ಲಿಂಗಸಗೂರು: ರಾಯಚೂರು ಜಿಲ್ಲಾ ಲಿಂಗಸಗೂರು ತಾಲೂಕು ಪಂಚಾಯಿತಿನಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಇದನ್ನೂ ಓದಿ:ರೈತರಿಗೆ ವಂಚಿಸುತ್ತಿರುವ ಅಧಿಕಾರಿಗಳು; ಜಿಲ್ಲಾಧಿಕಾರಿಗಳಿಗೆ ಡಿಎಸ್ಎಸ್ ದೂರು
ತಾಲೂಕ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮ ಪಂಚಾಯಿತಿಗಳು ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಾ ಮಟ್ಟಸ ನನ್ನ ಮಣ್ಣು ನನ್ನ ದೇಶ ಎಂಬ ಕಾರ್ಯಕ್ರಮವನ್ನು ಆಗಸ್ಟ್-20 ರಂದು ಹಮ್ಮಿಕೊಳ್ಳಲಾಗಿತ್ತು.
ಸಹಾಯಕ ನಿರ್ದೇಶಕರು (ಗ್ರಾ.ಪಂ )ಹಾಗೂ ಸಹಾಯಕ ನಿರ್ದೇಶಕರು (ಪಂ. ರಾ ) ಇವರುಗಳ ಉಪಸ್ಥಿತಿಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ತಮ್ಮ ಗ್ರಾಮ ಪಂಚಾಯತ್ನಿಂದ ಮಣ್ಣು ಸಂಗ್ರಹಣೆ ಮಾಡಿ ಎಲ್ಲರೂ ರಾಷ್ಟ್ರ ಮಟ್ಟಕ್ಕೆ ಕಳುಹಿಸುವ ಕೆಲಸಕ್ಕೆ ಕೈಜೋಡಿಸಿದರು. ನಂತರ ಪಂಚ-ಪ್ರಾಣ ಶಪತವನ್ನು ಎಲ್ಲರಿಗೂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೋದಿಸಿದರು.
ಈ ಸಂದರ್ಭದಲ್ಲಿ ಸೋಮನಗೌಡ ಪಾಟೀಲ್ ಸಹಾಯಕ ನಿರ್ದೇಶಕರು (ಗ್ರಾ.ಉ), ಮಂಜುನಾಥ್ ಜಾವುರ ಸಹಾಯಕ ನಿರ್ದೇಶಕರು (ಪಂ.ರಾ), ಅಮರೇಶ್ (ಎಫ್ಡಿಎ), ತಾಲೂಕಿನ ಎಲ್ಲಾ ಅಭಿವೃದ್ಧಿ ಅಧಿಕಾರಿಗಳು, ಬಾಲಪ್ಪ ಟಿಐಇಸಿ ಸಂಯೋಜಕರು, ಎನ್ಆರ್ಎಲ್ಎಂ ತಂಡದ ಬಸವರಾಜ್ ಹಾಗೂ ಮಲ್ಲಿಕಾರ್ಜುನ ರ ವರು, ಶಾಲೆಯ ಮಕ್ಕಳು ಹಾಗೂ ದೇಶ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.