ವೀಣಾ ಮಜುಂದಾರ ಅವರ ‘ಉರುಳುವ ಕಲ್ಲಿನ ನೆನಪಿನ‌ ಸುರಳಿ’ ಪುಸ್ತಕ ಬಿಡುಗಡೆ

ವರದಕ್ಷಿಣೆ ವಿರುದ್ದ ನಡೆದ ಚಳುವಳಿಗೆ ವೀಣಾ ಮಾರ್ಗದರ್ಶಕರಾಗಿದ್ದು, ಅನೇಕ ಬೀದಿ ನಾಟಕ, ಕಿರುಚಿತ್ರಗಳ ಪ್ರದರ್ಶನಕ್ಕೆ ಸಾಕಷ್ಟು ಶ್ರಮ‌ಹಾಕಿದ್ದರು

ಬೆಂಗಳೂರು: ವೀಣಾ ಮಜುಂದಾರ ಅವರ ”ಉರುಳುವ ಕಲ್ಲಿನ ನೆನಪಿನ‌ ಸುರಳಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಹಾಲ್‌ನಲ್ಲಿ ಸೋಮವಾರ ನಡೆಯಿತು.

ಪುಸ್ತಕದ ಬಗ್ಗೆ ಬೆಂಗಳೂರು ವಿವಿ ಪ್ರಾಧ್ಯಾಪಕರಾದ ಡಾ.ಕೆ.ಎಸ್. ವೈಶಾಲಿ ಮಾತನಾಡಿ, “ಪುಸ್ತಕ ಕನ್ನಡದಲ್ಲಿ ಬಂದಿರುವುದು ಖುಷಿಯ ವಿಚಾರ. ಈ ಪುಸ್ತಕವನ್ನು ಗಾಯತ್ರಿಯವರು ತನ್ಮತೆಯಿಂದ ಅನುವಾದಿಸಿದ್ದಾರೆ. ವೀಣಾ ಮಜುಂದಾರ ಅವರು ಮಹಿಳಾ ಚಳುವಳಿಯ ಜೊತೆ ಒಡನಾಟ ಹೊಂದಿದ್ದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕ್ರಮಗಳಿಗೆ ಅವರು ಭಾಷಣಕಾರರಾಗಿ ಭಾಗವಹಿಸಿದ್ದಾರೆ” ಎಂದರು.

ಇದನ್ನೂ ಓದಿ: ಭದ್ರಕವಚ ಭೇದಿಸುವ ಒಂದು ಸಾಹಿತ್ಯಕ ಪ್ರಯತ್ನ

“ಪುಸ್ತಕದಲ್ಲಿ ಅವರ ಬಾಲ್ಯದ ಬಗ್ಗೆ ಹೇಳುವಾಗಿನ ವಿಚಾರಗಳು ಮೈ ಜುಮ್ ಅನ್ನಿಸುತ್ತವೆ. ಮನೆಯಲ್ಲಿಯೇ ಕ್ರಿಯಾತ್ಮಕ ಅಧ್ಯಯನ ನಡೆಸಿದರು. ಅನೇಕ ಮಹಿಳೆಯರ ಸಂಕಟಗಳನ್ನು ಅಧ್ಯಯನ ನಡೆಸಿದರು. ಮಹಿಳಾ ಚಳುವಳಿಯ ಅಜ್ಜಿ ಎಂದು ಕರೆಯಿಸಿಕೊಳ್ಳುವುದು ಹೆಮ್ಮೆ ಎನಿಸುತ್ತದೆ. ಈ ಪುಸ್ತಕ ಹೊರ ಬರುವಲ್ಲಿ ವೀಣಾ ಅವರ ಕುಟುಂಬದ ಪಾತ್ರ ದೊಡ್ಡದಿದೆ. ಎರಡು ಮಹಾಯುದ್ಧ, ಸ್ವಾತಂತ್ರ್ಯ ಹೋರಾಟವನ್ನು ಕಂಡ ಅವರಿಗೆ ಈ ದೇಶದ ಮೈಲಿಗಲ್ಲು ದಾಖಲಿಸುವ ಹಂಬಲ ಇತ್ತು. ಹಾಗಾಗಿ ಈ ಪುಸ್ತಕ ಬರೆಯಲು ಆರಂಭಿಸಿದರು. ಮಹಿಳಾ ಆಂದೋಲನದ ಎಲ್ಲಾ ಮಜಲುಗಳನ್ನು ಹತ್ತಿರದಿಂದ ನೋಡಿದ್ದ ಇವರಿಗೆ ಕೃತಿ ರಚಿಸಲು ಸಹಾಯವಾಯಿತು” ಎಂದು ವೈಶಾಲಿ ಹೇಳಿದರು.

ಮಹಿಳಾ ಅಭಿವೃದ್ದಿ ಅಧ್ಯಯನ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಅದರ ಸಂಸ್ಥಾಪಕ ನಿರ್ದೇಶಕಿಯೂ ಆಗಿದ್ದರು. ಹಾಗೆಯೇ ದೆಹಲಿಯ ಸೆಂಟರ್ ಫಾರ್ ವಿಮೆನ್ ಡೆವಲೆಪ್ಮೆಂಟ್ ಸ್ಟಡೀಸ್ ನ ನ್ಯಾಷನಲ್ ರಿಸರ್ಚ್ ಪ್ರೊಫೆಸರ್ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಮಹಿಳಾ ಅಧ್ಯಯನದ ಕುರಿತು ಅವರು ಹೊಂದಿದ್ದ ಅಪಾರ ಆಸಕ್ತಿ ಮತ್ತು ಬದ್ಧತೆ ಅವರ ಈ ಎಲ್ಲ ಕೆಲಸಗಳಿಗೆ ಇಂಬು ನೀಡಿತ್ತು. ಅವರ ಈ ಆತ್ಮಕಥೆಯಲ್ಲಿ ಇದನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು. ಬಹುಶಃ ಇದರಲ್ಲಿ ರೋಚಕ ಸಂಗತಿಗಳು ಹೆಚ್ಚು ಸಿಗದಿರಬಹುದು. ಆದರೆ ಚಳವಳಿಯ ಭಾಗವಾಗಿ ಅರ್ಥ ಮಾಡಿಕೊಳ್ಳಬೇಕಾದವರಿಗೆ ಅತ್ಯಂತ ಉಪಯುಕ್ತವಾದ ಮಾಹಿತಿಗಳನ್ನು ಕೊಡುವ ಒಂದು ಕೃತಿ ಇದು. ಮಹಿಳಾ ಅಧ್ಯಯನದ ಆಸಕ್ತಿ ಇರುವವರು ಇದನ್ನು ಓದಲೇಬೇಕು ಎಂದು ಕರೆ ನೀಡಿದರು.

“ವರದಕ್ಷಿಣೆ ವಿರುದ್ದ ನಡೆದ ಚಳುವಳಿಗೆ ವೀಣಾ ಮಾರ್ಗದರ್ಶಕರಾಗಿದ್ದರು. ಅನೇಕ ಬೀದಿ ನಾಟಕ, ಕಿರುಚಿತ್ರಗಳ ಪ್ರದರ್ಶನಕ್ಕೆ ಸಾಕಷ್ಟು ಶ್ರಮ‌ಹಾಕಿದ್ದರು. ಈ ದೇಶದ ಮಹಿಳಾ ಚಳುವಳಿ, ಶ್ರಮಿಕ ಮಹಿಳೆಯರ ಬದಲಾವಣೆಗೆ ಈ ಪುಸ್ತಕ ಕಾರಣವಾಗಲಿದೆ” ಎಂದು ವೈಶಾಲಿ ತಿಳಿಸಿದರು.

ವಿಶ್ವವಿದ್ಯಾಲಯ ಕುಲಸಚಿವ ಮಾತನಾಡಿ, “ಗಂಡು ಹೆಣ್ಣು ಇಬ್ಬರೂ ಸಮಾನರು. ಐಟಿ ಕ್ಷೇತ್ರ ಬೆಂಗಳೂರಿನಲ್ಲಿ ಯಶಸ್ವಿಯಾಗುವುದಕ್ಕೆ‌‌ ಮಹಿಳೆಯರ ಕೊಡುಗೆ ದೊಡ್ಡದಿದೆ. ಎಲ್ಲಾ ವಿಭಾಗದಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಮಹತ್ತರವಾಗಿದೆ. ಎಲ್ಲರೂ ಈ ಪುಸ್ತಕ ಓದುವಂತಾಗಬೇಕು” ಎಂದರು.

ಇದನ್ನೂ ಓದಿ: ಎಲ್ಲೋ ಕುಳಿತ ಕಾಣದ ಕೈ ‘ಎನ್‌ಇಪಿ-2020’ ಎಂಬ ಕೃತ್ಯ ಎಸಗಿದೆ: ಪ್ರೊ.ಜಿ.ಎಸ್. ಸಿದ್ದರಾಮಯ್ಯ

ಮಹತ್ವದ್ದಾಗಿತ್ತು. ನಾನು ಎರಡು ಬಾರಿ ವೀಣಾ ಮಜುಂದಾರ ಜೊತೆ ನೇರವಾಗಿ ಮಾತನಾಡಿದ್ದೆ. ಈ ಪುಸ್ತಕ ಬರೆಯಲು ನನಗೆ ಕ್ರಿಯಾ ಮಾಧ್ಯಮ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಪ್ರಮುಖವಾಗಿ ಕಾರಣ ಆಗಿದೆ. ಅವರಿಬ್ಬರೂ ಸೇರಿ ಕೃತಿ ಬಿಡುಗಡೆ ಮಾಡುತ್ತಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ”

“ಬದುಕಿನ‌ ಜೊತೆ ಮಹಿಳೆ ಎದುರಿಸುವ ವಾಸ್ತವತೆಗಳ ವಿರುದ್ಧ ಹೋರಾಡವುದು, ಪುರುಷ ಪ್ರಧಾನ ಮೌಲ್ಯದ ವಿರುದ್ಧ ಹೋರಾಡುವುದು ಸುಲಭದ ಮಾತಲ್ಲ. ಈ ಪುಸ್ತಕ‌ ಕನ್ನಡಕ್ಕೆ ಬಂದರೆ ಮಹಿಳಾ ಚಳುವಳಿಗೆ, ಮಹಿಳೆಯರಿಗೆ ಮಟರ್ಗದರ್ಶಕವಾಗಿರುತ್ತುದೆ ಎಂದು ಯೋಚಿಸಿ ಅನುವಾದಿಸಿದೆ” ಎಂದು ಗಾಯತ್ರಿ ಹೇಳಿದರು.

ಪುಸ್ತಕದ ಬಗ್ಗೆ ಮಾತನಾಡಿದ ಕ್ರಿಯಾ ಮಾಧ್ಯಮದ ನಿರ್ದೇಶಕಿ ಕೆ.ಎಸ್‌. ವಿಮಲಾ, ವೀಣಾ ಮುಜಂದಾರ ಅವರ ಪುಸ್ತಕ ಕನ್ನಡಕ್ಕೆ ಅಗತ್ಯವಾಗಿ ಬೇಕಿತ್ತು. ಇದನ್ನು ಸರಳವಾಗಿ ಕನ್ನಡಕ್ಕೆ ಎನ್. ಗಾಯತ್ರಿ ನೀಡಿದ್ದಾರೆ. ಬಹಳ ಮಹತ್ವ ಈ ಪುಕಸ್ತವನ್ನು ಎಲ್ಲರೂ ಓದಲೇ ಬೇಕಾಗಿದೆ ಎಂದರು.

ನವದೆಹಲಿಯ ಮಹಿಳಾ ಅಭಿವೃದ್ಧಿ ಅಧ್ಯನದ ಇಂದ್ರಾಣಿ ಮಜುಂದಾರ್ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು. ವೇದಿಕೆಯ ಮೇಲೆ ಪ್ರಾದ್ಯಾಪಕರಾದ ಡಾ. ಸುಧೀಷ್ಣ ಮುಖರ್ಜಿ, ಡಾ.ಎಂ. ಸಿದ್ದಪ್ಪ ಭಾಗವಹಿಸಿದ್ದರು.

ವಿಡಿಯೊ ನೋಡಿ: ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ – ವಿಶ್ಲೇಷಣೆ : ಅರುಣ್ ಜೋಳದ ಕೂಡ್ಲಿಗಿ Janashakthi Media

 

Donate Janashakthi Media

Leave a Reply

Your email address will not be published. Required fields are marked *