ಮೋದಿ ಆಗಮ ಕಾರಣದಿಂದಾಗಿ ಬಂಡೀಪುರ ರಾಷ್ಟ್ರೀಯ ಹೆದ್ದಾರಿಗೆ ಸ್ವಚ್ಛತಾ ಭಾಗ್ಯ, ಪರಿಸರ ಸೂಕ್ಷ್ಮ ವಲಯದಲ್ಲಿ ಹೆಲಿಪ್ಯಾಡ್‌ ನಿರ್ಮಾಣ!

ಸೌಮ್ಯ ಹೆಗ್ಗಡಹಳ್ಳಿ 

ಗುಂಡ್ಲುಪೇಟೆ: ರಾಜ್ಯದಲ್ಲಿ ಈಗಾಗಲೆ ಬಿಜೆಪಿ ಸರ್ಕಾರವು ಜನಪರವಲ್ಲದ ಯೋಜನೆ, ಕಾರ್ಯಕ್ರಮಗಳಿಂದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಮತಗಳನ್ನು ಗಳಿಸಿಕೊಳ್ಳುವುದು ಕಷ್ಟವೇ ಹೌದು ಎಂದೇ ಹೇಳಬಹುದಾಗಿದೆ.

ಕಳೆದ ತಿಂಗಳು ಪ್ರಧಾನಿ ಮೋದಿ ಅವರು ಮೈಸೂರು-ಬೆಂಗಳೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯ ಎಕ್ಸ್‌ಪ್ರೆಸ್‌ ಹೈವೇಯನ್ನು ಉದ್ಘಾಟಿಸಿದರು,  ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ ಎಂಬ ತರಾತುರಿಯ ಕಾರಣಕ್ಕಾಗಿಯೇ ಅಪೂರ್ಣ ಸ್ಥಿತಿಯಲ್ಲಿದ್ದ ಎಕ್ಸ್‌ಪ್ರೆಸ್‌ ಹೈವೇಯನ್ನು ಉದ್ಘಾಟಿಸಿ, ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶಕ್ಕೆ ಬಿಜೆಪಿ ಕಾರಣವಾಯಿತು. ಮೋದಿ ರಾಜ್ಯದಲ್ಲಿ ಭೇಟಿ ನೀಡುವ ಕಾರಣಕ್ಕಾಗಿಯೇ ಅವರು ಭೇಟಿ ನೀಡು ವ ಹಲವಾರು ಪ್ರದೇಶಗಳಲ್ಲಿ ಭದ್ರತೆಯನ್ನ ಉದ್ದೇಶ ಎಂಬ ನೆಪವೊಡ್ಡಿ ವಾಹನ ಸಂಚಾರವನ್ನು ನಿಷೇಧ ಮಾಡುವುದು, ರೋಡ್‌ ಶೋ ಕಾರಣಕ್ಕಾಗಿ ರಸ್ತೆ ಸಮೀಪದಲ್ಲಿರುವ ಮರಗಳನ್ನು ಕಡಿದುಹಾಕುವುದು, ಶಾಲಾ- ಕಾಲೇಜುಗಳಿಗೆ ರಜೆ ನೀಡುವುದು, ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.  ಇದು ಇಷ್ಟಕ್ಕೆ ಸುಮ್ಮನಾಗೇ ಪ್ರವಾಸೋದ್ಯಮಕ್ಕೂ ಒಡೆತವನ್ನು ತಂದೊಡ್ಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು  ಸ್ಥಳೀಯರು  ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮೋದಿ ರೋಡ್‌ ʼಶೋʼಕಿಗೆ ಮರಗಳಿಗೆ ಬಿತ್ತು ಕೊಡಲಿ!

ಹೌದು, ಪ್ರಧಾನಿ ನರೇಂದ್ರ ಮೋದಿ ಇದೇ 9 ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುವುದು ಖಾತ್ರಿಯಾಗುತ್ತಿದ್ದಂತೆಯೇ ಬಂಡೀಪುರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಭಾಗ್ಯ ಕಾಣುವಂತಾಗಿದೆ. ಹಲವು ವರ್ಷಗಳಿಂದ ಎರಡು ಬದಿಗಳಲ್ಲೂ ಕಳೆಗಿಡಗಳು ಬೆಳೆದು ನಿಂತು ಸವಾರರಿಗೆ ತೊಂದರೆ ಆಗುತ್ತಿತ್ತು. ಪರಿಸರ ಸೂಕ್ಷ್ಮ ಪರಿಸರ ವಲಯದಲ್ಲೂ ಪ್ಲಾಸ್ಟಿಕ್ ಕಂಡುಬಂದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಮೇಲುಕಾಮನಹಳ್ಳಿಯಲ್ಲಿ ನಿರ್ಮಾಣ ಆಗಿರುವ ಹೆಲಿಪ್ಯಾಡ್‌ನಿಂದ ರಸ್ತೆ ಮಾರ್ಗವಾಗಿ ಬಂಡೀಪರಕ್ಕೆ ಹೋಗುವುದರಿಂದ ರಸ್ತೆಯ ಎರಡು ಬದಿಗಳಲ್ಲೂ ಸ್ವಚ್ಛಗೊಳಿಸಲಾಗಿದೆ. ಈ ನಡೆ ಸಾಮಾನ್ಯ ದಿನಗಳಲ್ಲಿ ಏಕಿಲ್ಲ ಎಂದು ಅಲ್ಲಿಯ ಜನರು  ಪ್ರಶ್ನಿಸಿದ್ದಾರೆ.

ಸಫಾರಿ ಕೇಂದ್ರದ ಬಳಿ ನಿರ್ಮಾಣವಾಗುತ್ತಿರುವ ಹೆಲಿಪ್ಯಾಡ್ಗೆ ಭದ್ರತೆ ನೀಡಲು ಜಮೀನಿನ ಸುತ್ತಲೂ ತಾತ್ಕಾಲಿಕ ಬೇಲಿಯನ್ನು ನಿರ್ಮಾಣ ಮಾಡಿ ಹೆಲಿಕಾಪ್ಟರ್ ಇಳಿಯುವ ಸ್ಥಳವನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಗುಂಡ್ಲುಪೇಟೆಯಿಂದ ತಮಿಳುನಾಡಿನ ಮಧುಮಲೆವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಸ್ವಚ್ಛಗೊಳಿಸಲಾಗಿದೆ. ಸಫಾರಿ ವಲಯದಲ್ಲಿ ಸಹ ಗುಂಡಿ ಬಿದ್ದ ಕಚ್ಚಾ ರಸ್ತೆಗಳಿಗೆ ಮಣ್ಷು ಹಾಕಿಸಲಾಗಿದೆ. ಜೊತೆಗೆ ಡಿಲೈನ್, ಫೈರ್ ಲೈನ್ ಗಳನ್ನು ಮಾಡಲಾಗಿದೆ. ಬಂಡೀಪುರದ ಕೇಂದ್ರ ಸ್ಥಳದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ : ಮಂಡ್ಯ ರೋಡ್‌ ʼಶೋʼಕಿ ಆಯ್ತು, ಇದೀಗ ಮೆಟ್ರೊ ʼಶೋʼ ಗೆ ಮೋದಿ ಸಿದ್ದತೆ!

ರೆಸಾರ್ಟ್ ಮತ್ತು ಅಂಗಡಿ ಮುಂಗಟ್ಟು ಬಂದ್: ಭದ್ರತಾ ದೃಷ್ಟಿಯಿಂದ ಮೇಲುಕಾಮನಹಳ್ಳಿಯ ಬಳಿ ಇರುವ ಎಲ್ಲ ಅಂಗಡಿ, ರೆಸಾರ್ಟ್, ಹೊಟೇಲ್‌ಗಳನ್ನು ನಾಲ್ಕು ದಿನಗಳ ಕಾಲ ಬಂದ್ ಮಾಡುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ಬುಧವಾರ ಸಂಜೆಯೇ ಎಲ್ಲಾ ರೆಸಾರ್ಟ್ ಮತ್ತು ಹೋಟೆಲ್‌ಗಳು ಖಾಲಿಯಾಗಿ ಬಿಕೊ ಎನ್ನುತ್ತಿದ್ದು ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದ ಸಾಕಷ್ಟು ಬಡ ವ್ಯಾಪಾರಿಗಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ  ಎನ್ನುತಾರೆ ಸ್ಥಳೀಯರು.

ಪರಿಸರ ಸೂಕ್ಷ್ಮ ವಲಯದಲ್ಲಿ ಹೆಲಿಪ್ಯಾಡ್‌: ಪ್ರಧಾನಿಯವರ ಹೆಲಿಕಾಪ್ಟರ್‌ ಇಳಿಯುವುದಕ್ಕೆ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರದೇಶ ಪರಿಸರ ಸೂಕ್ಷ್ಮ ವಲಯದಲ್ಲಿ ಬರುತ್ತಿದ್ದು, ನಿಯಮದ ಅನುಸಾರ ಹೆಲಿಪ್ಯಾಡ್‌ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದರೆ ಮೋದಿ ಆಗಮನ ಕಾರಣಕ್ಕಾಗಿ ವ್ಯವಸ್ಥೆ ಮಾಡಿರುವುದು ಕೂಡ ಜನವಿರೋಧಕ್ಕೆ ಕಾರಣವಾಗಿದೆ.

Donate Janashakthi Media

Leave a Reply

Your email address will not be published. Required fields are marked *