ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದೆ. ಈ ನಡುವೆ ಚುನಾವಣಾ ಅಕ್ರಮ ತಡೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನಲೆಯಲ್ಲಿಯೇ ಈವರೆಗೆ 230 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ದಾಖಲೆ ಇಲ್ಲದೇ ಸಾಗಿಸುತ್ತಿದ್ದಂತ 105 ಕೋಟಿ ಹಣ ಜಪ್ತಿ ಮಾಡಲಾಗಿದೆ ಎಂಬುದಾಗಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದಂತ ಅವರು, ಈವರೆಗೆ 230 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ 105 ಕೋಟಿ ನಗದು ಜಪ್ತಿ ಮಾಡಲಾಗಿದೆ. ಇಂದು ಮತ್ತು ನಾಳೆ ಅಕ್ರಮ ಹಣ ಸಾಗಾಣೆ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದರು.
ಈವರೆಗೆ 53,406 ವ್ಯಕ್ತಿಗಳ ವಿರುದ್ಧ ಬಾಂಡ್ ಓವರ್ ಮಾಡಲಾಗಿದೆ. ಭದ್ರತಾ ಪ್ರಕರಣದ ಅಡಿಯಲ್ಲಿ 115 ಕೇಸ್ ದಾಖಿಸಲಾಗಿದೆ. 1.57 ಕೋಟಿ ಹಣ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯಾಧ್ಯಂತ 714 ಜನರ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಮಂಗಳೂರು ಸ್ಫೋಟ ಪ್ರಕರಣ: ಶಾರೀಕ್ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ-ಎಡಿಜಿಪಿ ಅಲೋಕ್ ಕುಮಾರ್
ಭದ್ರತೆಗಾಗಿ 1.56 ಲಕ್ಷ ಸಿಬ್ಬಂದಿ ನಿಯೋಜನೆ: ರಾಜ್ಯಾದ್ಯಂತ ವಿಧಾನಸಭೆ ಚುನಾವಣೆ ಮತದಾನ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 1.56 ಲಕ್ಷ ಅಧಿಕಾರಿ, ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಮಣಿಪುರ, ಮೀಜಾರೋಂ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಸಿಬ್ಬಂದಿ ಬಂದಿದ್ದಾರೆ. ಒಟ್ಟು 180 ಕೆಎಸ್‌ಆರ್‌ಪಿಎಫ್ ತುಕಡಿ ನಿಯೋಜನೆಗೊಂಡಿದೆ. ಇಂಟರ್ ಸ್ಟೇಟ್ ಬಾರ್ಡರ್ ಗಳಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಈವರೆಗೆ 230 ಕೋಟಿ ಮೌಲ್ಯದ ಹಣ ಮತ್ತು ವಸ್ತುಗಳಲ್ಲಿ ಬರೋಬ್ಬರಿ 105 ಕೋಟಿ ನಗದು ಹಣ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹೊರ ರಾಜ್ಯದವರ ಪ್ರವೇಶಕ್ಕೆ ನಿಷೇಧ: 185 ಬಾರ್ಡರ್ ಚೆಕ್ ಪೋಸ್ಟ್ ಗಳಲ್ಲಿ ನೆರೆ ರಾಜ್ಯಗಳ ಅಧಿಕಾರಿಗಳ ಸಂಪರ್ಕದಲ್ಲಿದ್ದೀವಿ. ಅಕ್ರಮ ಮತದಾನದ ಸಲುವಾಗಿ ಹೊರಗಿನಿಂದ ಬರುವವರನ್ನ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಕರ್ನಾಟಕದ ನಿವಾಸಿಗಳಾಗಿದ್ದು, ಹೊರ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದವರು ಮತದಾನಕ್ಕೆ ಬರುವಂತಿದ್ದರೆ ಅವರನ್ನು ಮಾತ್ರ ರಾಜ್ಯದ ಒಳಗೆ ಸೇರಿಸುತ್ತೇವೆ. ಉಳಿದಂತೆ ಹೊರಗಿನ ರಾಜ್ಯದ ಜನರನ್ನ ತಡೆದು ವಾಪಸ್ ಕಳಿಸುವಂತೆ ಚೆಕ್ ಪೋಸ್ಟ್ ಗಳಲ್ಲಿ ಸೂಚನೆ ನೀಡಲಾಗಿದೆ. ಅಕ್ರಮ ಮತದಾನ ತಡೆಯುವ ಸಲುವಾಗಿ ಹೊರಗಿನ ರಾಜ್ಯದವರು ಒಳಗೆ ಬರದಂತೆ ತಡೆಯಲು ಹದ್ದಿನ ಕಣ್ಣಿಡಲಾಗಿದೆ.