ಬೆಂಗಳೂರು: ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ರಾಜ್ಯದ ಎಲ್ಲ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಣವನ್ನು ಘೋಷಣೆಮಾಡಿದೆ. ಶಕ್ತಿ ಯೋಜನೆಯಲ್ಲಿ ಯಾವುದೇ ನಿರ್ಬಂಧನೆಗಳಿಲ್ಲದಿರುವುದು ವಿಶೇಷವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕರ್ನಾಟಕದ 4 ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಮಹಿಳೆಯರ ಜೊತೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಅವಕಾಶ ನೀಡಲಾಗಿದ್ದು, ಬಿಎಂಟಿಸಿ, ಕೆಎಸ್ಆರ್ಟಿಸಿ,ಎನ್ಡಬ್ಲೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಎಸಿ, ಐಷಾರಾಮಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಪ್ರಯಾಣ ಮಾಡಲು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಬೇರೆ ರಾಜ್ಯಗಳಿಗೆ ತೆರಳುವ ಸರಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವಿಲ್ಲ.
ಉಚಿತ ಪ್ರಯಾಣಕ್ಕೆ ಮಿತಿ ಇದೆಯಾ?
ಜೂನ್ 11 ರಂದು ಉಚಿತ ಪ್ರಯಣ ಘೋಷಿಸಲಾಗಿದ್ದು,ಕರ್ನಾಟಕದ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯಾವುದೇ ನಿಗದಿತ ಕಿಲೋಮೀಟರ್ ಮಿತಿ ಹೊಂದಿಲ್ಲ.ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗಾದರೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಆದರೆ ಇದು ಸಮರ್ಪಕವಾಗಿ ಬಳಕೆಯಾಗುತ್ತದಾ? ಈ ಸೌಲಭ್ಯದ ಹೆಸರಿನಲ್ಲಿ ಅನಗತ್ಯ ಓಡಾಟ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ : ಮುಂದಿನ ಮೂರು ತಿಂಗಳೊಳಗೆ ಉಚಿತ ಸೌಲಭ್ಯ ಪಡೆಯುವ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಅಲ್ಲಿಯವರೆಗೂ ಕೇಂದ್ರ-ರಾಜ್ಯ ಸರ್ಕಾರ ನೀಡಿದ ಯಾವುದಾದರೂ ಗುರುತಿನ ಚೀಟಿ ಬಳಸಬಹುದು. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು ಶಕ್ತಿ ಸ್ಮಾರ್ಟ್ಕಾರ್ಡ್ ವಿತರಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.
ಉಚಿತ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು ಸಾರ್ವಜನಿಕರು ಸಂಬಧಪಟ್ಟ ಸಾರಿಗೆ ಇಲಾಖೆಗೆ ಸಲ್ಲಿಸಬೇಕು.ಅಂತೆಯೇ ಮುಂದಿನ ಮೂರು ತಿಂಗಳೊಳಗಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ಗಳ ವಿತರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸರ್ಕಾರವು ಆದೇಶದಲ್ಲಿ ಸಾರಿಗೆ ನಿಗಮಗಳಿಗೆ ಸೂಚಿಸಿದೆ. ಉಚಿತ ಬಸ್ ಪ್ರಯಣದ ಟಿಕೆಟ್ ನೀಡುವುದರ ಬಗ್ಗೆ ಮಹಿಳೆಯರಲ್ಲಿ ಬಾರಿ ಗೊಂದಲವನ್ನ ಸೃಷ್ಟಿಯಾಗಿದ್ದು. ಈಗ ಸರಕಾರ ಸ್ಮಾರ್ಟ್ ಕಾರ್ಡ್ಗಳನ್ನ ನೀಡಲು ನಿರ್ಧರಿಸಿದೆ.
ಈ ಸ್ಮಾರ್ಟ್ ಕಾರ್ಡ್ಗಳನ್ನ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು ಶಕ್ತಿ ಸ್ಮಾರ್ಟ್ಕಾರ್ಡ್ ವಿತರಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ. ಒಂದು ವೇಳೆ ಅರ್ಜಿಸಲ್ಲಿದೆ ಇದ್ದರೆ ಮೂರು ತಿಂಗಳ ನಂತರ ಉಚಿತ ಪ್ರಯಣಕ್ಕೆ ಅವಕಾಶವಿದೆಯಾ? ಸೇವಾ ಸಿಂಧು ಮೂಲಕ ಅರ್ಜಿಗಳನ್ನುಸಲ್ಲಿಸುವಾಗ ಮೌಲ್ಯವನ್ನ ಭರಿಸಬೇಕೆ? ಎಂಬ ಕಳವಳ ಮಹಿಳೆಯರಲಿ ಸೃಷ್ಟಿಯಾಗಿದೆ.
ಮಹಿಳೆಯರಿಗೆ ಶಕ್ತಿ : ಈ ಯೋಜನೆ ಉದ್ಯೋಗಸ್ಥ ಮಹಿಳೆಯರಿಗೆ ಶಕ್ತಿ ತುಂಬಲಿದೆ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ದಿನಗೂಲಿ, ಮನೆ ಕೆಲಸಗಾರರು, ಸೆಕ್ಯೂರಿಟಿಗಾರ್ಡ್, ಸಣ್ಣ ಪುಟ್ಟ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಮಹಿಳೆಯಿಗೆ ಈ ಯೋಜನೆ ಲಾಭವಾಗಲಿದೆ. ಯಾರೋ ಒಂದಿಬ್ಬರು, ಈ ಯೋಜನೆಯನ್ನು ಯಾರೋ ಒಂದಿಬ್ಬರು ಸರಿಯಾಗಿ ಬಳಕೆ ಮಾಡದೆಯೂ ಇರಬಹುದು, ಆಗ ದುರುಪಯೋಗ ಎಂದು ಯೋಜನೆ ನಿಲ್ಲಿಸುವಂತಗಾಬಾರದು. ಹಾಗೂ ಈ ಯೋಜನೆಯ ಮೂಲಕ ಮಹಿಳೆಯರು ಉದ್ಯೋಗಿಗಳಾಗಿ ಬದಲಾಗಲು ಸಾಧ್ಯವಿದೆ ಎಂದು ಮನೆಕೆಲಸಗಾರರಾದ ಉಮಾ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ :
ಸೈಬರ್ಗೆ ಲಾಭ : ಈ ಸ್ಮಾರ್ಟ್ ಕಾರ್ಡ್ಗಳನ್ನ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು ಶಕ್ತಿ ಸ್ಮಾರ್ಟ್ಕಾರ್ಡ್ ವಿತರಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಸ್ಮಾರ್ಟ್ಕಾರ್ಡ್ ಪಡೆಯಲು ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಾಗ ಸರಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಸೈಬರ್ ಸೆಂಟರ್ಗಳು ದುಪ್ಪಟ್ಟು ಹಣ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ಅನೇಕ ಯೋಜನೆಗಳ ಸಂದರ್ಭದಲ್ಲಿ ಈ ರೀತಿ ಹಣ ಪಡೆದ ಉದಾಹರಣೆಗಳು ಇವೆ. ಮಹಿಳೆಯರು ಉಚಿತ ಬಸ್ ಪ್ರಯಣದ ಸೌಲಭ್ಯ ಪಡೆಯಲು ಅವರು ಹೇಳಿದ ಮೊತ್ತಕ್ಕೆ ಮಾರುಹೊಗುವ ಸಾಧ್ಯತೆ ಇದೆ. ಇದರಿಂದ ಸೈಬರ್ಗಳು ಈ ಸಮಯವನ್ನ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಮಹಿಳೆಯರು ಸೈಬರ್ ಗಳ ಮೊಸಕ್ಕೆ ಮಾರುಹೊಗದಂತೆ ಸರಕಾರ ಎಚ್ಚರ ವಹಿಸಬೇಕು. ಜೊತೆಗೆ ಸ್ಮಾರ್ಟ್ಕಾರ್ಡ್ ವಿತರಿಸುವ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದು, ಆದರೆ ಅರ್ಜಿಸಲ್ಲಿಸುವಾಗ ಸರ್ವರ್ ಸಮಸ್ಯೆಗಳು ಎದುರಾಗುವ ಸಂಭವಿರುತ್ತದೆ. ಇದರಿಂದ ಮೂರು ತಿಂಗಳೊಳಗೆ ಎಲ್ಲಾ ಮಹಿಳೆಯರು ಸ್ಮಾರ್ಟ್ಕಾರ್ಡ್ನ್ನು ಪಡೆದುಕೊಳ್ಳಲು ಆಗುತ್ತಾ? ಹಾಗಾಗಿ ಈ ಎಲ್ಲಾ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಸರಕಾರ ಕ್ರಮವನ್ನು ತೆಗೆದುಕೊಳ್ಳ ಬೇಕು ಎಂದು ಹೊಸಪೇಟೆ ನಗರದ ಸಾವಿತ್ರಿ ಯವರು ತಮ್ಮ ಕಳವಳವನ್ನ ವ್ಯಕ್ತಪಡಿಸಿದ್ದಾರೆ.
ಗಲಾಟೆಗಳಾಗದಂತೆ ಎಚ್ಚರಿಕೆ ವಹಿಸಬೇಕು : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಬಹುಶಃ ಆರಕ್ಷಕರ ಸಹಾಯವೂ ಬೇಕಾಗಬಹುದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ, ಯಮುನಾ ಗಾಂವ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಪೆಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಅವರು, ಕಳೆದ ಎರಡು ವಾರದಿಂದ ಆಗಾಗ ಬಸ್ ಹತ್ತುವಾಗ ಕೆಲವು ಗಂಡಸರ ಅಸಹ್ಯ ಮಾತು ಕೇಳುತ್ತಿರುವೆ. ಏಯ್ ನಮ್ಗೆ ಮೊದಲು ಬಸ್ ಹತ್ತಲು ಬಿಡು. ನಮ್ ಹಣದಲ್ಲಿ ನೀವು ಪುಕ್ಕಟೆ ಪ್ರಯಾಣ ಮಾಡುವವರು. ಸರಿರಿ ಸರಿರಿ…” ಎಂದು. ಇನ್ನು ಕೆಲವರು ಹೊಯ್, ಮುಂದಿನ ವಾರದಿಂದ ನೀವೆಲ್ಲಾ ಫ್ರೀ ನಿಮ್ಗೆಲ್ಲಾ ಫ್ರೀ… ಇತ್ಯಾದಿ ಅಸಭ್ಯ ಮಾತುಗಳು. ಇದಕ್ಕೆ ಮಾಧ್ಯಮಗಳ ಕೊಡುಗೆಯೂ ಇದೆ ಸರ್ಕಾರದ ಮಂತ್ರಿಗಳ ಗೊಂದಲದ ಮಾತಿನ ಕೊಡುಗೆಯೂ ಇದೆ ಎಂದು ಖಾರವಾಗಿ ಬರೆದಿದ್ದಾರೆ.