ಜನಮತ 2023 : ಶೇ. 72.67 ರಷ್ಟು ಮತದಾನ, ಇತಿಹಾಸದಲ್ಲೇ ಗರಿಷ್ಠ ಮತದಾನ

ಬೆಂಗಳೂರು : ಕರ್ನಾಟಕ ರಾಜ್ಯ ಚುನಾವಣೆ ಮುಕ್ತಾಯವಾಗಿದೆ. ಮೇ 10 ರಂದು ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ಮುಕ್ತಾಯವಾಗಿದೆ. ಚುನಾವಣೆಯ ಆಯೋಗದ ಪ್ರಾಥಮಿಕ ಮಾಹಿತಿಯ ಪ್ರಕಾರ ಶೇಕಡ 72.67 ರಷ್ಟು ಮತದಾನವಾಗಿದೆ. ಇತಿಹಾಸದಲ್ಲಿಯೇ ಇದು ಗರಿಷ್ಠ ಮತದಾನವಾಗಿದೆ.

ಸಂಜೆಯಾಗುತ್ತಲೇ ರಾಜ್ಯದ ಬಹುತೇಕ ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದರಿಂದ ಮತದಾನದ ಗಡುವನ್ನು ಮೀರಿ ಮತ ಚಲಾವಣೆಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ರಾಜ್ಯದ ಹಲವು ಕಡೆ 10 ಗಂಟೆಯವರೆಗೂ ಮತದಾನ ಪ್ರಕ್ರಿಯೆ ನಡೆದಿದೆ ಎಂದು ವರದಿಯಾಗಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ (2018) 72.44% ಮತದಾನವಾಗಿತ್ತು. ಇನ್ನು 2013 ರಲ್ಲಿ 71.83 ರಷ್ಟು, 2008 ರಲ್ಲಿ ಶೇ.64 ರಷ್ಟು ಮತದಾನವಾಗಿತ್ತು. ಈ ಬಾರಿ ತುಸು ಹೆಚ್ಚಳವಾಗುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 90.93, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 90.86 ರಷ್ಟು ಮತದಾನವಾಗಿದ್ದು ದಾಖಲೆ ಬರೆದಿದೆ. ಸಿವಿ ರಾಮನ್ ಕ್ಷೇತ್ರದಲ್ಲಿ ಸಿವಿ ರಾಮನ್ ನಗರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು, ಕಡಿಮೆ ಮತದಾನ ಪ್ರಮಾಣ ಹೊಂದಿರುವ ಕ್ಷೇತ್ರ ಎನಿಸಿಕೊಂಡಿದೆ.

ಜಿಲ್ಲಾವಾರು ಮತದಾನದ ಪ್ರಮಾಣ

ಬೆಂಗಳೂರು ಗ್ರಾಮಾಂತರ – ಶೇ. 83.76

ಬೆಂಗಳೂರು ನಗರ – ಶೇ. 56.98

ಬೆಂಗಳೂರು ಸೆಂಟ್ರಲ್​ – ಶೇ. 55.39

ಬೆಂಗಳೂರು ಉತ್ತರ – ಶೇ. 52.88

ಬೆಂಗಳೂರು ದಕ್ಷಿಣ – ಶೇ. 52.80

ಬೆಳಗಾವಿ – ಶೇ. 76.33

ಬಾಗಲಕೋಟೆ ಶೇ. 74.63

ಕಲಬುರಗಿ – ಶೇ. 65.22

ವಿಜಯಪುರ – ಶೇ. 70.78

ಬೀದರ್ – ಶೇ. 71.76

ರಾಯಚೂರು – ಶೇ. 69.79

ಕೊಪ್ಪಳ – ಶೇ. 77.25

ಗದಗ – ಶೇ. 75.21

ಧಾರವಾಡ – ಶೇ. 71.02

ಉತ್ತರ ಕನ್ನಡ – ಶೇ. 76.72

ಹಾವೇರಿ – ಶೇ. 81.17

ವಿಜಯನಗರ – ಶೇ. 77.62

ಬಳ್ಳಾರಿ – ಶೇ. 76.13

ಚಿತ್ರದುರ್ಗ – ಶೇ. 8.37

ದಾವಣಗೆರೆ – ಶೇ. 77.47

ಶಿವಮೊಗ್ಗ – ಶೇ. 77.22

ಉಡುಪಿ – ಶೇ. 78.46

ಚಿಕ್ಕಮಗಳೂರು – ಶೇ. 77.89

ತುಮಕೂರು – ಶೇ. 83.46

ಚಿಕ್ಕಬಳ್ಳಾಪುರ – ಶೇ. 85.83

ಕೋಲಾರ – ಶೇ. 81.22

ರಾಮನಗರ – ಶೇ. 84.98

ಮಂಡ್ಯ – ಶೇ. 84.36

ಹಾಸನ – ಶೇ. 81.59

ದಕ್ಷಿಣ ಕನ್ನಡ – ಶೇ. 76.15

ಕೊಡಗು – ಶೇ. 74.74

ಮೈಸೂರು – ಶೇ. 75.04

ಚಾಮರಾಜನಗರ – ಶೇ. 80.81

Donate Janashakthi Media

Leave a Reply

Your email address will not be published. Required fields are marked *