ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಂಗಳವಾರ (ಜೂನ್13) ರಂದು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹಾಗೂ ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಬೆಂಗಳೂರು ನಗರದ ರಸ್ತೆ ಬದಿ ಹಾಗೂ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ಕೊಟ್ಟಿದ್ದೇವೆ. ಇಂತಹ ಪ್ರಸಂಗ ವರದಿಯಾದರೆ ಪ್ರಕರಣ ದಾಖಲು ಮಾಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು. ಲಾರಿಗಳು, ಟ್ರಾಕ್ಟರ್ ನೋಂದಣಿ ಮಾಡಬೇಕು. ತ್ಯಾಜ್ಯ ತುಂಬುವುದು, ಹಾಕುವುದರ ಬಗ್ಗೆ ಲೆಕ್ಕಾಚಾರ ಇಡಬೇಕು. ಬೆಂಗಳೂರಿನ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು. ನಮ್ಮ ಸರ್ಕಾರದಲ್ಲಿ ಟ್ರಾಫಿಕ್ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದರು.
ಇದನ್ನೂ ಓದಿ:ಬೆಂಗಳೂರು ರಸ್ತೆಗುಂಡಿ ಮುಕ್ತವಾಗದಿದ್ದರೆ ಕಠಿಣ ಕ್ರಮ: ಬಿಬಿಎಂಪಿ ಆಯುಕ್ತ
ಅವರು ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗಿನ ಸಭೆಯ ಕುರಿತಾಗಿ ಮಾತನಾಡಿ, ಬಿಬಿಎಂಪಿ ಚುನಾವಣೆ ಕುರಿತು ಕಾನೂನು ವಿಚಾರಗಳಿವೆ. ಮುಂದೆ ಅದರ ಬಗ್ಗೆ ಮಾತಾನಾಡುತ್ತೇನೆ ಎಂದರು. ಟಿಪ್ಪರ್ ಹಾಗೂ ಲಾರಿಗಳಲ್ಲಿ ತುಂಬಿ ಸಾಗಿಸುವ ತ್ಯಾಜ್ಯವನ್ನು ನಗರದ ರಸ್ತೆ ಪಕ್ಕ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಸೆಯುತ್ತಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಲಾರಿ, ಟ್ರಾಕ್ಟರ್ಗಳ ನೋಂದಣಿ ಮಾಡಬೇಕು. ತ್ಯಾಜ್ಯ ತುಂಬುವುದು, ಹಾಕುವುದರ ಬಗ್ಗೆ ಲೆಕ್ಕಾಚಾರ ಇಡಬೇಕು. ಬೆಂಗಳೂರಿನ ಸ್ವಚ್ಛತೆ ಕಾಪಾಡಬೇಕು ಎಂದಿದ್ದಾರೆ.