ಚಾಮರಾಜನಗರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಈ ನಡುವೆ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ನಡವೆ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅಖಾಡಕ್ಕಿಳಿದಿರುವುದರಿಂದ ತೀವ್ರ ಕುತೂಹಲ ಕೆರಳಿಸಿದೆ. ಇಂದು ನಡೆದ ಪ್ರಚಾರದಲ್ಲಿ ಸಚಿವ ವಿ.ಸೋಮಣ್ಣ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಒಂದು ಬಾರಿ ನನ್ನ ಜೊತೆ ವರುಣ ಕ್ಷೇತ್ರದಲ್ಲಿ ಓಡಾಡಲಿ. ರಸ್ತೆಗಳು ಹೇಗಿವೆ, ಜನರು ಹೇಗೆ ಕಷ್ಟಪಡುತ್ತಿದ್ದಾರೆ ಎಂಬುದನ್ನು ನೋಡಲಿ. ಸಿದ್ದರಾಮಯ್ಯ ಕರೆದರೆ ಹೋಗಲು ನಾನು ಸಿದ್ಧ. ಹೋಗಿ ನಾವು ಸುತ್ತಾಡೋಣ. ಅವರು ಮಾಡಿರುವ ಕೆಲಸ ಅವರಿಗೆ ತೃಪ್ತಿ ಕೊಟ್ಟಿದ್ದರೆ ನಾನೇ ಅವರಿಗೆ ನಮಸ್ಕಾರ ಮಾಡುತ್ತೇಬೆ. ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರೇನಲ್ಲ. ಯಾರನ್ನು ಆಯ್ಕೆ ಮಾಡಬೇಕೆಂದು ಜನರು ತೀರ್ಮಾನ ಮಾಡುತ್ತಾರೆ. ಈ ಹಿಂದೆ ನೀವು ಸೋತಾಗ ಮಂತ್ರಿಯಾಗಿದ್ದಿರಷ್ಟೇ. ಈಗ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕರಾಗಿ ನಿಂತಿದ್ದೀರ. ಈಗಲಾದರೂ ಅವರು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಬಿಟ್ಟು ವಾಸ್ತಾವಾಂಶಕ್ಕೆ ಗಮನ ಕೊಟ್ಟರೆ ಒಳ್ಳೆಯದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಾನು ಬಿಜೆಪಿ ಶಾಸಕ, ನನಗೆ ಇತಿಮಿತಿ ಗೊತ್ತಿದೆ : ಸಚಿವ ವಿ.ಸೋಮಣ್ಣ
ವರುಣದಲ್ಲಿ ಗಲಾಟೆ ಮಾಡಿದ್ದು ಬಿಜೆಪಿಯವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ನಾವೇನೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಿರಲಿಲ್ಲ. ಒಂದೇ ವರ್ಗದ ಜನ ಪ್ರಚಾರಕ್ಕೆ ಅಡ್ಡಿಪಡಿಸ್ತಿದ್ದಾರೆ. ನಾವು ಪ್ರಚಾರಕ್ಕೆ ಹೋದ್ರೆ ರಸ್ತೆಗೆ ಅಡ್ಡಲಾಗಿ ನೊಗ ಇಡ್ತಾರೆ. ಅಲ್ಲಿಂದಾಚೆಗೆ ಹೋಗಬಾರದು ಅಂತಾರೆ. ನಮಗೆ ಹುಚ್ಚು ಹಿಡಿದಿದಿಯಾ ಜಗಳ ಮಾಡೋಕೆ? ಸಿದ್ದರಾಮಯ್ಯ ಹತಾಶರಾಗಿ ಈ ರೀತಿ ಮಾತಾಡ್ತಿದ್ದಾರೆ. ಯಾಕೆ ಆ ರೀತಿ ಆರೋಪ ಮಾಡಿ ಚಿಕ್ಕವರಾಗ್ತಾ ಇದ್ದಾರೋ ಗೊತ್ತಿಲ್ಲ. ನೀವೂ ಗೆಲ್ಲೊದಾದ್ರೆ ಇದೆಲ್ಲಾ ನಿಮಗೆ ಯಾಕೆ ಬೇಕು. ಪೊಲೀಸ್ಗೆ ಹಿಡಿದುಕೊಟ್ಟರೂ ಸಹ, ಪೊಲೀಸರು ಬಿಟ್ಟು ಕಳಿಸ್ತಾರೆ. ಅವರ ಮೇಲೆ 326 ರ ಅಡಿ ಪ್ರಕರಣ ದಾಖಲಿಸಬೇಕು. ಏನಾದ್ರೂ ಪಿತೂರಿ ಮಾಡಲಿ, ಭಗವಂತ ಚಾಮುಂಡಿ ತಾಯಿ ಇದ್ದಾರೆ, ಅಲ್ಲದೇ ಕ್ಷೇತ್ರದ ಜನರಿದ್ದಾರೆ. ನನ್ನ ಸೇವೆ ಬೇಕು ಅಂದ್ರೆ ಸಹಾಯ ಮಾಡ್ತಾರೆ. ಮಾಡ್ದೆ ಇದ್ರೆ ನಂಗೇನೂ ಬೇಜಾರು ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.