ಬೆಂಗಳೂರು– ಬಂದ್ ಸ್ವಯಂ ಪ್ರೇರಿತ, ಯಾರಿಗೂ ಬಲವಂತ ಪಡಿಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಭ್ರಷ್ಟ ಬಿಜೆಪಿ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕು. ಅದಕ್ಕಾಗಿ ಮಾರ್ಚ್ 9ರಂದು ಬೆಳಗ್ಗೆ 9ರಿಂದ 11ರವರೆಗೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಯಾರಿಗೂ ತೊಂದರೆಯಾಗದ ರೀತಿ ಬಂದ್ ಮಾಡಲಾಗುತ್ತಿದ್ದು ಶಿಕ್ಷಣ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬೆಂಬಲಿಸಬಹುದು. ಯಾರಿಗೂ ನಾವು ಬಲವಂತ ಮಾಡುವುದಿಲ್ಲ ಎಂದು ತಿಳಿಸಲಾಗಿದೆ.
ನಾನು ಪ್ರಾಮಾಣಿಕ ಎಂದು ಕಣ್ಣೀರು ಹಾಕಿ ನಿಮಗೆ ನೀವೇ ಸರ್ಟಿಫಿಕೇಟ್ ಕೊಟ್ಟುಕೊಳ್ಳುವ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾವುಕರಾಗಿ ಮಾತನಾಡಿ, ತಾವು ಪ್ರಾಮಾಣಿಕ ಎಂದಿದ್ದಾರೆ. ಇದಕ್ಕೆ ಟಾಂಗ್ ನೀಡಿರುವ ಕಾಂಗ್ರೆಸ್, ಶೇ.40 ಕಮಿಷನ್ ಆರೋಪ ಬಂದಾಗಲೇ ಏಕೆ ತನಿಖೆಗೆ ವಹಿಸಿ ನಿಮ್ಮ ಪ್ರಾಮಾಣಿಕತೆ ನಿರೂಪಿಸಲಿಲ್ಲ ? ಕಾಕಂಬಿ ಹಗರಣದ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲ? ಹಗರಣ ಮುಚ್ಚಿಹಾಕುವುದು ನಿಮ್ಮ ಪ್ರಮಾಣಿಕತೆಯೇ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಕೈ ಬಂದ್ಗೆ ರಾಜ್ಯದ ಜನತೆ ಬೆಂಬಲ ಕೊಡುವುದಿಲ್ಲ : ಸಿಎಂ ಬೊಮ್ಮಾಯಿ ತಿರುಗೇಟು
ಒಬ್ಬ ಶಾಸಕರು ಪೊಲೀಸರ ಕೈಗೆ ಸಿಗಲಿಲ್ಲವೆಂದರೆ ಇದು ಗೃಹ ಇಲಾಖೆಯ ಕುಚೋದ್ಯವಲ್ಲವೇ? ಶಾಸಕ ಮಾಡಾಳು ವಿರೂಪಾಕ್ಷಪ್ಪ ನಿಮ್ಮ ಸಹೋದ್ಯೋಗಿ, ನಿಮ್ಮ ಶಾಸಕರು ಎಲ್ಲಿದ್ದಾರೆಂದು ನಿಮಗೇ ತಿಳಿದಿಲ್ಲವೇ? ಶಾಸಕರು ಪೊಲೀಸರ ಕೈಗೆ ಸಿಗುತ್ತಿಲ್ಲ ಎನ್ನುವುದನ್ನು ಜನ ನಂಬಬೇಕೆ? ಇದು ಅಸಾಮರರ್ಥ್ಯವೂ, ಭ್ರಷ್ಟಾಚಾರದ ರಕ್ಷಣೆಯೋ ಎಂದು ಬಿಜೆಪಿ ಉತ್ತರಿಸಬೇಕಿದೆ ಎಂದು ಹೇಳಿದರು.