ಜಂಗಲ್‌ ಲಾಡ್ಜಸ್‌ : ಹಿರಿಯರ ನಾಗರಿಕರು ವಿದ್ಯಾರ್ಥಿಗಳಿಗೆ ವಿಶೇಷ ಪ್ಯಾಕೇಜ್‌ ನೀಡಲು ನಿರ್ಧಾರ-ಹೆಚ್‌.ಕೆ.ಪಾಟೀಲ್

ಮೈಸೂರು: ‘ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್ಸ್‌ನ (ಜೆಎಲ್‌ಆರ್‌) ಬಳಕೆ ಹೆಚ್ಚಿಸಲು ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಪ್ಯಾಕೇಜ್‌ ನೀಡಲು ನಿರ್ಧರಿಸಲಾಗಿದೆ’ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್ ಅವರು ಸೋಮವಾರ ಹೇಳಿದರು.

ಮೈಸೂರಿನ ಲಲಿತಾ ಮಹಲ್ ಪ್ಯಾಲೇಸ್‌ನಲ್ಲಿ ಜೆಎಲ್‌ಆರ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಎಚ್‌ಕೆ ಪಾಟೀಲ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು. ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ನಿರ್ದೇಶಕ ವಿ ರಾಮ್ ಪ್ರಸಾತ್ ಮನೋಹರ್ ಮತ್ತು ಜೆಎಲ್‌ಆರ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಆರ್ಥಿಕ ಪ್ಯಾಕೇಜ್‌ ಘೋಷಿಸುವಂತೆ ಸಿಎಂಗೆ 20 ಅಂಶದ ಪತ್ರ ಬರೆದ ಸಿದ್ದರಾಮಯ್ಯ

ಸಭೆ ವೇಳೆ ರಾಜ್ಯಾದ್ಯಂತ 25 ರೆಸಾರ್ಟ್‌ಗಳು ಮತ್ತು ಆರು ಜಂಗಲ್ ಕ್ಯಾಂಪ್‌ಗಳನ್ನು ನಿರ್ವಹಿಸುತ್ತಿರುವ ಜೆಎಲ್‌ಆರ್‌ನ ಕಾರ್ಯಕ್ಷಮತೆಯ ಕುರಿತು ಸಚಿವರಿಗೆ ಅಧಿಕಾರಿಗಳು ವಿವರಿಸಿದರು. ಕೋವಿಡ್ ಸಾಂಕ್ರಾಮಿಕ ರೋಗ ಸಮಯದಲ್ಲಿ, ಆಕ್ಯುಪೆನ್ಸಿ ದರವು ಶೇಕಡಾ ಶೇ.47 ರಷ್ಟಿತ್ತು. 2020-21 ರಲ್ಲಿ ಜೆಎಲ್‌ಆರ್‌’ನ ಆದಾಯವು ಕೇವಲ 61 ಕೋಟಿ ರೂ ಇತ್ತು ಎಂದು ಹೇಳಿದರು. ಈ ವೇಳೆ ಸಚಿವರು ಆಕ್ಯುಪೆನ್ಸಿ ಮತ್ತು ಆದಾಯವನ್ನು ಸುಧಾರಿಸಲು ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಪ್ಯಾಕೇಜ್‌ಗಳನ್ನು ನೀಡುವಂತೆ ಸೂಚಿಸಿದರು.

ಅರಣ್ಯಗಳು ನಮ್ಮ ರಾಷ್ಟ್ರೀಯ ಸಂಪತ್ತು. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಆದರೆ ಹೆಚ್ಚಿನ ಬೆಲೆಯಿಂದಾಗಿ ಜನರು ಜೆಎಲ್‌ಆರ್ ಕೊಠಡಿಗಳನ್ನು ಬುಕ್ ಮಾಡುತ್ತಿಲ್ಲ. ಹಾಗಾಗಿ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ವಿಶೇಷ ಪ್ಯಾಕೇಜ್ ಗಳನ್ನು ನೀಡಬೇಕು. ಇದು ಪ್ರಕೃತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನರಿಗೆ ಅವಕಾಶ ನೀಡುತ್ತದೆ. 2023-24ರಲ್ಲಿ ಶೇ.75 ರಷ್ಟು ಆಕ್ಯುಪೆನ್ಸಿ ಗುರಿಯನ್ನು ಮತ್ತು 111 ಕೋಟಿ ರೂ.ಗಳ ಆದಾಯದ ಗುರಿಯನ್ನು ನೀಡಿದ್ದೇನೆ. ಜೆಎಲ್ ಆರ್ ಸೌಲಭ್ಯಗಳು ಎಲ್ಲಾ ಜನರಿಗೆ ತಲುಪಬೇಕು ಎಂದು ಸೂಚನೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *