ಸತತ ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಷಿ ಜಿನ್‌ಪಿಂಗ್ ಆಯ್ಕೆ

ಬೀಜಿಂಗ್‌: ಚೀನಾದ ಅಧ್ಯಕ್ಷರಾಗಿ ಷಿ ಜಿನ್‌ಪಿಂಗ್‌ ಅವರು ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚೀನಾದ ಶಾಸಕಾಂಗ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿ), ಷಿ ಜಿನ್ ಪಿಂಗ್ ಅವರನ್ನು ಅಧಿಕೃತವಾಗಿ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಅನುಮೋದಿಸಿತು.

ಆಧುನಿಕ ಚೀನಾದ ಇತಿಹಾಸದಲ್ಲಿ ಮಾವೋ ತ್ಸೆ ತುಂಗ್ ಅವರ ನಂತರ ಅತ್ಯಂತ ಪ್ರಭಾವಿ ಮತ್ತು ಸುದೀರ್ಘ ಅವಧಿಗೆ ಚೀನಾದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೇಯಸ್ಸು ಷಿ ಜಿನ್​ ಪಿಂಗ್ ಅವರಿಗೆ ಸಲ್ಲುತ್ತದೆ. ಅಧಿಕೃತವಾಗಿ ಆಯ್ಕೆಗೊಂಡ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಷಿ ಜಿನ್‌ ಪಿಂಗ್‌, ‘ವಿಶ್ವವಿಲ್ಲದೇ ಚೀನಾ ಅಭಿವೃದ್ಧಿ ಹೊಂದಲಾರದು, ವಿಶ್ವಕ್ಕೆ ಚೀನಾ ಕೂಡ ಬೇಕು’ ಎಂದು ಹೇಳಿದರು. ತಮ್ಮ ಹಲವು ವಿಶ್ವಾಸ ಪಾತ್ರರನ್ನೂ ಷಿ ಜಿನ್ ​ಪಿಂಗ್ ಇದೇ ಸಂದರ್ಭದಲ್ಲಿ ಪಕ್ಷದಲ್ಲಿ ಉನ್ನತ ಸ್ಥಾನಗಳಿಗೆ ತಂದಿದ್ದಾರೆ.

ಇದನ್ನು ಓದಿ: Nord Stream ಪೈಪ್ ಲೈನ್ ಬುಡಮೇಲು ಕೃತ್ಯವೂ, ಚೀನಾದ ಬಲೂನುಗಳೂ ಮತ್ತು ಮಾಧ್ಯಮಗಳೂ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ) ತನ್ನ ನಾಯಕನಾಗಿ 69 ವರ್ಷದ  ಷಿ ಜಿನ್ ಪಿಂಗ್ ಅವರನ್ನು ಸಿಪಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆ ಮಾಡಿತ್ತು. ಪಕ್ಷವು ತನ್ನ ಎಲ್ಲಾ ಉನ್ನತ ನೀತಿ ಸಂಸ್ಥೆಗಳಿಗೆ ಹೊಸ ನಾಯಕತ್ವವನ್ನು ಆಯ್ಕೆ ಮಾಡಿದೆ.

ಷಿ ಜಿನ್‌ಪಿಂಗ್‌ ಅವರ ಹೊಸ ತಂಡದಲ್ಲಿ ಪಕ್ಷದ ಶಾಂಘೈ ಘಟಕದ ಮಾಜಿ ಅಧ್ಯಕ್ಷ ಲಿ ಕಿಯಾಂಗ್ ಅವರನ್ನು ಹೊಸ ಪ್ರಧಾನ ಮಂತ್ರಿಯನ್ನಾಗಿ ಮಾಡಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ತಮ್ಮ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಜಿನ್‌ಪಿಂಗ್‌ ಸಿಪಿಸಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇಶವು ‘ಸಮೃದ್ಧ ಸಮಾಜ’ ವನ್ನು ಸ್ಥಾಪಿಸುವ ಗುರಿಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಚೀನಾ ಕಮ್ಯುನಿಸ್ಟ್ ಪಕ್ಷದ ಸಾಧನೆಗಳು ಸಮಾಜವಾದದ ಹಿರಿಮೆಯನ್ನು ಸಾಬೀತುಗೊಳಿಸಿವೆ

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಚೀನಾದಾದ್ಯಂತ ಸರ್ಕಾರಿ ವಾಹಿನಿಗಳಲ್ಲಿ ನೇರಪ್ರಸಾರ ಮಾಡಲಾಗಿತ್ತು. ಸಮೃದ್ಧ. ಪ್ರಬಲ, ಪ್ರಜಾಪ್ರಭುತ್ವದ, ನಾಗರಿಕವಾದ, ಸೌಹಾರ್ದಯುತ ಹಾಗೂ ಮಹಾನ್ ಆಧುನಿಕ ಸಮಾಜವಾದಿ ದೇಶವನ್ನು ನಿರ್ಮಿಸುತ್ತೇನೆ ಎಂದು ಅವರು ಶಪಥ ಮಾಡಿದ್ದಾರೆ.

ನೂತನ ಸಂಸತ್ ಅಧ್ಯಕ್ಷರನ್ನಾಗಿ ಝಾವೊ ಲೆಜಿ ಮತ್ತು ಉಪಾಧ್ಯಕ್ಷರಾಗಿ ಹಾನ್ ಝೆಂಗ್ ಅವರನ್ನು ಚೀನಾ ಸಂಸತ್ತು ಆಯ್ಕೆ ಮಾಡಿದೆ. ಅವರಿಬ್ಬರೂ ಕ್ಸಿ ಜಿನ್‌ಪಿಂಗ್ ಅವರ ಹಿಂದಿನ ಅವಧಿಯಲ್ಲಿ ಸಿಪಿಸಿ ಪಕ್ಷದ ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ನಾಯಕರಾಗಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *