RBI ಮುದ್ರಿಸಿದ್ದ 8,810.65 ಮಿಲಿಯನ್ 500 ರೂ. ಹೊಸ ನೋಟುಗಳು ನಾಪತ್ತೆ..!

ನವದೆಹಲಿ: ದೇಶಾದ್ಯಂತ 2000 ರೂ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಮಾನ್ಯ ಮಾಡಿ ಹಿಂದಕ್ಕೆ ಪಡೆಯುವ ಆದೇಶ ಮಾಡಿದ ಬೆನ್ನಲ್ಲೇ ದೇಶದಲ್ಲಿ ಗರಿಷ್ಠ ಮೌಲ್ಯದ ನೋಟಾಗಿ ಉಳಿದಿರುವ 500 ಮುಖಬೆಲೆಯ ಸುಮಾರು 8,810.65 ಮಿಲಿಯನ್ ನೋಟುಗಳೇ ನಾಪತ್ತೆಯಾಗಿವೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.

ಈ ಬಗ್ಗೆ ಪಲಕ್ ಶಾ ಎಂಬ ಆರ್‌ಟಿಐ ಕಾರ್ಯಕರ್ತ, ತನ್ನ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ದೇಶದ ಮೂರು ವಿವಿಧ ನೋಟು ಮುದ್ರಣಾಲಯದಲ್ಲಿ ಮುದ್ರಿಸಲಾದ 500 ರೂ ನೋಟುಗಳ ಸಂಖ್ಯೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸ್ವೀಕರಿಸಿದ ಸಂಖ್ಯೆಗಳ ನಡುವೆ ಭಾರಿ ವ್ಯತ್ಯಾಸ ಕಂಡು ಬಂದಿದೆ. ಲೆಕ್ಕಕ್ಕೆ ಸಿಗದ ನೋಟುಗಳ ಮೌಲ್ಯ ಸುಮಾರು 88 ಸಾವಿರ ಕೋಟಿ ರೂ. ನಷ್ಟಿದೆ ಎಂದು ಫ್ರೀ ಪ್ರೆಸ್ ಜರ್ನಲ್ (free press journal) ವರದಿ ಮಾಡಿದೆ ಎಂದು ಸುದ್ದಿಯ ಲಿಂಕ್‌ನ್ನು ಜೂನ್‌ 17 ರಂದು ಹಂಚಿಕೊಂಡಿದ್ದಾರೆ.

ಇದು ನಿಜವೇ ಅಗಿದ್ದರೆ ದೇಶದ ಅತೀ ದೊಡ್ಡ ಪ್ರಮಾಣದ ರಾಬರಿ ಇದು…? ಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸಿದ ಸುಮಾರು 8,810.65 ನೋಟುಗಳ ಪೈಕಿ 7260 ಮಿಲಿಯನ್ ನೋಟುಗಳು ಮಾತ್ರ ಆರ್ ಬಿಐ ಸ್ವೀಕರಿಸಿರುವುದಾಗಿ ತಿಳಿಸಿದೆ. ಹಾಗಾದರೇ ಬಾಕಿ 1550 ಮಿಲಿಯನ್ 500 ಮುಖಬೆಲೆಯ ನೋಟುಗಳು ಏನಾದವು ಎಂದು ಪ್ರಶ್ನೆ ಮಾಡಿದ್ದಾರೆ.

ವರದಿಯಲ್ಲಿ ಏನಿದೆ?  ವರದಿಯಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ, ದೇಶದ ವಿವಿಧ ಮೂರು ಭಾರತೀಯ ಟಂಕಸಾಲೆಗಳು (ನೋಟು ಮುದ್ರಣಾಲಯಗಳು) ಹೊಸದಾಗಿ 8,810.65 ಮಿಲಿಯನ್ 500 ರೂ. ನೋಟುಗಳನ್ನು ಮುದ್ರಿಸಿಸಿ ಆರ್ಬಿಐಗೆ ನೀಡಿತ್ತಂತೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ 7260 ಮಿಲಿಯನ್ ನೋಟುಗಳನ್ನು ಮಾತ್ರ ಸ್ವೀಕರಿಸಿದೆ ಎಂದು ವರದಿ ಹೇಳಿದೆ. ಇದರಿಂದಾಗಿ ಉಳಿದ ನೋಟುಗಳು ಎಲ್ಲಿಗೆ ಹೋದವು ಎಂಬ ಪ್ರಶ್ನೆ ಮೂಡಿದೆ

ಇನ್ನು ಭಾರತೀಯ ನೋಟುಗಳನ್ನು ಮೂರು ಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ (ಪಿ) ಲಿಮಿಟೆಡ್, ಬೆಂಗಳೂರು, ಕರೆನ್ಸಿ ನೋಟ್ ಪ್ರೆಸ್, ನಾಸಿಕ್ ಮತ್ತು ದೇವಾಸ್ನಲ್ಲಿರುವ ಬ್ಯಾಂಕ್ ನೋಟ್ ಪ್ರೆಸ್. ಈ ಮೂರು ಟಂಕಸಾಲೆಗಳು ಭಾರತೀಯ ರಿಸರ್ವ್ ಬ್ಯಾಂಕ್ಗೆ ಮುದ್ರಿತ ನೋಟುಗಳನ್ನು ಕಳುಹಿಸುತ್ತವೆ. ದೇಶದಲ್ಲಿ ನಗದು ಹರಿವನ್ನು ನಿರ್ವಹಿಸುವುದು ಮತ್ತು ನಿರ್ವಹಣೆ ಮಾಡುವುದು ಆರ್ಬಿಐ. ಆರ್ಟಿಐ ಕಾರ್ಯಕರ್ತ ಮನೋರಂಜನ್ ರಾಯ್ 500 ರೂ. ನೋಟುಗಳ ಸ್ಥಿತಿಯ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ಗೆ RTI ಅರ್ಜಿಯನ್ನು ಸಲ್ಲಿಸಿದ್ದರು ಎಂದು ಎಫ್ಪಿಜೆ (FPJ) ತಿಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿ ಪ್ರಕಾರ, ನಾಸಿಕ್ ಟಂಕಸಾಲೆ ಒಟ್ಟು 375.450 ಮಿಲಿಯನ್ 500 ರೂ. ನೋಟನ್ನು ಮುದ್ರಿಸಿದೆ ಎಂದು ವರದಿಯಾಗಿದೆ. ಆದರೆ ಆರ್ಬಿಐ ದಾಖಲೆಗಳಲ್ಲಿ, ಏಪ್ರಿಲ್ 2015 ಮತ್ತು ಡಿಸೆಂಬರ್ 2016ರ ನಡುವೆ 345 ಮಿಲಿಯನ್ ನೋಟುಗಳನ್ನು ಮಾತ್ರ ಸ್ವೀಕರಿಸಲಾಗಿದೆ ಎಂದು ಮತ್ತೊಂದು ಆರ್ಟಿಐ ಪ್ರಶ್ನೆಗೆ ನಾಸಿಕ್ ಕರೆನ್ಸಿ ನೋಟ್ ಮುದ್ರಣಾಲಯ ಉತ್ತರ ನೀಡಿದೆ. ಆದರೆ ವಿತ್ತೀಯ ವರ್ಷ 2015-2016 (ಏಪ್ರಿಲ್ 2015-ಮಾರ್ಚ್ 2016,) ರಘುರಾಮ್ ರಾಜನ್ RBI ಗವರ್ನರ್ ಆಗಿದ್ದಾಗ RBI ಗೆ 500 ರೂಪಾಯಿಗಳ 210.000 ಮಿಲಿಯನ್ ನೋಟುಗಳನ್ನು ಸರಬರಾಜು ಮಾಡಲಾಗಿದೆ ಎಂದು FPJ ವರದಿ ಮಾಡಿದೆ ಎಂದು ವರದಿ ಹೇಳಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣಾಲಯ (ಪಿ) ಲಿಮಿಟೆಡ್, ಬೆಂಗಳೂರು, ಆರ್ಬಿಐಗೆ 5,195.65 ಮಿಲಿಯನ್ ನೋಟುಗಳನ್ನು ನೀಡಿದೆ. ಅಲ್ಲದೆ, ದೇವಾಸ್ ಬ್ಯಾಂಕ್ ನೋಟ್ ಪ್ರೆಸ್ 2016-2017 ರಲ್ಲಿ ಆರ್ಬಿಐಗೆ 1,953.000 ಮಿಲಿಯನ್ ನೋಟುಗಳನ್ನು ಪೂರೈಸಿದೆ, ಆದರೆ ಆರ್ಬಿಐ ಈ ಮೂರು ಪ್ರಿಂಟಿಂಗ್ ಪ್ರೆಸ್ಗಳಿಂದ 7,260 ಮಿಲಿಯನ್ ನೋಟುಗಳನ್ನು ಮಾತ್ರ ಸ್ವೀಕರಿಸಿದೆ ಎಂದು FPJ ವರದಿ ಮಾಡಿದೆ ಎನ್ನಲಾಗಿದೆ.

ಇದರಿಂದ ಮೂರು ನೋಟು ಮುದ್ರಣಾಲಯಗಳಿಂದ ಮುದ್ರಿಸಿದ ಒಟ್ಟು 8810.65 ಮಿಲಿಯನ್ ನೋಟುಗಳಲ್ಲಿ RBI ಕೇವಲ 7260 ಮಿಲಿಯನ್ ನೋಟುಗಳನ್ನು ಸ್ವೀಕರಿಸಿದೆ ಎಂದು ತಿಳಿದು ಬಂದಿದೆ. ಇಷ್ಟು ದೊಡ್ಡ ಪ್ರಮಾಣದ ನೋಟುಗಳು ಕಾಣೆಯಾಗಿರುವುದು ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಆರ್ಟಿಐ ಕಾರ್ಯಕರ್ತ ರಾಯ್ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಆರ್ಥಿಕ ಗುಪ್ತಚರ ಸಂಸ್ಥೆ ಮತ್ತು ಇಡಿಗೆ ಪತ್ರ ಕೂಡ ಬರೆದಿದ್ದಾರೆ.

RBI ಪ್ರತಿಕ್ರಿಯೆ : 500 ರೂ ಮುಖಬೆಲೆಯ ನೋಟು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು, ಮಾಧ್ಯಮಗಳ ವರದಿಯನ್ನು ‘ತಪ್ಪಾದ ವ್ಯಾಖ್ಯಾನ’ ಎಂದು ಹೇಳಿದೆ.

ಈ ವರದಿ ವೈರಲ್ ಆಗುತ್ತಲೇ ಎಚ್ಚೆತ್ತಿರುವ ಆರ್ ಬಿಐ ಈ ಕುರಿತು ಸ್ಪಷ್ಟನೆ ನೀಡಿದೆ. ನೋಟುಗಳು ನಾಪತ್ತೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಸರಿಯಲ್ಲ. ಮುದ್ರಣಾಲಯಗಳಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಸಂಗ್ರಹಿಸಿದ ಮಾಹಿತಿಯ ತಪ್ಪಾದ ವ್ಯಾಖ್ಯಾನವನ್ನು ಆಧರಿಸಿ ವರದಿಗಳು ಬಂದಿವೆ ಎಂದು ಆರ್ ಬಿಐ ಹೇಳಿದೆ. ಅಲ್ಲದೆ “ಈ ವರದಿಗಳು ಪ್ರಿಂಟಿಂಗ್ ಪ್ರೆಸ್ಗಳಿಂದ ಮಾಹಿತಿ ಹಕ್ಕು ಕಾಯಿದೆ, 2005 ರ ಅಡಿಯಲ್ಲಿ ಸಂಗ್ರಹಿಸಿದ ಮಾಹಿತಿಯ ತಪ್ಪಾದ ವ್ಯಾಖ್ಯಾನವನ್ನು ಆಧರಿಸಿವೆ. ಅಲ್ಲದೆ ಪ್ರಿಂಟಿಂಗ್ ಪ್ರೆಸ್ಗಳಿಂದ ಆರ್ಬಿಐಗೆ ಸರಬರಾಜು ಮಾಡಲಾದ ಎಲ್ಲಾ ನೋಟುಗಳನ್ನು ಸರಿಯಾಗಿ ಲೆಕ್ಕ ಹಾಕಲಾಗಿದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.

ನೋಟುಮುದ್ರಣಕ್ಕೆಇರುವನಿಯಮಗಳೇನು? ಒಂದುದೇಶಎಷ್ಟುನೋಟುಗಳನ್ನುಮುದ್ರಿಸಬೇಕುಎನ್ನುವುದನ್ನುನಿರ್ಧರಿಸುವುದುಯಾರು?  ಎಂಬ ಪ್ರಶ್ನೆ ಈಗ ಎದ್ದಿದೆ.  ಮುದ್ರಿಸಿದ ಹಣಕ್ಕೆ ಈ ರೀತಿ ಲೆಕ್ಕ ಇಡದೆ ಹೋದರೆ ಅದಕ್ಕೆ ಸರ್ಕಾರವೆ ಹೊಣೆಯಾಗುತ್ತದೆ.  ಅದು ಆರ್ಥಿಕತೆಯನ್ನು ನಿರ್ವಹಿಸುವ ಸರ್ಕಾರದ ಸಾಮರ್ಥ್ಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಹುದು. ಈ ನಂಬಿಕೆಯ ನಷ್ಟವು ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಹಾನಿಯಾಗಬಹುದು ಎಂದು ಆರ್ಥಿಕ ತಜ್ಷರು ವಿಶ್ಲೆಷಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *