ಕರ್ನಾಟಕ ಸೇರಿದಂತೆ ದೇಶದಲ್ಲಿ 20 ನಕಲಿ ವಿಶ್ವವಿದ್ಯಾಲಯಗಳು!

ರಾಜ್ಯದ ಬಡಗಾಂವಿ ಸರ್ಕಾರ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿಯನ್ನು ಕಳೆದ ವರ್ಷ ಕೂಡಾ ನಕಲಿ ವಿಶ್ವವಿದ್ಯಾಲಯ ಎಂದು ಘೋಷಿಸಲಾಗಿತ್ತು 

ನವದೆಹಲಿ: ಬೆಳಗಾವಿಯ ಗೋಕಾಕದಲ್ಲಿರುವ ಬಡಗಾಂವಿ ಸರ್ಕಾರ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ ಸೇರಿದಂತೆ ಒಟ್ಟು ಇಪ್ಪತ್ತು ವಿವಿಗಳನ್ನು ಯೂನಿವರ್ಸಿಟಿ ಗ್ರಾಂಟ್ ಕಮಿಷನ್ (ಯುಜಿಸಿ) ಬುಧವಾರ ‘ನಕಲಿ ವಿಶ್ವವಿದ್ಯಾಲಯ’ ಎಂದು ಘೋಷಿಸಿದೆ. ಈ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಯಾವುದೇ ಪದವಿಗಳನ್ನು ನೀಡಲು ಅಧಿಕಾರ ಹೊಂದಿಲ್ಲ ಎಂದು ಯುಜಿಸಿ ತಿಳಿಸಿದ್ದು, ಈ ಸಂಸ್ಥೆಗಳಲ್ಲಿ ಪ್ರವೇಶ ಪಡೆಯದಂತೆ ವಿದ್ಯಾರ್ಥಿಗಳನ್ನು ಎಚ್ಚರಿಸಿದೆ.

ಕಳೆದ ವರ್ಷ ಯುಜಿಸಿ 21 ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ಘೋಷಿಸಿತ್ತು. ರಾಜ್ಯದ ಬಡಗಾಂವಿ ಸರ್ಕಾರ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿಯನ್ನು ಕಳೆದ ವರ್ಷ ಕೂಡಾ ನಕಲಿ ವಿವಿ ಎಂದು ಘೋಷಿಸಲಾಗಿತ್ತು. ಈ ಬಾರಿ ನಕಲಿ ಎಂದು ಘೋಷಿಸಲಾದ 20 ಯುನಿವರ್ಸಿಟಿಗಳಲ್ಲಿ ಎಂಟು ದೆಹಲಿ ಮೂಲದ ಸಂಸ್ಥೆಗಳಾಗಿವೆ. ಇಲ್ಲಿ ಯಾವುದೇ ಕೋರ್ಸ್‌ಗೆ ದಾಖಲಾಗುವ ಮೊದಲು ವಿವಿಗಳ ದೃಢೀಕರಣವನ್ನು ಕ್ರಾಸ್-ಚೆಕ್ ಮಾಡುವಂತೆ ಯುಜಿಸಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಒತ್ತಿ ಹೇಳಿದೆ.

ಇದನ್ನೂ ಓದಿ: ಮಾಜಿ ಸಚಿವ ಆರಗ ಜ್ಞಾನೇಂದ್ರರಿಂದ ಖರ್ಗೆ & ಉತ್ತರ ಕರ್ನಾಟಕದ ಜನರ ವಿರುದ್ಧ ಜನಾಂಗೀಯ ನಿಂದನೆ

“ಯುಜಿಸಿ ಕಾಯಿದೆಯನ್ನು ಉಲ್ಲಂಘಿಸಿ ಕೆಲವು ಸಂಸ್ಥೆಗಳು ಪದವಿಗಳನ್ನು ನೀಡುತ್ತಿವೆ ಎಂದು ಯುಜಿಸಿ ಇತ್ತೀಚೆಗೆ ಅರಿತಿದೆ. ಪರಿಣಾಮವಾಗಿ, ಈ ವಿವಿಗಳ ಪದವಿಗಳನ್ನು ಹೆಚ್ಚಿನ ಶಿಕ್ಷಣ ಅಥವಾ ಉದ್ಯೋಗ ಉದ್ದೇಶಗಳಿಗಾಗಿ ಅಂಗೀಕರಿಸಲಾಗುವುದಿಲ್ಲ ಅಥವಾ ಸ್ವೀಕರಿಸಲಾಗುವುದಿಲ್ಲ. ಈ ವಿವಿಗಳು ಯಾವುದೇ ಪದವಿಗಳನ್ನು ನೀಡುವ ಅಧಿಕಾರವನ್ನು ಹೊಂದಿರುವುದಿಲ್ಲ” ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.

ಯುಜಿಸಿ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ನಕಲಿ ವಿಶ್ವವಿದ್ಯಾಲಯಗಳು ಇಂತಿವೆ:

ಕರ್ನಾಟಕದ ನಕಲಿ ವಿಶ್ವವಿದ್ಯಾಲಯ:

  1. ಬಡಗಾಂವಿ ಸರ್ಕಾರ್‌ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ,
    ಗೋಕಾಕ್, ಬೆಳಗಾವಿ.ದೆಹಲಿಯಲ್ಲಿರುವ ನಕಲಿ ವಿಶ್ವವಿದ್ಯಾಲಯ:
  2. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ & ಫಿಸಿಕಲ್ ಹೆಲ್ತ್ ಸೈನ್ಸಸ್ (AIIPHS) ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯ,
    ಕಛೇರಿ Kh ನಂ. 608-609, 1 ನೇ ಮಹಡಿ,
    ಸಂತ ಕೃಪಾಲ್ ಸಿಂಗ್ ಸಾರ್ವಜನಿಕ ಟ್ರಸ್ಟ್ ಕಟ್ಟಡ,
    BDO ಕಚೇರಿ ಹತ್ತಿರ, ಅಲಿಪುರ.
  3. ಕಮರ್ಸಿಯಲ್ ಯೂನಿವರ್ಸಿಟಿ ಲಿಮಿಟೆಡ್,
    ದರಿಯಾಗಂಜ್.
  4. ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ.
  5. ವಕೇಷನಲ್ ಯೂನಿವರ್ಸಿಟಿ.
  6. ADR-ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ,
    ADR ಹೌಸ್, 8J, ಗೋಪಾಲ ಟವರ್,
    25 ರಾಜೇಂದ್ರ ಪ್ಲೇಸ್.
  7. ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಆಂಡ್‌ ಎಂಜಿನಿಯರಿಂಗ್.
  8. ವಿಶ್ವಕರ್ಮ ಓಪನ್ ಯುನಿವರ್ಸಿಟಿ ಫಾರ್‌ ಸೆಲ್ಪ್‌ ಎಂಪ್ಲಾಯಿಮೆಂಟ್,
    ರೋಜ್‌ಗರ್ ಸೇವಾಸದನ್, 672, ಸಂಜಯ್ ಎನ್‌ಕ್ಲೇವ್,
    Opp. ಜಿಟಿಕೆ ಡಿಪೋ.
  9. ಆಧ್ಯಾತ್ಮಿಕ್ ವಿಶ್ವವಿದ್ಯಾಲಯ (ಸ್ಪಿರಿಚುವಲ್ ಯುನಿವರ್ಸಿಟಿ),
    351-352, ಹಂತ-I, ಬ್ಲಾಕ್-ಎ, ವಿಜಯ್ ವಿಹಾರ್,
    ರಿಥಾಲಾ, ರೋಹಿಣಿ.ಉತ್ತರ ಪ್ರದೇಶದಲ್ಲಿರುವ ನಕಲಿ ವಿವಿಗಳು ಕೆಳಗಿನಂತಿದೆ:

     

  10. ಗಾಂಧಿ ಹಿಂದಿ ವಿದ್ಯಾಪೀಠ,
    ಪ್ರಯಾಗರಾಜ್.
  11. ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ,
    ಕಾನ್ಪುರ.
  12. ನೇತಾಜಿ ಸುಭಾಷ್ ಚಂದ್ರ ಬೋಸ್ ಯುವಿವರ್ಸಿಟಿ (ಮುಕ್ತ ವಿಶ್ವವಿದ್ಯಾನಿಲಯ),
    ಅಚಲ್ತಾಲ್, ಅಲಿಗಢ.
  13. ಭಾರತೀಯ ಶಿಕ್ಷಾ ಪರಿಷತ್,
    ಭಾರತ್ ಭವನ,
    ಮತೀಯರಿ ಚಿನ್ಹತ್, ಫೈಜಾಬಾದ್ ರಸ್ತೆ,
    ಲಕ್ನೋ.ಪಶ್ಚಿಮ ಬಂಗಾಳದಲ್ಲಿರುವ ನಕಲಿ ಯುನಿವರ್ಸಿಟಿ ಕೆಳಗಿನಂತಿದೆ:

     

  14. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್,
    ಕೋಲ್ಕತ್ತಾ.
  15. ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್,
    ಡೈಮಂಡ್ ಹಾರ್ಬರ್ ರೋಡ್,
    ಬಿಲ್ಟೆಕ್ ಇನ್, ಠಾಕೂರ್‌ಪುರ್ಕುರ್.ಆಂಧ್ರಪ್ರದೇಶದಲ್ಲಿರುವ ನಕಲಿ ಯುನಿವರ್ಸಿಟಿ ಕೆಳಗಿನಂತಿದೆ:

     

  16. ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ,
    #32-32-2003, 7ನೇ ಲೇನ್,
    ಕಾಕುಮಾನುವರಿತೋಟೊ, ಗುಂಟೂರು.ಇದರ ಮತ್ತೊಂದು ವಿಳಾಸ:

    ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ,
    ಫಿಟ್ ನಂ. 301, ಗ್ರೇಸ್ ವಿಲ್ಲಾ ಆಪ್ಟ್ಸ್., 7/5,
    ಶ್ರೀನಗರ, ಗುಂಟೂರು.

  17. ಬೈಬಲ್ ಓಪನ್ ಯುನಿವರ್ಸಿಟಿ ಆಫ್‌ ಇಂಡಿಯಾ,
    H.No. 49-35-26, N.G.O ಕಾಲೋನಿ,
    ವಿಶಾಖಪಟ್ಟಣ.ಯುಜಿಸಿಯಿಂದ ನಕಲಿ ಎಂದು ಪರಿಗಣಿಸಲಾದ ಇತರ ವಿವಿಗಳು ಕೆಳಗಿನಂತಿವೆ:

     

  18. ಕೇರಳ
    ಸೇಂಟ್ ಜಾನ್ಸ್ ಯೂನಿವರ್ಸಿಟಿ,
    ಶಾನಟ್ಟಂ.
     
  19. ಮಹಾರಾಷ್ಟ್ರ
    ರಾಜಾ ಅರೇಬಿಕ್ ಯೂನಿವರ್ಸಿಟಿ,
    ನಾಗ್ಪುರ.
  20. ಪುದುಚೇರಿ
    ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್,
    ವಝುತಾವೂರ್ ರಸ್ತೆ, ತಿಲಾಸ್ಪೇಟ್.

ವಿಡಿಯೊ ನೋಡಿ: SEP TSP : ದಲಿತರಿಗೆ ಮೀಸಲಿಟ್ಟ ಹಣದ ಮೇಲೆ ಗ್ಯಾರಂಟಿ ಕಣ್ಣು! 

Donate Janashakthi Media

Leave a Reply

Your email address will not be published. Required fields are marked *