ಕನ್ನಡಿಗ ಮೀಸಲಾತಿ ಜಾರಿಗೆ ಹಿಂದೇಟು; ಬಿಜೆಪಿಗೆ ಧಮ್ಮು – ತಾಕತ್ತು ಇಲ್ಲವೆ ಎಂದ ಜೆಡಿಎಸ್‌

ಬೆಂಗಳೂರು  : ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಕನ್ನಡದ ಜಲ-ನೆಲ-ಧನ ಬಳಸಿ ಕಟ್ಟಿದ ಸಂಸ್ಥೆಯಲ್ಲಿ ಕನ್ನಡಿಗರ ದುಸ್ಥಿತಿ ಇದು. ಬಿಜೆಪಿಯ ಸಂಸದರೇ ಇದರ ಬಗ್ಗೆ ಪ್ರಶ್ನೆ ಮಾಡಲು ನಿಮಗೆ ಧಮ್ಮು – ತಾಕತ್ತು ಇಲ್ಲವೆ ಎಂದು ಜೆಡಿಎಸ್ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ಉತ್ತರದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ವಂಚನೆ ನಮ್ಮ ಮೂಗಿನ ಕೆಳಕ್ಕೆ ನಡೆಯುತ್ತಿದೆ. ಉತ್ತರದವರ ಮುಂದೆ ಬೇಡಲು ನಾವೇನು ಅವರ ಗುಲಾಮರೆ? ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ ಹೊರತು ಭಿಕ್ಷೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯಕ್ಕೆ ಲಾಭವಾಗಲಿದೆ ಎಂದು ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದರು. ಆದರೆ, ಈಗ ನಮ್ಮ ಮಕ್ಕಳಿಗೆ ಮೋಸವಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಅನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತನ್ನಿ. ನಡುಬಗ್ಗಿಸಿ ಇನ್ನೆಷ್ಟು ದಿನ ನಿಲ್ಲುವಿರಿ? ಅಧಿಕಾರದ ಕೊನೆಯಲ್ಲಾದರೂ ಸ್ವಾಭಿಮಾನಿಯಾಗಿ ಧ್ವನಿ ಎತ್ತಿ ಎಂದು ಮೂದಲಿಸಿದೆ.

ಇದನ್ನೂ ಓದಿ : ಉಳ್ಳವರಿಗೆ ಮಣೆ ಹಾಕುವ ನೂತನ ಶಿಕ್ಷಣ ನೀತಿ

Donate Janashakthi Media

Leave a Reply

Your email address will not be published. Required fields are marked *