರಲ್ಲಿ ವೆಂಕಟೇಶ್ ಅವರು ಭೀಮನ ದಾಳಿಯಿಂದಾಗಿ ಸಾವಿಗೀಡಾಗಿದ್ದಾರೆ.

ಅರಣ್ಯ ಇಲಾಖೆ ಶಾರ್ಪ್ ಶೂಟರ್ ಬಲಿ ಪಡೆದ ‘ಭೀಮ’ ಆಗಿದ್ದೇನು ಗೊತ್ತಾ..?
ಕಾಡಾನೆಗಳ ನಡುವಿನ ಕಾದಾಟದಲ್ಲಿ ಗಾಯಗೊಂಡಿದ್ದ ಭೀಮನಿಗೆ ಚಿಕಿತ್ಸೆ ನೀಡಲು ಮುಂದಾದ ವೇಳೆ ಅರಣ್ಯ ಇಲಾಖೆ ಶಾರ್ಪ್ ಶೋಟರ್ ವೆಂಕಟೇಶ್ ಮೇಲೆ ಕಾಡಾನೆ ಭೀಮ ಏಕಾಏಕಿ ದಾಳಿ ನಡೆಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವನಪ್ಪಿದ್ದಾರೆ.  ಗಾಯಗೊಂಡು ನರಳಾಡುತ್ತಿದ್ದ ಕಾಡಾನೆಯನ್ನು ಸೆರೆ ಹಿಡಿದು, ಚಿಕಿತ್ಸೆ ನೀಡಲು ಇಂದು ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಚಿಕಿತ್ಸೆ ನೀಡಲು ಮುಂದಾಗಿತ್ತು. ಈ ವೇಳೆ ಅರಣ್ಯ ಇಲಾಖೆಯ ಶಾರ್ಪ್ ಶೂಟರ್ ವೆಂಕಟೇಶ್ ಅವರು ಕಾಡಾನೆಗೆ ಅರಿವಳಿಕೆ ನೀಡಲು ಮುಂದಾದ ವೇಳೆ ಕಾಡಾನೆ ಭೀಮ ಏಕಾಏಕಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತು. ವೆಂಕಟೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಹೇಳುತ್ತಿದ್ದಾರೆ.

 

ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ : ಚಿಕಿತ್ಸೆ ನೀಡಲು ಹೋಗಿದ್ದ ಅರಣ್ಯ ಸಿಬ್ಬಂದಿಯನ್ನೇ ಕೊಂದ ಕಾಡಾನೆ

 

Donate Janashakthi Media

Leave a Reply

Your email address will not be published. Required fields are marked *