ಸಿಕ್ಕಿಂ: ಭಾರೀ ಹಿಮಪಾತದಿಂದ ಪೂರ್ವ ಸಿಕ್ಕಿಂನ ಚಾಂಗು ಪ್ರದೇಶದಲ್ಲಿ ಸಿಲುಕಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1000 ಕ್ಕೂ ಹೆಚ್ಚು ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ.
ನತು ಲಾ, ತ್ಸೋಮ್ಗೊ (ಚಾಂಗು) ಸರೋವರ ಮತ್ತು ಹತ್ತಿರದ ಕೆಲವು ಪ್ರದೇಶಗಳಲ್ಲಿ ತೀವ್ರತರವಾದ ಹಿಮಪಾತ ಉಂಟಾಗಿ ತಾಪಮಾನ ಶೂನ್ಯಕ್ಕೆ ಇಳಿದಿರುವುದು ಮತ್ತು ಪ್ರಯಾಣಿಕರ ವಾಹನಗಳು ಸಂಚಾರವಿಲ್ಲದೆ ಅಲ್ಲಲ್ಲಿ ನಿಂತುಹೋಗಿರುವ ಕಾರಣದಿಂದಾಗಿ ಭಾರೀ ಆತಂಕ ಎದುರಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಪ್ರಧಾನಿ ಕಾರ್ಯಾಲಯ ಅಧಿಕಾರಿ ಎಂದು ಸುಳ್ಳು ಹೇಳಿದ ಗುಜರಾತ್ ವ್ಯಕ್ತಿ; ಶ್ರೀನಗರದಲ್ಲಿ ಬಂಧನ
ಎಲ್ಲಾ ಪ್ರವಾಸಿಗರಿಗೆ ವಸತಿ, ಬಿಸಿ ಊಟ, ಬೆಚ್ಚಗಿನ ಬಟ್ಟೆ ಮತ್ತು ನಿರ್ಣಾಯಕ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ ಎಂದು ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಸಿಕ್ಕಿಂನ ಕೆಲವು ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ಸಂದರ್ಭದಲ್ಲಿ 100ಕ್ಕೂ ಹೆಚ್ಚಿನ ವಾಹನಗಳು ಸಿಕ್ಕಿಹಾಕಿಕೊಂಡಿವೆ. ಪ್ರವಾಸಿಗರನ್ನು ರಾಜ್ಯ ಪೊಲೀಸ್ ಮತ್ತು ನಾಗರಿಕ ಆಡಳಿತದ ಸಹಯೋಗದೊಂದಿಗೆ ತ್ರಿಶಕ್ತಿ ಪೊಲೀಸ್ ಪಡೆಗಳು ಆಪರೇಷನ್ ಹಿಮ್ರಹತ್ ಆರಂಭಿಸಿದವು.
“ರಕ್ಷಣಾ ಪಡೆಯು ಸಕಾಲದಲ್ಲಿ ಸಹಾಯಕ್ಕೆ ಧಾವಿಸಿದ್ದರಿಂದ ಯಾವುದೇ ಅಪಾಯ ಉಂಟಾಗಲಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ