ವಸತಿ ಶಾಲೆಗಳ ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ -ಸಚಿವ ಹೆಚ್.ಸಿ ಮಹದೇವಪ್ಪ

ದೇವನಹಳ್ಳಿ: ರಾಜ್ಯದ ಎಲ್ಲಾ ವಸತಿ ನಿಲಯಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯ ಮತ್ತು ವಸತಿ ನಿಲಯದ ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ತಾಲೂಕು ಛಲವಾದಿ ಮಹಸಭಾ ವತಿಯಿಂದ ಅಭಿನಂದನೆ ಸ್ವೀಕರಿಸಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು,  ಖಾಸಗಿ ಶಾಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ವಸತಿ ಶಾಲೆಗಳ ಮಕ್ಕಳು ಎಸ್.ಎಸ್.ಎಲ್‌.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ 100 ಕ್ಕೆ 100 ರಷ್ಟು ಫಲಿತಾಂಶ ಪಡೆದುಕೊಂಡಿರುವುದು ಕಂಡು ಬರುತ್ತಿದೆ. ಆದರಿಂದ ಭೋದಕರಿಗೆ ಮತ್ತಷ್ಟು ಉತ್ತೇಜನ ಮತ್ತು ತರಬೇತಿ ನೀಡಲಾಗುವುದು.  ಎಸ್‌.ಸಿ ಮತ್ತು ಎಸ್‌.ಟಿ. ಹಿಂದುಳಿದ ವರ್ಗ ,ಅಲ್ಪಾಸಂಖ್ಯಾತ ಪೋಷಕರು ತಮ್ಮ ಮಕ್ಕಳನ್ನು ವಸತಿ ನಿಲಯ ಮತ್ತು ವಸತಿ ಶಾಲೆಗಳಿಗೆ ಹೆಚ್ಚು ಸೇರಿಸಬೇಕು. ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿ,, ಅವರ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಶಾಲೆಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆ ಓದುವುದು ಕಡ್ಡಾಯ; ಸಚಿವ ಹೆಚ್ ಸಿ ಮಹದೇವಪ್ಪ

ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಬೇಕಾದ ಪೌಷ್ಠಿಕ ಆಹಾರ ಮತ್ತು ಕಲಿಕಾ ಪರಿಕರಗಳನ್ನು ನೀಡಲಾಗುತ್ತಿದೆ. ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯುವಂತೆ ಆಗಬೇಕು. ರಾಜ್ಯದ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಅಂಬೇಡ್ಕರ್‌ ಭವನ,ಬಾಬು ಜಗಜೀವನ್‌ ರಾಂ ಭವನ,ಇತರೆ ಸಮುದಾಯ ಭವನಗಳ ಕಾರ್ಯನಿರ್ವಹಣೆ ಮತ್ತು ಕಟ್ಟಡ ಪೂರ್ಣತೆ ಸೇರಿದಂತೆ ಯಾವ ರೀತಿ ಕಟ್ಟಡಗಳು ಇವೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಅಧಿಕಾರಿಗಳಿಂದ ಸಭೆ ಕರೆದು ಮಾಹಿತಿ ಪಡೆದಿದ್ದೇನೆ. ಯಾವುದೇ ಭವನವಿರಲಿ ದಲಿತ ಸಮುದಾಯಗಳಿಗೆ ಅನುಕೂಲವಾಗಬೇಕು. ಬಡವರ ಮದುವೆ ಮತ್ತು ಇತರೆ ಶುಭಕಾರ್ಯಗಳಿಗೆ, ಸಭೆ ಸಮಾರಂಭಗಳಿಗೆ ಈ ಭವನಗಳು ಅನುಕೂಲವಾಗಬೇಕು. ನಮ್ಮ ಎಸ್.ಸಿ ಮತ್ತು ಎಸ್.ಟಿ ,ಯುವಕರು ಇಂತಹ ಭವನಗಳ ಪ್ರಯೋಜನೆಯನ್ನು ಹೆಚ್ಚಾಗಿ ಪಡೆದುಕೊಳ್ಳಬೇಕು. ಯುವಕರು ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯುವಕರು ಎಲ್ಲಾರು ಸ್ವಾವಲಂಬಿ ಜೀವನಕ್ಕೆ ಮಹತ್ವ ನೀಡಬೇಕು ಎಂದು ಹೇಳಿದರು.

ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿನ ಮಕ್ಕಳ ಕಲಿಕೆ ಮತ್ತು ಮೂಲಭೂತ ಸೌಕರ್ಯ, ಸುಸಜ್ಜಿತ ಕಟ್ಟಡ ಹಾಗೂ ಕಟ್ಟಡದ ವಿನ್ಯಾಸ ನೋಡಿದಾಗ ಯಾವುದೇ ಖಾಸಗಿ ವಸತಿ ಶಾಲೆಗಳಿಗಿಂತಲೂ ಕಡಿಮೆಯಿಲ್ಲದ ರೀತಿ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಇನ್ನು ಮುಂದೆ ರಾಜ್ಯದ ಎಲ್ಲಾ ವಸತಿ ಶಾಲೆಗಳಿಗೆ ಮತ್ತು ವಿದ್ಯಾರ್ಥಿ ವಸತಿ ನಿಲಯಗಳಿಗೆ ಭೇಟಿ ನೀಡಿ ಅವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ತಕ್ಷಣವೇ ನಾನು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಇದರ ಬಗ್ಗೆ ಕೊಡಲೇ ಚರ್ಚಿಸಿ ಮತ್ತಷ್ಟು ಹೆಚ್ಚಿನ ಅನುದಾನವನ್ನು ವಸತಿ ನಿಲಯಗಳ ಅಭಿವೃದ್ದಿಗೆ ಮೀಸಲಿಡಲು ಮನವಿ ಮಾಡುತ್ತೇನೆ ಎಂದು ಹೇಳಿದರು. ಮಾನ್ಯ ಮುಖ್ಯಮಂತ್ರಿಗಳು ನನಗೆ ಸಮಾಜ ಕಲ್ಯಾಣ ಇಲಾಖೆಯ ಜವಬ್ದಾರಿಯನ್ನು ವಹಿಸಿದ್ದು ಇಲಾಖೆಯ ವತಿಯಿಂದ ಯಾವ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಮತ್ತು ಜನರ ಅಭವೃದ್ಧಿ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ ಎಂದರು. ಇಡೀ ರಾಜ್ಯದಲ್ಲಿರುವ ಎಲ್ಲಾ ಸಮಾಜ ಕಲ್ಯಾಣ ಇಲಾಖೆಯ ಭವನಗಳನ್ನು ಹಾಗೂ ವಿದ್ಯಾರ್ಥಿ ಗಳ ವಸತಿ ನಿಲಯಗಳನ್ನು ಹಾಗೂ ವಸತಿ ಶಾಲೆಗಳ ಮಾಹಿತಿ ಪಡೆದುಕೊಂಡು ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌,ಆಯುಕ್ತ ರಾಕೇಶ್‌ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಪ್ರೇಮ,ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಳಿನಾಕ್ಷಿ,ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಕೆ.ವಿ.ಸ್ವಾಮಿ, ಪುರಸಭಾ ಸದಸ್ಯ ಜಿ.ಸುರೇಶ್‌,ಸಮಾಜ ಸೇವಕ ಶೆಟ್ಟಿ ಗೆರೆ ರಾಜಣ್ಣ,ಗ್ರಾಮ ಪಂಚಾಯತ್‌ ಸದಸ್ಯರಾದ ಅತ್ತಿಬೆಲೆ ನರಸಪ್ಪ,ಶ್ರೀನಿವಾಸ್‌ ಗಾಂಧಿ,ರಾಮಲಕ್ಷ್ಮಣ,ಶ್ರೀನಿವಾಸ್‌ ಕಾರಹಳ್ಳಿ, ಕೆಂಪಣ್ಣ, ಮ್ಯಾಥ್ಯೂ ಮುನಿಯಪ್ಪ, ಮುಖಂಡರಾದ ಡೇವಿಡ್‌ ನಾರಾಯಣಪ್ಪಸ್ವಾಮಿ, ಜಿ.ರಮೇಶ್, ಮಂಜುನಾಥ್‌, ಕಾರಹಳ್ಳಿ ಕೇಶವ,ತ್ರಿ ಮೂರ್ತಿ, ತರಕಾರಿ ನಾಗರಾಜ್‌, ,ಕೆ.ವೆಂಕಟೇಶಪ್ಪ, ಇನ್ನಿತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *