ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಕಾಲೇಜುಗಳ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳ 2ನೇ ರಾಜ್ಯ ಸಮ್ಮೇಳನವು ಕೋಸಗಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ವೇಳೆ ಹಕ್ಕೊತ್ತಾಯಗಳನ್ನು ಮಂಡಿಸಲಾಗಿ, ಸರ್ಕಾರವೂ ಕಾರ್ಮಿಕರ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಪರಿಹರಿಸಬೇಕೆಂದು ಆಗ್ರಹಿಸಲಾಗಿದೆ.
ಸಮ್ಮೇಳನವನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸೋಮಶೇಖರ ಜಿ.ಎಸ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ರೀಮತಿ ಸಿಂಧು ಹೆಚ್.ಎಸ್, ಸಾಹಿತಿಗಳು, ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಆರ್.ಕೆ.ಹುಡ್ಗಿ, ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರ, ಸ್ವಾಗತ ಸಮಿತಿ ಅಧ್ಯಕ್ಷ ಮೇಘರಾಜ ಕಠಾರೆ ಮಾತನಾಡಿದರು.
ವೇದಿಕೆಯಲ್ಲಿ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮತ್ತು ಮಹಿಳಾ ಉಪ ಸಮಿತಿಯ ಮಲ್ಲಮ್ಮ ಕೋಡ್ಲಿ ಇದ್ದರು. ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಕಾಲೇಜುಗಳ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಭೀಮಶೇಟಿ ಯಂಪ್ಪಳ್ಳಿ ಮಾತನಾಡಿದರು. ಜಂಟಿ ಕಾರ್ಯದರ್ಶಿ ಕೆ.ಹನುಮೇಗೌಡ ನಿರೂಪಿಸಿದರು. ಮರಡಿ ಜಂಬಯ್ಯ ನಾಯಕ ಸ್ವಾಗತಿಸಿದರು, ಹುಲುಗಪ್ಪ ಹೆಚ್.ಚಲವಾದಿ ವಂದಿಸಿದರು.
ನೂತನ ರಾಜ್ಯ ಸಮಿತಿ ಆಯ್ಕೆ
ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ 2ನೇ ರಾಜ್ಯ ಸಮ್ಮೇಳನದಲ್ಲಿ ನೂತನ ರಾಜ್ಯ ಸಮಿತಿ ಆಯ್ಕೆ ಮಾಡಲಾಗಿದೆ. ಸಂಘದ ಗೌರವಾಧ್ಯಕ್ಷರಾಗಿ ನಿತ್ಯಾನಂದ ಸ್ವಾಮಿ, ರಾಜ್ಯಾಧ್ಯಕ್ಷರಾಗಿ ಭೀಮಶೆಟ್ಟಿ ಯಂಪಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಹನುಮೇಗೌಡ.ಕೆ, ಖಜಾಂಚಿ ಚಂದ್ರಪ್ಪ ಹೊಸ್ಕೇರಾ, ರಾಜ್ಯ ಉಪಾಧ್ಯಕ್ಷರಾಗಿ ಎಂ.ಪುಟ್ಟಮಾಧು(ಮಂಡ್ಯ), ಜಂಬಯ್ಯ ನಾಯಕ(ವಿಜಯನಗರ), ಮುನಿಯಪ್ಪ(ಚಿಕ್ಕಬಳ್ಳಾಪುರ, ಇ.ಆರ್. ಯಲ್ಲಪ್ಪ(ಬಳ್ಳಾರಿ), ಶಾಂತಕ್ಕ(ಹಾವೇರಿ), ದಾವಲಸಾಬ ನದಾಪ್(ಯಾದಗಿರಿ), ಇಸಾಮುದ್ದೀನ್(ಬೀದರ್), ಗೌರಮ್ಮ ಬೀಳೂರು(ವಿಜಯಪುರ), ದ್ವಾರಕಾ ಎದ್ದಲಾ ಪುಡಿ(ಬೆಳಗಾವಿ).
ಜಂಟಿ ಕಾರ್ಯದರ್ಶಿಯಾಗಿ ಗ್ಯಾನೇಶ ಕಡಗದ(ಕೊಪ್ಪಳ), ಹುಲಗಪ್ಪ ಚಲವಾದಿ(ವಿಜಯಪುರ), ಪ್ರದೀಪ್ ದಳವಾಯಿ (ಬೆಳಗಾವಿ), ಶಿವಮೂರ್ತಿ (ಚಿಕ್ಕಮಗಳೂರು), ರಾಜೇಶ ದೇಶಪಾಂಡೆ (ಬಾಗಲಕೋಟೆ) ರಾಜ್ಯ ಪದಾಧಿಕಾರಿಗಳು ಸೇರಿದಂತೆ 122 ಸದಸ್ಯರ ರಾಜ್ಯ ಸಮಿತಿ ರಚಿಸಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ