ಪಂಜಾಬ್‌ ಪೊಲೀಸರಿಂದ ಪ್ರತ್ಯೇಕತಾವಾದಿ ಅಮೃತ್‌ ಪಾಲ್‌ ಬಂಧನ

ಪಂಜಾಬ್ : ತಲೆಮರೆಸಿಕೊಂಡಿದ್ದ ಉಗ್ರ ಅಮೃತ್ ಪಾಲ್ ಸಿಂಗ್ ನನ್ನು ಪಂಜಾಬ್ ನ ಮೋಗಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಖಲಿಸ್ತಾನ್ ಮುಖಂಡ ಅಮೃತ್ ಪಾಲ್ ಸಿಂಗ್ ನನ್ನು ಪಂಜಾಬ್ ನ ಮೋಗಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪಂಜಾಬ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖಲಿಸ್ತಾನಿ ಉಗ್ರ ಅಮೃತ್ಪಾಲ್ ಸಿಂಗ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಇದನ್ನೂ ಓದಿ : ಪ್ರತ್ಯೇಕತಾವಾದಿ ಅಮೃತ್‌ಪಾಲ್ ಬಂಧನಕ್ಕೆ ಪೊಲೀಸ್ ಸರ್ಪಗಾವಲು; ಅಂತರ್ಜಾಲ ಸ್ಥಗಿತಗೊಳಿಸಿದ ಪಂಜಾಬ್‌ ಸರ್ಕಾರ

ಇತ್ತೀಚೆಗಷ್ಟೇ ಅಮೃತ್ಪಾಲ್ ಸಿಂಗ್ ಪತ್ನಿಯನ್ನು ವಶಕ್ಕೆ ಪಡೆಯಲಾಗಿತ್ತು. ಮಾರ್ಚ್ 18 ರಿಂದ ಖಲಿಸ್ತಾನಿ ಉಗ್ರ ಅಮೃತ್ಪಾಲ್ ಸಿಂಗ್ ಗಾಗಿ ದೇಶದಲ್ಲಿ ಹುಡುಕಾಟ ನಡೆಯುತ್ತಲೇ ಇತ್ತು. ನೇಪಾಳಕ್ಕೆ ಪರಾರಿಯಾಗಿದ್ದಾರೆ ಎಂದೂ ಹೇಳಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *