ಗುಂಡುಹಾರಿಸಿ ನಾಲ್ವರನ್ನು ಹತ್ಯೆ ಮಾಡಿದ್ದ ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಸೇವೆಯಿಂದ ವಜಾ

ಮುಂಬೈ:ಜುಲೈ 31ರಂದು ಜೈಪುರ ಮುಂಬೈ ಸೂಪರ್‌ ಫಾಸ್ಟ್‌ ರೈಲಿನಲ್ಲಿ ತನ್ನ ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಆರ್‌ಪಿಎಫ್‌ ಕಾನ್‌ಸ್ಟೆಬಲ್‌ ಚೇತನ್‌ ಸಿಂಗ್‌ ಚೌಧರಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ರೈಲ್ವೆ ರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಆಯುಕ್ತರು,ಚೌಧರಿ ಅವರನ್ನು ವಜಾಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಳೆದ ತಿಂಗಳ ಹಿಂದೆ ಮುಂಬೈ ಹೊರವಲಯದಲ್ಲಿ ಪಾಲ್ಘರ್‌ ರೈಲು ನಿಲ್ದಾಣದ ಸಮೀಪ ಜೈಪುರ ಮುಂಬೈ ಸೂಪರ್‌ ಫಾಸ್ಟ್‌ ರೈಲಿನಲ್ಲಿ ಚೌಧರಿ (34) ತನ್ನ ಹಿರಿಯ ಅಧಿಕಾರಿ,ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಟಿಕರಾಮ್‌ ಮೀನಾ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.

ಇದನ್ನೂ ಓದಿ:ದೇಶ ಸ್ವತಂತ್ರಗೊಂಡು 76 ವರ್ಷ; ರಾಜ್ಯದಲ್ಲಿದ್ದಾರೆ 7,449 ಮಲ ಹೊರುವರು!

 ಮೊಹಮ್ಮದ್‌ ಹುಸೇನ್‌ ಭಾನ್‌ಪುರವಾಲಾ, ಸಯ್ಯದ್‌ ಸಪುದ್ದೀನ್‌ ಮತ್ತು ಅಸ್ಗರ್‌ ಅಬ್ಬಾಸ್‌ ಶೇಖ್‌ರವರನ್ನು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಾಲ್ವರನ್ನು ಗುಂಡುಹಾರಿಸಿ ಹತ್ಯೆ ಮಾಡಲಾಗಿತ್ತು.

ಕನಿಷ್ಠ ಮೂರು ಶಿಸ್ತು ಕ್ರಮ ಸಂಬಂಧಿತ ಘಟನೆಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ಕುರಿತು ಸದ್ಯ ಚೌಧರಿ ನ್ಯಾಯಾಂಗ ಬಂಧನದಲ್ಲಿದ್ದು ತನಿಖೆ ನಡೆಸಲಾಗುತ್ತಿದೆ. ತನಿಖೆಯನ್ನು ತೀವೃಗೊಳಿಸಿ ಆತನಿಗೆ ಶಿಕ್ಷೆ ನೀಡಬೇಕು ಎಲ್ಲದೆ ಹೋದಲ್ಲಿ ಆರ್‌ಪಿಎಫ್‌ ಬಗ್ಗೆ  ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ನಿರ್ಲಕ್ಷ್ಯ ಮಾಡಿದರೆ ಇದು ಸಾಂಕ್ರಾಮಿಕ ರೋಗದಂತೆ ಹರಡುವ ಅಪಾಯವಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *