ನವದೆಹಲಿ: ಪ್ರಸ್ತುತ 17ನೇ ಲೋಕಸಭೆಯ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷವಷ್ಟೇ ಬಾಕಿ ಇದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಲೋಕಸಭೆಯ ಉಪಸಭಾಪತಿ ಸ್ಥಾನ ಖಾಲಿ ಇದ್ದು ಈ ಬಗ್ಗೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಾಂವಿಧಾನಿಕ ತಜ್ಞರು ಮತ್ತು ವಿರೋಧ ಪಕ್ಷಗಳು ‘ಉಪ ಸಭಾಪತಿ ಹುದ್ದೆಗೆ ಚುನಾವಣೆ ನಡೆಯದಿರುವುದು’ ಹಿಂದೆಂದೂ ಕಂಡಿರದ ಮತ್ತು ಅಸಂವಿಧಾನಿಕ ನಡೆ. ಸಂಸದೀಯ ವ್ಯವಸ್ಥೆಯಲ್ಲಿ ಉಪ ಸಭಾಪತಿ ಸ್ಥಾನಕ್ಕೆ ಸಂವಿಧಾನದ ಮಹತ್ವದ ಸ್ಥಾನವನ್ನು ನೀಡಿದೆ.
ಇದನ್ನು ಓದಿ: “ಉಪಕುಲಪತಿಗಳನ್ನು ಹುದ್ದೆಯಿಂದ ಹೊರಹಾಕಿದ್ದು ತಪ್ಪು” ಎನ್ನುತ್ತಾರೆ ಪಿ.ಡಿ.ಟಿ.ಚಾರಿ, ಲೋಕಸಭೆಯ ನಿವೃತ್ತ ಮಹಾಕಾರ್ಯದರ್ಶಿ
ಲೋಕಸಭೆ ಮತ್ತು ಹಲವು ರಾಜ್ಯಗಳ ವಿಧಾನಸಭೆಗಳಲ್ಲಿ ಉಪಸಭಾಪತಿ ಹುದ್ದೆಗಳು ಖಾಲಿ ಉಳಿದಿರುವ ವಿಷಯ ಕಳೆದ ತಿಂಗಳು ದೇಶದ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದಾಗ, ಅದು ಇದೊಂದೊ ಪ್ರಮುಖ ವಿಚಾರವೆಂದು ಪರಿಗಣಿಸಿ ಕೇಂದ್ರದಿಂದ ಪ್ರತಿಕ್ರಿಯೆಯನ್ನು ಕೋರಿತ್ತು. ಖಾಲಿ ಹುದ್ದೆಗಳನ್ನು ಉಲ್ಲೇಖಿಸಿ, ಪಿಐಎಲ್ನ ಅರ್ಜಿದಾರರು ಇದು ಆರೋಗ್ಯಕರ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದರು.
ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ಪ್ರಕಾರ, ಉಪ ಸಭಾಪತಿ ಅವರು ಹಾಲಿ ಸದನದ ಅಧ್ಯಕ್ಷತೆಯಲ್ಲಿ ಸಭಾಧ್ಯಕ್ಷರ ಸಮಾನವಾದ ಅಧಿಕಾರವನ್ನು ಹೊಂದಿದ್ದಾರೆ. ಸಂವಿಧಾನದ 180 ನೇ ವಿಧಿಯ ಪ್ರಕಾರ, ಸಭಾಧ್ಯಕ್ಷರ ಕುರ್ಚಿ ಖಾಲಿ ಇರುವಾಗ ಅವರ ಕರ್ತವ್ಯಗಳನ್ನು ನಿರ್ವಹಿಸುವ ಅಧಿಕಾರ ಉಪ ಸಭಾಪತಿ ಅವರಿಗೆ ಇರುತ್ತದೆ.
ಇದನ್ನು ಓದಿ: ಮುಂಗಾರು ಅಧಿವೇಶನ: ಭಾರೀ ಗದ್ದಲದಿಂದಾಗಿ ಲೋಕಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ
ಪ್ರಸ್ತುತ ಲೋಕಸಭೆ ಜೂನ್ 2019ರಿಂದ ಕಾರ್ಯಾರಂಭ ಮಾಡಿತು. ಅದರ ಅಧಿಕಾರಾವಧಿಯು ಮುಂದಿನ ವರ್ಷ ಮುಗಿಯುತ್ತದೆ. ಸಂವಿಧಾನ ವಿಧಿ 93 ರ ಪ್ರಕಾರ, ಚುನಾವಣೆಯ ನಂತರ ಸದನವು ಸಭೆ ಸೇರಿದ ತಕ್ಷಣ, ಸಭಾಧ್ಯಕ್ಷ ಹಾಗೂ ಉಪ ಸಭಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಲೋಕಸಭೆಯು ಉಪ ಸಭಾಪತಿ ಇಲ್ಲದೆ ಇಷ್ಟು ದೀರ್ಘ ಕಾಲ ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲು.
ಉಪ ಸಭಾಪತಿ ಆಯ್ಕೆಯು ವಿರೋಧ ಪಕ್ಷದ ಸದಸ್ಯರಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಂಪ್ರದಾಯವಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ