ಸ್ವಾತಂತ್ರೋತ್ಸವ; ಬುಕ್‌ ಬ್ರಹ್ಮ ಸಂಸ್ಥೆಯಿಂದ ಕಥಾ ಸ್ಪರ್ಧೆ-ಕಾದಂಬರಿ ಪುರಸ್ಕಾರ-2023

ಬೆಂಗಳೂರು: ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಬುಕ್‌ ಬ್ರಹ್ಮ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯನ್ನು ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ 2022ನೇ ಸಾಲಿನಲ್ಲಿ ಪ್ರಕಟಗೊಂಡ ಕಾದಂಬರಿಗೆ ಪುರಸ್ಕಾರ ನೀಡಲು ಸಂಸ್ಥೆಯೂ ನಿರ್ಧರಿಸಿದೆ.

2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿರುವ ಸಂಸ್ಥೆಯು, 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ವಿತರಿಸುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ. ಈ ಪೈಕಿ 3 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 2 ಸಾವಿರ ರೂಪಾಯಿಗಳನ್ನು ಪ್ರಕಾಶಕರಿಗೆ ನೀಡಲಿದೆ.

ಇದನ್ನು ಓದಿ: ಹತ್ತು ಲಕ್ಷ ಜನ ಭಾಗವಹಿಸಿದ ನಾಲ್ಕನೇ ಕೆಂಪು ಪುಸ್ತಕ ದಿನ

ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಕಥೆಗೆ 50 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ದ್ವೀತಿಯ ಸ್ಥಾನ ಪಡೆಯುವ ಕಥೆಗೆ 25 ಸಾವಿರ ರೂಪಾಯಿ, ತೃತೀಯ ಸ್ಥಾನಕ್ಕೆ 15 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ಉಳಿದಂತೆ ಐದು ಕಥೆಗಳಿಗೆ ತಲಾ 5 ಸಾವಿರ ನಗದನ್ನು ಒಳಗೊಂಡ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ 17 ಕಥೆಗಳಿಗೆ ತಲಾ ಎರಡು ಸಾವಿರ ರೂಪಾಯಿ ನೀಡಲಿದೆ. ಆಯ್ಕೆಯಾಗುವ 25 ಕಥೆಗಳನ್ನು ಒಳಗೊಂಡ ಪುಸ್ತಕವನ್ನು ಬುಕ್‌ ಬ್ರಹ್ಮ ಸಂಸ್ಥೆಯು ಪ್ರಕಟಿಸಲಿದೆ.

ಬುಕ್ ಬ್ರಹ್ಮ ಕಾದಂಬರಿ ಪುರಸ್ಕಾರ 2023ರ ನಿಯಮಗಳು;

  1. ಕಾದಂಬರಿಯು ಸ್ವತಂತ್ರವಾಗಿರಬೇಕು ಮತ್ತು 2022ರಲ್ಲಿ ಮೊದಲ ಮುದ್ರಣಗೊಂಡಿರಬೇಕು.
  2. ಅನುವಾದ ಹಾಗೂ ಭಾಷಾಂತರಗೊಂಡ ಕಾದಂಬರಿಗಳನ್ನು ಪರಿಗಣಿಸುವುದಿಲ್ಲ.
  3. ಸ್ಪರ್ಧೆಗೆ ಲೇಖಕರು/ ಪ್ರಕಾಶಕರು ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಕಳುಹಿಸಬೇಕು.
  4. ತೀರ್ಪುಗಾರರ ನಿರ್ಣಯವೇ ಅಂತಿಮ.
  5. ಕಾದಂಬರಿಗಳನ್ನು ಕಳುಹಿಸಲು ಏಪ್ರಿಲ್‌ 15, 2023 ಕೊನೆಯ ದಿನ.
  6. ಕನ್ನಡದ ಪ್ರಮುಖ ಕಾದಂಬರಿಕಾರರು ಹಾಗೂ ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.

ಇದನ್ನು ಓದಿ: ಬಿಡುಗಡೆ ಸಿದ್ದಗೊಂಡ ʻಕುತ್ಲೂರು ಕಥನʼ

ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023ರ ನಿಯಮಗಳು;

  1. ಕಥೆಯು ಸ್ವತಂತ್ರವಾಗಿರಬೇಕು. ಅನುವಾದ, ಅನುಕರಣವಾಗಿರಬಾರದು.
  2. ಕಥೆಯು ಅಪ್ರಕಟಿತವಾಗಿರಬೇಕು. ಮುದ್ರಣ ಅಥವಾ ಯಾವುದೇ ವಿದ್ಯುನ್ಮಾನ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು.
  3. ಕಥೆಗೆ ಯಾವುದೇ ರೀತಿಯ ಪದಮಿತಿ ಇರುವುದಿಲ್ಲ.
  4. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧ ಇಲ್ಲ
  5. ಹಸ್ತಪ್ರತಿ ಅಥವಾ ಟೈಪ್ ಮಾಡಿದ ಕಥೆಯಿರುವ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಬಾರದು. ಕಥೆ ಮುಗಿದ ನಂತರ ಪ್ರತ್ಯೇಕ ಪುಟದಲ್ಲಿ ತಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇರಬೇಕು.
  6. ಕಥೆಗಾರರು ನಿಬಂಧನೆಗಳಿಗೆ ಒಪ್ಪಿದ ಮತ್ತು ಸಹಿ ಮಾಡಿದ ಪ್ರತ್ಯೇಕ ಒಂದು ಪತ್ರ ಇಡಬೇಕು.
  7. ಕನ್ನಡದ ಪ್ರಮುಖ ಕಥೆಗಾರರು/ವಿಮರ್ಶಕರು ಸ್ಪರ್ಧೆಯ ನಿರ್ಣಾಯಕರಾಗಿರುತ್ತಾರೆ.
  8. ಒಬ್ಬರು ಒಂದು ಕಥೆಯನ್ನು ಮಾತ್ರ ಕಳಿಸಬೇಕು. ಕಾದಂಬರಿ ಸ್ಪರ್ಧೆಗೆ ಪುಸ್ತಕ ಕಳುಹಿಸಿದವರೂ ಕೂಡ ಕಥೆಗಳನ್ನು ಕಳುಹಿಸಬಹುದು.
  9. ಕಥೆಗಳನ್ನು ಕಳುಹಿಸಲು ಕೊನೆಯ ದಿನ ಬುಧವಾರ, ಮೇ 31, 2023
  10. ಅಂತಿಮ ಸುತ್ತಿಗೆ ಆಯ್ಕೆಯಾದ 25 ಕಥೆಗಳನ್ನು ಪುಸ್ತಕ, ಇ-ಪುಸ್ತಕ, ಆಡಿಯೋ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈ 25 ಕಥೆಗಳ ಪೈಕಿ ಬಹುಮಾನ ಪಡೆಯದೇ ಉಳಿಯುವ 17 ಕಥೆಗಳಿಗೆ ತಲಾ 2000 ರೂಪಾಯಿ ಗೌರವಧನ ನೀಡಲಾಗುವುದು. ಈ ಎಲ್ಲಾ 25 ಕಥೆಗಳ ಹಕ್ಕುಸ್ವಾಮ್ಯ ಕಥೆಗಾರರು ಮತ್ತು ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇಬ್ಬರಿಗೂ ಜಂಟಿಯಾಗಿ (ಶೇಕಡಾ 50) ಸೇರಿರುತ್ತದೆ.

ನಿಯಮಗಳು;

ಬುಕ್‌ ಬ್ರಹ್ಮ ಪ್ರೈವೇಟ್ ಲಿಮಿಟೆಡ್, ಫರ್ಬೆಂಡನ್‌ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್  ಮತ್ತು ಕಾಗ್ನಿಕ್ವೆಸ್ಟ್‌ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸ್ಫರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಆಯ್ಕೆಗೆ ಸಂಬಂಧಿಸಿದಂತೆ ʻಬುಕ್ ಬ್ರಹ್ಮ’ ಆಡಳಿತ ಮಂಡಳಿಯ ನಿರ್ಣಯವೇ ಅಂತಿಮ.

ಇದನ್ನು ಓದಿ: “ಧೀರ ಟಿಪ್ಪುವಿನ ಲಾವಣಿಗಳು” ಜನವರಿ 8 ರಂದು ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ಬಿಡುಗಡೆಯಾಗಲಿದೆ

ಆಗಸ್ಟ್‌ 1, 2023 ರಂದು ಮಂಗಳವಾರ, ಅಂತಿಮ ಸುತ್ತನ್ನು ಪ್ರವೇಶಿಸುವ 5 ಕಾದಂಬರಿಗಳ ಪಟ್ಟಿಯನ್ನು ಹಾಗೂ ಆಯ್ಕೆಯಾಗುವ 25 ಕಥೆಗಳ ಪಟ್ಟಿಯನ್ನು ಪ್ರಕಟಗೊಳ್ಳಲಿದೆ.

ಆಗಸ್ಟ್ 15, 2023 ರಂದು ಮಂಗಳವಾರ, ನಡೆಯಲಿರುವ ಸಮಾರಂಭದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಕಥೆಗಳ ಘೋಷಣೆ ಮತ್ತು ಪ್ರಶಸ್ತಿ ವಿತರಣೆ ಎರಡೂ ಕಾರ್ಯಕ್ರಮವಿರಲಿದೆ.

ಅಂತಿಮ ಸುತ್ತಿಗೆ ಆಯ್ಕೆಯಾದ ಕಾದಂಬರಿಕಾರರು ಮತ್ತು ಕಥೆಗಾರರು ಬಹುಮಾನ ವಿತರಣಾ ಸಮಾರಂಭದಲ್ಲಿ ತಪ್ಪದೇ ಭಾಗವಹಿಸಬೇಕು. ಸಮಾರಂಭದ ದಿನ ಬೆಳಿಗ್ಗೆ ನಡೆಯುವ ʻಕಥಾ-ಕಾದಂಬರಿ ಸಂವಾದ’ದಲ್ಲಿ ಭಾಗವಹಿಸುವುದು ಅಪೇಕ್ಷಣೀಯ.

ಕಥೆಗಳನ್ನು ಈ-ಮೇಲ್ ಮೂಲಕ (ನುಡಿ/ಯೂನಿಕೋಡ್ ಫಾಂಟ್ ಬಳಸಿ ಟೈಪ್ ಮಾಡಿದ ಪ್ರತಿ) [email protected] ಅಥವಾ ಹಸ್ತಪ್ರತಿಯನ್ನು ಹಾಗೂ ಕಾದಂಬರಿಗಳ ಸ್ಪರ್ಧಾ ವಿಭಾಗದವರು, ನಾಲ್ಕು ಪ್ರತಿಗಳನ್ನು ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ – ಕನ್ನಡ  ಪ್ರಧಾನ ಸಂಪಾದಕರು, ಬುಕ್ ಬ್ರಹ್ಮ ಕನ್ನಡ, ಮೂರನೇ ಮಹಡಿ, ಆರ್ ಕೆ ಕಾಂಪ್ಲೆಕ್ಸ್ ಕೆಎಸ್ಎಸ್ಐಡಿಸಿ ಕಾಂಪೌಂಡ್, ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ, ಬೆಂಗಳೂರು-560100 ಕ್ಕೆ ಕಳುಹಿಸಿಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 78926 08118.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *