ಏಮ್ಸ್ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಭಾಗದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು – ಪ್ರಿಯಾಂಕ್‌ ಖರ್ಗೆ

ಕಲಬುರ್ಗಿ: ಕಲಬುರ್ಗಿ ಅಥವಾ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಭಾಗದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿ ಅಥವಾ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಬೇಕೆಂಬುದು ಬಹಳ ದಿನದಿಂದ ಇಲ್ಲಿನ ಜನರ ಕೂಗಿದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಚುನಾಯಿತ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.

ಇದನ್ನೂ ಓದಿ:ಕಂದಾಯ ಗ್ರಾಮ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಪ್ರಧಾನಿ ಬರಬೇಕೆ: ಪ್ರಿಯಾಂಕ್‌ ಖರ್ಗೆ ವ್ಯಂಗ್ಯ

ರಾಯಚೂರು ಜಿಲ್ಲೆ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಲ್ಲಿ ಒಂದಾಗಿದೆ. ಕಲಬುರಗಿಯಲ್ಲಿನ ಇ.ಎಸ್.ಐ.ಸಿ. ಆಸ್ಪತ್ರೆ, ರಾಯಚೂರಿನ ಓಪೆಕ್ಸ್ ಆಸ್ಪತ್ರೆ ಕಟ್ಟಡದ ಜೊತೆಗೆ ಸಕಲ ಮೂಲಸೌಕರ್ಯಗಳ ವ್ಯವಸ್ಥೆ ಇದ್ದು, ಇದನ್ನೇ ಏಮ್ಸ್ ಗೆ ಮೇಲ್ದರ್ಜೇಗೇರಿಸಬಹುದು. ಈ ಭಾಗದ ಒಳಿತಿಗಾಗಿ ಮತ್ತು ಪ್ರಗತಿಗೆ ಸಂಸದರು‌ ಮುಂದಾಗಬೇಕು ಎಂದರು.

ಕೆ.ಕೆ.ಅರ್.ಡಿ.ಬಿ. ಮಂಡಳಿಗೆ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರನ್ನು ನೇಮಿಸಿರುವುದರ ಜೊತೆಗೆ ಇತರೆ‌ 10 ಜನ‌ ಜನಪ್ರತಿನಿಧಿಗಳನ್ನು ನೇಮಿಸಿ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ತಂದಿರುವುದು ಸಂತಸವಾಗಿದೆ. ಡಾ.ಅಜಯ್ ಸಿಂಗ್ ಅವರು, ಮಂಡಳಿ ಮತ್ತು ಪ್ರದೇಶದವನ್ನು ಅಭಿವೃದ್ದಿಯತ್ತ ಮುನ್ನೆಡೆಸಲು ಸಮರ್ಥರಿದ್ದಾರೆ. ಇತ್ತೀಚೆಗೆ ಯೋಜನಾ ಸಚಿವ ಡಿ.ಸುಧಾಕರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಂದಿನ ಸರ್ಕಾರ ಮಂಡಳಿ‌ಯ ವಿವೇಚನೆಗೆ ಶೇ.26 ರಷ್ಟು ಅನುದಾನ ನೀಡುತ್ತಿತ್ತು. ಅದನ್ನು ನಮ್ಮ ಸರ್ಕಾರ ಶೇ.96ಕ್ಕೆ ಹೆಚ್ಚಿಸಿದೆ. ಈ ಮೂಲಕ ಮಂಡಳಿ ಬಲವರ್ಧನೆಯೂ ಮಾಡಲಾಗಿದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *